ETV Bharat / bharat

ಕರ್ನಾಟಕ ಹೈಕೋರ್ಟ್​​​​ ನ್ಯಾಯಮೂರ್ತಿಗಳಾಗಿ ನೇಮಿಸಲು ನಾಲ್ವರ ಹೆಸರು ಶಿಫಾರಸು ಮಾಡಿದ  ಸುಪ್ರೀಂ

author img

By

Published : Oct 8, 2021, 3:26 PM IST

ಕರ್ನಾಟಕ ಹೈಕೋರ್ಟ್​​​​ನಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳಿಗಾಗಿ ಇದೀಗ ನಾಲ್ವರು ಹೆಸರು ಶಿಫಾರಸು ಮಾಡಿ ಸುಪ್ರೀಂಕೋರ್ಟ್ ಕೊಲಿಜಿಯಂ ಪತ್ರ ಬರೆದಿದೆ.

Karnataka High Court
Karnataka High Court

ನವದೆಹಲಿ: ಕರ್ನಾಟಕ ಹೈಕೋರ್ಟ್​​​​ನಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳಿಗೆ ನಾಲ್ವರು ವಕೀಲರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ಸುಪ್ರೀಂಕೋರ್ಟ್ ಕೊಲಿಜಿಯಂ ಪತ್ರ ಬರೆದಿದೆ. ಅಕ್ಟೋಬರ್​ ಆರರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Karnataka High Court
ನಾಲ್ವರ ಹೆಸರು ಸುಪ್ರೀಂನಿಂದ ಶಿಫಾರಸು

ಅನಂತ ರಾಮನಾಥ್ ಹೆಗ್ಡೆ, ಸಿದ್ಧಯ್ಯ ರಾಚಯ್ಯ, ಚಪ್ಪುದೀರ್​​​ ಮೊಣ್ಣಪ್ಪ ಪೂಣಚ್ಚ ಹಾಗೂ ಕನ್ನಂಕುಜಿಲ್​ ಶ್ರೀಧರನ್​ ಹೇಮಲೇಖಾ ಅವರ ಹೆಸರನ್ನ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿರಿ: ಮಕ್ಕಳ ಕಳ್ಳಿ ಎಂದು ಭಿಕ್ಷೆ ಬೇಡುತ್ತಿದ್ದ ಮಹಿಳೆ ಮೇಲೆ ಅಮಾನವೀಯ ಹಲ್ಲೆ.. ವಿಡಿಯೋ ವೈರಲ್​

ಅಕ್ಟೋಬರ್​​ 6ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಕ್ಟೋಬರ್​​ 1, 2021ರ ಹೊತ್ತಿಗೆ ಕರ್ನಾಟಕ ಹೈಕೋರ್ಟ್​​ 45 ನ್ಯಾಯಾಧೀಶರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಇದರ ಒಟ್ಟು ಬಲ 62 ಇರಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.