ETV Bharat / bharat

ಇಡಿ ವಿರೋಧದ ನಡುವೆ ಸಂಜಯ್​ ರಾವುತ್​​ಗೆ ಜಾಮೀನು

author img

By

Published : Nov 9, 2022, 3:54 PM IST

ಪತ್ರಾ ಚಾಲ್​ ಪುನರಾಭಿವೃದ್ಧಿ ಯೋಜನೆಯಲ್ಲಿನ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ಸಾಮ್ನಾ ಪತ್ರಿಕೆ ಸಂಪಾದಕರನ್ನು ಕಳೆದ ಜುಲೈನಲ್ಲಿ ಬಂಧಿಸಿತ್ತು

ಇಡಿ ವಿರೋಧದ ನಡುವೆ ಸಂಜಯ್​ ರಾವತ್​​ಗೆ ಜಾಮೀನು
Sanjay Rawat granted bail amid ED opposition

ಮುಂಬೈ: ಪತ್ರಾ ಚಾಲ್​ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ನಾಯಕ ಮತ್ತು ರಾಜ್ಯ ಸಭಾ ಸಂಸದ ಸಂಜಯ್​ ರಾವುತ್​​ಗೆ ಪಿಎಂಎಲ್​ಎ ನ್ಯಾಯಾಲಯ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣ ಆಲಿಸಿದ ​ವಿಶೇಷ ನ್ಯಾಯಾಮೂರ್ತಿ ಎಂಜಿ ದೇಶಾಪಾಂಡೆ ಅವರಿಗೆ ಜಾಮೀನು ನೀಡಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಕಳೆದ 101 ದಿನಗಳಿಂದ ಸೆರೆವಾಸದಲ್ಲಿದ್ದರು.

ಪತ್ರಾ ಚಾಲ್​ ಪುನರಾಭಿವೃದ್ಧಿ ಯೋಜನೆಯಲ್ಲಿನ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ಸಾಮ್ನಾ ಪತ್ರಿಕೆ ಸಂಪಾದಕರನ್ನು ಕಳೆದ ಜುಲೈನಲ್ಲಿ ಬಂಧಿಸಿತ್ತು. ಪ್ರಕರಣ ಸಂಬಂಧ ಜಾಮೀನು ಅರ್ಜಿ ಸಲ್ಲಿಸಿದ್ದ ಕ್ರಮವನ್ನು ಇಡಿ ವಿರೋಧಿಸಿತ್ತು.

ಪ್ರಸ್ತುತ ರಾವ್​ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ಮುಂಬೈನ ಆರ್ಥರ್​ ​ ರಸ್ತೆಯ ಜೈಲಿನಲ್ಲಿ ಇರಿಸಲಾಗಿದೆ. ಅಧಿಕಾರ ದುರ್ಬಳಕೆ ಮತ್ತು ರಾಜಕೀಯ ದ್ವೇಷಕ್ಕೆ ತಾವು ಬಲಿಯಾಗಿರುವುದಾಗಿ ರಾವುತ್​​​ ಜಾಮೀನು ಮನವಿಯಲ್ಲಿ ಉಲ್ಲೇಖಿಸಿದ್ದರು.

ಪತ್ರಾ ಚಾಲ್​ ಪುನರಾಭಿವೃದ್ಧಿ ಯೋಜನೆಯಲ್ಲಿ ಹಣಕಾಸಿನ ವರ್ಗಾವಣೆಯಲ್ಲಿ ರಾವುತ್​​​ ಹೆಂಡತಿ ಮತ್ತು ಸಹಚರರು ಭಾಗಿಯಾಗಿದ್ದಾರೆ. ಇದರಲ್ಲಿ ಅಕ್ರಮ ಹಣದ ವಹಿವಾಟು ನಡೆದಿದೆ ಎಂದು ಇಡಿ ತನಿಖೆ ಆರಂಭಿಸಿತು.

ಇದನ್ನೂ ಓದಿ: ಜೈಲಿನಲ್ಲಿಯೂ ಓದು ಬರಹ ಮುಂದುವರೆಸಿದ ಸಂಜಯ್ ರಾವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.