ETV Bharat / bharat

ರಾಜ್ಯಪಾಲರು ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ: ನಾವು ಕೋರ್ಟ್​​​ನಲ್ಲಿ ಪ್ರಶ್ನಿಸುತ್ತೇವೆ ಎಂದ ರಾವುತ್​

author img

By

Published : Jun 29, 2022, 11:12 AM IST

ನಾವು ರಾಜ್ಯಪಾಲರ ಆದೇಶದ ವಿರುದ್ಧ ಕೋರ್ಟ್​ಗೆ ಹೋಗುತ್ತೇವೆ, ನ್ಯಾಯಕ್ಕಾಗಿ ಒತ್ತಾಯಿಸುತ್ತೇವೆ ಎಂದು ಸಂಜಯ್​ ರಾವುತ್​ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯಪಾಲರು ರಫೇಲ್​ ವೇಗಕ್ಕಿಂತಲೂ ಹೆಚ್ಚಿನ ಸ್ಪೀಡ್​ನಲ್ಲಿ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾವುತ್​ ಆರೋಪಿಸಿದ್ದಾರೆ

SANJAY RAUT ON GOVERNORS FLOOR TEST LETTER TO CM MAHARASHTRA
ರಾಜ್ಯಪಾಲರು ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ: ನಾವು ಕೋರ್ಟ್​​​ನಲ್ಲಿ ಪ್ರಶ್ನಿಸುತ್ತೇವೆ ಎಂದ ರಾವುತ್​

ಮುಂಬೈ: ರಾಜ್ಯಪಾಲರು ಮತ್ತು ಬಿಜೆಪಿ ಸೇರಿ ಸಂವಿಧಾನ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್​ ರಾವುತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಸೇನಾ ಶಾಸಕರ ಬಂಡಾಯದ ಹಿನ್ನೆಲೆಯಲ್ಲಿ ನಾಳೆ ಸದನದಲ್ಲಿ ಸರ್ಕಾರದ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಸಿಎಂ ಉದ್ದವ್​ ಠಾಕ್ರೆಗೆ ಪತ್ರ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಶಿವಸೇನಾ ವಕ್ತಾರರೂ ಆಗಿರುವ ಸಂಜಯ್​ ರಾವತ್​, ನಾವು ರಾಜ್ಯಪಾಲರ ಆದೇಶದ ವಿರುದ್ಧ ಕೋರ್ಟ್​ಗೆ ಹೋಗುತ್ತೇವೆ, ನ್ಯಾಯಕ್ಕಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯಪಾಲರು ರಫೇಲ್​ ವೇಗಕ್ಕಿಂತಲೂ ಹೆಚ್ಚಿನ ಸ್ಪೀಡ್​ನಲ್ಲಿ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾವುತ್​ ಆರೋಪಿಸಿದ್ದಾರೆ

ರಾಜ್ಯಪಾಲರ ನಿರ್ಧಾರ ವಿರೋಧಿಸಿದ ಕಾಂಗ್ರೆಸ್​: ಸಿಎಂಗೆ ರಾಜ್ಯಪಾಲರು ಬರೆದ ಪತ್ರದ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಮಾತನಾಡಿದ್ದು, ರಾಜ್ಯಪಾಲರ ಆದೇಶದಂತೆ ನಾಳೆ ವಿಶ್ವಾಸಮತ ಯಾಚನೆ ನಡೆಯಲಿದೆ. ಆದರೆ, ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಜುಲೈ 11 ರವರೆಗೆ ಸುಪ್ರೀಂಕೋರ್ಟ್ ಈ ವಿಷಯದ ಕುರಿತು ಯಥಾಸ್ಥಿತಿ ಕಾಪಾಡುವಂತೆ ಹೇಳಿದೆ. ಈ ನಡುವೆ ರಾಜ್ಯಪಾಲರು ವಿಶ್ವಾಸಮತ ಸಾಬೀತು ಮಾಡುವಂತೆ ಸಿಎಂಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಇದು ಸುಪ್ರೀಂ ಆದೇಶದ ಉಲ್ಲಂಘನೆ ಆಗಲಿದೆ. ಹೀಗಾಗಿ ಈ ಬಗ್ಗೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದು ಚೌಹಾಣ್​ ಹೇಳಿದ್ದಾರೆ.

ಈ ನಡುವೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬುಧವಾರ ಎಂವಿಎ ನಾಯಕರ ಸಭೆ ಕರೆದಿದ್ದು, ರಾಜ್ಯಪಾಲರ ಪತ್ರದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಬಹುಮತ ಸಾಬೀತಿಗೆ ರಾಜ್ಯಪಾಲರಿಂದ ಸಿಎಂಗೆ ಪತ್ರ.. ಇತ್ತ ಕಾಮಾಖ್ಯ ದೇವಿ ದರ್ಶನ ಪಡೆದ ಶಿಂದೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.