ETV Bharat / bharat

12 ಕೋಟಿ ರೂ ಮೌಲ್ಯದ ಮೊಬೈಲ್​ ಕದ್ದ ದರೋಡೆಕೋರರು.. ಸಿನಿಮೀಯ ರೀತಿ ಚೇಸ್ ಮಾಡಿದ ಪೊಲೀಸರು

author img

By

Published : Aug 27, 2022, 4:12 PM IST

12 ಕೋಟಿ ರೂ ಮೌಲ್ಯದ ಮೊಬೈಲ್​ ಕದ್ದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Robbers loot mobile phones
Robbers loot mobile phones

ಸಾಗರ್​​​(ಮಧ್ಯಪ್ರದೇಶ): ಅಂತಾರಾಷ್ಟ್ರೀಯ ದರೋಡೆಕೋರರ ಗ್ಯಾಂಗ್​​ವೊಂದು ಮೊಬೈಲ್​ ತುಂಬಿಕೊಂಡು ಹೊರಟಿದ್ದ ಕಂಟೈನರ್​​ ತಡೆದು, 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್​​ ದರೋಡೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೃತ್ಯ ನಡೆದ ಕೇವಲ 24 ಗಂಟೆಯೊಳಗೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊಬೈಲ್​ ಫೋನ್​ಗಳ ಬಾಕ್ಸ್​​​​ ತುಂಬಿಕೊಂಡು ತಮಿಳುನಾಡಿನಿಂದ ಹರಿಯಾಣದ ಗುರುಗ್ರಾಮಕ್ಕೆ ಕಂಟೈನರ್​​ ಹೊರಟಿತ್ತು. ಈ ವೇಳೆ, ಮಧ್ಯಪ್ರದೇಶದ ಸಾಗರ್​ ಎಂಬಲ್ಲಿ ನಾಲ್ವರು ದರೋಡೆಕೋರರು ಕಳ್ಳತನ ಮಾಡಿದ್ದಾರೆ. 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್​ ಬಾಕ್ಸ್​​ಗಳನ್ನು ಇನ್ನೊಂದು ಲಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು. ಇದರ ಬಗ್ಗೆ ಮಾಹಿತಿ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕಳ್ಳರಿಗೆ ಬಲೆ ಬೀಸಿದ್ದರು. ಗಡಿ ಜಿಲ್ಲೆ ಹಾಗೂ ಇತರೆ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಈ ವೇಳೆ ಮಧ್ಯಪ್ರದೇಶದ ಇಂದೋರ್​​​ನ ಶಿಪ್ರಾ ಎಂಬಲ್ಲಿ ವಾಹನ ತಪಾಸಣೆ ವೇಳೆ ಲಾರಿ ಸಿಕ್ಕಿಬಿದ್ದಿದೆ. ಇದರ ಬೆನ್ನಲ್ಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಲಾರಿ ಅಡ್ಡಗಟ್ಟಿ 6 ಕೋಟಿ ರೂ. ಮೌಲ್ಯದ ಮೊಬೈಲ್​ಗಳ ಕಳ್ಳತನ: ಖದೀಮರಿಗೆ ಬಲೆ ಬೀಸಿದ ಪೊಲೀಸರು

ಘಟನೆಯ ಸಂಪೂರ್ಣ ವಿವರ: ಆಗಸ್ಟ್​​​​ 25ರಂದು ಮಧ್ಯಾಹ್ನ 1 ಗಂಟೆಗೆ ಪ್ರತಿಷ್ಠಿತ ಕಂಪನಿಯ ಮೊಬೈಲ್​ ತುಂಬಿಕೊಂಡು ತಮಿಳುನಾಡಿನಿಂದ ಗುರುಗ್ರಾಮಗೆ ಕಂಟೈನರ್​​​ ತೆರಳುತ್ತಿತ್ತು. ಈ ವೇಳೆ ಮಹಾರಾಜಪುರದಿಂದ ನಗರ ತಿರಹಾ ನಡುವಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದರೋಡೆಕೋರರು ತಡೆದು, ಮೊಬೈಲ್​​ ಕದ್ದಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸಿನಿಮೀಯ ರೀತಿಯಲ್ಲಿ ತನಿಖೆ ಆರಂಭಿಸಿರುವ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ.

ಇದರ ಬೆನ್ನಲ್ಲೇ ಇಂದೋರ್​ ಬಳಿಯ ಶಿಪ್ರಾ ಬಳಿಕ ಕದ್ದ ಸರಕುಗಳ ವಾಹನ ಪತ್ತೆಯಾಗಿದ್ದು, ಆರೋಪಿಗಳು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೊಬೈಲ್​​ ತುಂಬಿದ್ದ ಕಂಟೈನರ್​​​ ಅನ್ನು ಪಶ್ಚಿಮ ಬಂಗಾಳದ ಚಾಲಕ ಮಿಥುನ್​ ಎಂಬಾತ ತೆಗೆದುಕೊಂಡು ಹೋಗುತ್ತಿದ್ದನು. ಘಟನೆಗೆ ಸಂಬಂಧಿಸಿದಂತೆ ಗೌರ್ಜಾಮರ್​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.