ETV Bharat / bharat

ಬಸ್ ​ ​- ಟ್ರಕ್​ ನಡುವೆ ಭೀಕರ ಅಪಘಾತ.. ಆರು ಮಂದಿ ದುರ್ಮರಣ, 16 ಜನರ ಸ್ಥಿತಿ ಗಂಭೀರ

author img

By

Published : Dec 1, 2021, 8:02 PM IST

ಬಸ್​​ - ಟ್ರಕ್​ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾಗಿದ್ದು, 16 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಬೆತುಲ್​​ದಲ್ಲಿ ನಡೆದಿದೆ.

Madhy pradesh Road Accident
Madhy pradesh Road Accident

ಬೆತುಲ್​​(ಮಧ್ಯಪ್ರದೇಶ): ಮಧ್ಯಪ್ರದೇಶದ ಬೆತುಲ್​​ದಲ್ಲಿ ಬಸ್​​ - ಟ್ರಕ್​ ನಡುವೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 16 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಭಿಂಡ್​ನಲ್ಲಿ ನಡೆದಿರುವ ಮತ್ತೊಂದು ಅಪಘಾತದಲ್ಲಿ 12ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Madhy pradesh Road Accident
ಬಸ್​​​-ಟ್ರಕ್​ ನಡುವೆ ಭೀಕರ ಅಪಘಾತ

ಬೆತುಲ್​ ಜಿಲ್ಲೆಯ ಮುಲ್ತಾಯಿ - ಪ್ರಭಾತಪಟ್ಟಣ ರಸ್ತೆಯಲ್ಲಿ ಟ್ರಕ್​​-ಬಸ್​​ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಆರು ಜನರು ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಖಾಸಗಿ ಬಸ್​ ಹಾಗೂ ಟ್ರಕ್​ ಮುಖಾಮುಖಿ ಡಿಕ್ಕಿಯಾಗಿವೆ. ಘಟನೆ ನಡೆಯುತ್ತಿದ್ದಂತೆ ಗ್ರಾಮಸ್ಥರು ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದು, ಇದರಲ್ಲಿ ಆರು ಮಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. ಮೃತರಲ್ಲಿ ಬಸ್​ ಚಾಲಕ ಸಹ ಸೇರಿಕೊಂಡಿದ್ದಾನೆ. ಜೊತೆಗೆ ಓರ್ವ ಮಗು ಹಾಗೂ ಮಹಿಳೆ ಕೂಡ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಭಿಂಡ್​​ನಲ್ಲೂ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

Madhy pradesh Road Accident
ಆರು ಮಂದಿ ದುರ್ಮರಣ, 16 ಜನರ ಸ್ಥಿತಿ ಗಂಭೀರ

ಇದನ್ನೂ ಓದಿರಿ: ಮಹಿಳಾ ಕಾನ್ಸ್​ಟೇಬಲ್​ ​'ಪುರುಷ'ನಾಗಿ ಬದಲಾಗಲು ಅನುಮತಿ ನೀಡಿದ ರಾಜ್ಯ ಸರ್ಕಾರ

ಘಟನೆಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡುವಂತೆ ಬೆತುಲ್​ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.