ETV Bharat / bharat

ಸೇನೆ ಸೇರುವ ತವಕ: ತ್ರಿವರ್ಣ ಧ್ವಜ ಹಿಡಿದು ರಾಜಸ್ಥಾನದಿಂದ ದೆಹಲಿಗೆ ಓಡಿಬಂದ ಯುವಕ

author img

By

Published : Apr 6, 2022, 6:47 PM IST

'ಸೇನೆಗೆ ಸೇರುವುದು ನನ್ನ ಮಹದಾಸೆ. ಆದರೆ, 2 ವರ್ಷಗಳಿಂದ ನೇಮಕಾತಿ ನಡೆಯುತ್ತಿಲ್ಲ. ನಾಗೌರ್​, ಸಿಖಾರ್​ ಮತ್ತು ಜುಂಜುನುವಿನಲ್ಲಿ ಯುವಕರನ್ನು ಸೇನಾ ನೇಮಕಾತಿಗೆ ಪರಿಗಣಿಸದಿದ್ದರೆ ವಯಸ್ಸಿನ ಅರ್ಹತೆ ಮೀರುವ ಸಾಧ್ಯತೆ ಇದೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.

ಸುರೇಶ್ ಭಿಚಾರ್
ಸುರೇಶ್ ಭಿಚಾರ್

ನವದೆಹಲಿ: ಭಾರತೀಯ ಸೇನೆಗೆ ಸೇರಲು ಇಚ್ಛಿಸಿ ರಾಜಸ್ಥಾನದ ಸಿಖಾರ್‌ನ ಯುವಕನೊಬ್ಬ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ 50 ಗಂಟೆಗಳಲ್ಲಿ 300 ಕಿ.ಮೀ ದೂರ ಓಡಿ ಗಮನ ಸೆಳೆದಿದ್ದಾನೆ. ಸುರೇಶ್ ಭಿಚಾರ್ (24) ಮಾರ್ಚ್ 29 ರಂದು ರಾತ್ರಿ 9 ಗಂಟೆಗೆ ಸಿಖಾರ್ ಜಿಲ್ಲಾ ಕ್ರೀಡಾಂಗಣದಿಂದ ಓಡಲು ಪ್ರಾರಂಭಿಸಿದ್ದು, ಏಪ್ರಿಲ್ 2ರಂದು ಸಂಜೆ 6 ಗಂಟೆಗೆ ದೆಹಲಿಗೆ ತಲುಪಿದ್ದಾರೆ. ದೆಹಲಿಯಲ್ಲಿ ಸಂಸದ ಹನುಮಾನ್ ಬೇನಿವಾಲ್ ಭೇಟಿಯಾಗಿ ಸೇನಾ ನೇಮಕಾತಿಯಲ್ಲಿನ ವಿಳಂಬದ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾನೆ.

'ಸೇನೆ ಸೇರುವುದು ನನ್ನ ಮಹದಾಸೆ. ಆದರೆ, 2 ವರ್ಷಗಳಿಂದ ನೇಮಕಾತಿ ನಡೆಯುತ್ತಿಲ್ಲ. ನಾಗೌರ್​, ಸಿಖಾರ್​ ಮತ್ತು ಜುಂಜುನುವಿನಲ್ಲಿ ಯುವಕರನ್ನು ಸೇನಾ ನೇಮಕಾತಿಗೆ ಪರಿಗಣಿಸದಿದ್ದರೆ ವಯಸ್ಸಿನ ಅರ್ಹತೆಯ ಮಾನದಂಡವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಯುವಕರ ಉತ್ಸಾಹ ಹೆಚ್ಚಿಸಲು ದೆಹಲಿಗೆ ಓಡಿ ಬಂದಿದ್ದೇನೆ' ಎಂದು ಯುವಕ ಹೇಳಿದ್ದಾನೆ.

2015 ರಿಂದಲೇ ಸೇನೆ ಸೇರಲು ಉತ್ಸುಕರಾಗಿದ್ದ ಸುರೇಶ್, ಸಿಖಾರ್‌ನಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಆದರೆ, ಕೆಲವು ಕಾರಣಗಳಿಂದಾಗಿ ಅವರ ಕನಸಿನ್ನೂ ಅಪೂರ್ಣವಾಗಿದೆ. ಇದೀಗ ಸುರೇಶ್ ಓಟವು ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಚರ್ಚೆಯ ವಿಷಯವಾಗಿದೆ. ಇದಕ್ಕೂ ಮುನ್ನ 2018ರಲ್ಲಿ ನಾಗೌರ್‌ನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಸುರೇಶ್ 1600 ಮೀಟರ್ ಓಟವನ್ನು 4 ನಿಮಿಷ 4 ಸೆಕೆಂಡುಗಳಲ್ಲಿ ಮುಗಿಸಿ ದಾಖಲೆ ಬರೆದಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಿಬಿಐ ವಶಕ್ಕೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.