ETV Bharat / bharat

ರಾಂಚಿಯಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆ ಅನಾವರಣ ಮಾಡಿದ ಮೋದಿ

author img

By

Published : Nov 15, 2021, 10:37 AM IST

Updated : Nov 15, 2021, 10:42 AM IST

ಬಿರ್ಸಾ ಮುಂಡಾ ಅವರ ಜನ್ಮದಿನವನ್ನು 'ಜಂಜಾಟಿಯ ಗೌರವ್ ದಿವಸ್' ಎಂದು ಸಹ ಆಚರಿಸಲಾಗುತ್ತಿದೆ. 34 ಎಕರೆ ಪ್ರದೇಶದಲ್ಲಿ ಬಿರ್ಸಾ ಮುಂಡಾ ಮ್ಯೂಸಿಯಂ ಮತ್ತು ಮೆಮೋರಿಯಲ್ ಪಾರ್ಕ್ ಅನ್ನು 142 ಕೋಟಿ ರೂ ವೆಚ್ಚದಲ್ಲಿ ಮಾಡಲಾಗಿದೆ.

ರಾಂಚಿಯಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆ ಅನಾವರಣ ಮಾಡಲಿರುವ ಮೋದಿ
ರಾಂಚಿಯಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆ ಅನಾವರಣ ಮಾಡಲಿರುವ ಮೋದಿ

ರಾಂಚಿ: ಬ್ರಿಟಿಷರ ವಿರುದ್ಧ ದಂಗೆಯ ನೇತೃತ್ವ ವಹಿಸಿದ್ದ ಅಪ್ರತಿಮ ಬುಡಕಟ್ಟು ನಾಯಕ ಬಿರ್ಸಾ ಮುಂಡಾ(Birsa Munda) ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅನಾವರಣ ಮಾಡಿದರು.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್(Hemant Soren ) ರಾಂಚಿಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನಿ ಮೋದಿ ಭೋಪಾಲ್ ತಲುಪಿದ್ದು , ಅಲ್ಲಿಂದ ರಾಂಚಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಕಾರ್ಯಕ್ರಮ ನೆರವೇರಿಸಿದರು.

ರಾಂಚಿಯಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆ ಅನಾವರಣ ಮಾಡಿದ ಮೋದಿ
ರಾಂಚಿಯಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆ ಅನಾವರಣ ಮಾಡಿದ ಮೋದಿ

ಜಾರ್ಖಂಡ್ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ ಮೀಡಿಯಾ ವಿಂಗ್ ಇನ್ ಚಾರ್ಜ್ ಅಶುತೋಷ್ ಸಿಂಗ್ ಮಾತನಾಡಿ, ಇದು ಜಾರ್ಖಂಡ್ ಮಾತ್ರವಲ್ಲದೇ ಈಶಾನ್ಯ ಭಾರತಕ್ಕೂ ಪರಂಪರೆಯಾಗಲಿದೆ. ಅಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಹೊಸ ಪೀಳಿಗೆಗೆ ಪ್ರಸ್ತುತಪಡಿಸಲಾಗುತ್ತದೆ ಎಂದಿದ್ದಾರೆ.

ರಾಂಚಿಯಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆ ಅನಾವರಣ ಮಾಡಿದ ಮೋದಿ
ರಾಂಚಿಯಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆ ಅನಾವರಣ ಮಾಡಿದ ಮೋದಿ

ಇದನ್ನೂ ಓದಿ: COP-26 ಸಮ್ಮೇಳನದ ಒಪ್ಪಂದ 'ನಿರಾಸೆಯಿಂದ ಕೂಡಿದೆ'; ಭಾರತ- ಚೀನಾ ವಿರುದ್ಧ ಜಾನ್ಸನ್ ಅಸಮಾಧಾನ

ಬಿರ್ಸಾ ಮುಂಡಾ ಅವರ ಜನ್ಮದಿನವನ್ನು 'ಜಂಜಾಟಿಯ ಗೌರವ್ ದಿವಸ್'(Janjatiya Gaurav Diwas) ಎಂದು ಸಹ ಆಚರಿಸಲಾಗುತ್ತದೆ. 34 ಎಕರೆ ಪ್ರದೇಶದಲ್ಲಿ ಬಿರ್ಸಾ ಮುಂಡಾ ಮ್ಯೂಸಿಯಂ ಮತ್ತು ಮೆಮೋರಿಯಲ್ ಪಾರ್ಕ್ ಅನ್ನು 142 ಕೋಟಿ ರೂ ವೆಚ್ಚದಲ್ಲಿ ಮಾಡಲಾಗಿದೆ.

ಭಗವಾನ್ ಬಿರ್ಸಾ ಮುಂಡಾ ಅವರು ಕೊನೆಯುಸಿರೆಳೆದ ಬ್ಯಾರಕ್‌ನಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಬಿರ್ಸಾ ಮುಂಡಾ ಮತ್ತು ಇತರ 13 ವೀರರ ಜೀವನ ಕಥೆಯ ಸಾಕ್ಷ್ಯಚಿತ್ರವನ್ನು ಸಹ ಇಲ್ಲಿ ತೋರಿಸಲಾಗುತ್ತಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಇದುವರೆಗೆ ಹತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ಈ ವಸ್ತುಸಂಗ್ರಹಾಲಯಗಳು ವಿವಿಧ ರಾಜ್ಯಗಳು ಮತ್ತು ಪ್ರದೇಶಗಳ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ಮುಂದಿನ ಪೀಳಿಗೆಗೆ ನೀಡುತ್ತದೆ.

Last Updated :Nov 15, 2021, 10:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.