ETV Bharat / international

COP-26 ಸಮ್ಮೇಳನದ ಒಪ್ಪಂದ 'ನಿರಾಸೆಯಿಂದ ಕೂಡಿದೆ'; ಭಾರತ- ಚೀನಾ ವಿರುದ್ಧ  ಜಾನ್ಸನ್ ಅಸಮಾಧಾನ

author img

By

Published : Nov 15, 2021, 9:57 AM IST

COP-26 ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸಮ್ಮೇಳನದ ಫಲಿತಾಂಶದ ಬಗ್ಗೆ ಕೆಲವು ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ .

COP-26 ಅಂತಾರಾಷ್ಟ್ರೀಯ ಒಪ್ಪಂದ
COP-26 ಅಂತಾರಾಷ್ಟ್ರೀಯ ಒಪ್ಪಂದ

ಲಂಡನ್, ಯುನೈಟೆಡ್ ಕಿಂಗ್‌ಡಮ್: ಗ್ಲಾಸ್ಗೋದಲ್ಲಿ ನಡೆದ ಯುಎನ್ ಸಿಒಪಿ 26 ಶೃಂಗಸಭೆಯಲ್ಲಿ ಹೈಡ್ರೋಕಾರ್ಬನ್‌ಗಳನ್ನು ಹಂತಹಂತವಾಗಿ ಹೊರಹಾಕಲು ಎಲ್ಲ ದೇಶಗಳು ಒಪ್ಪಿವೆ. ಆದರೆ, ಅದು "ನಿರಾಸೆಯಿಂದ ಕೂಡಿದೆ" ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ (British Prime Minister Boris Johnson) ಬೇಸರ ಹೊರಹಾಕಿದ್ದಾರೆ.

ಎರಡು ವಾರಗಳ ಮಾತುಕತೆಗಳ ನಂತರ ಜಾಗತಿಕ ತಾಪಮಾನಕ್ಕೆ(Global warming) ಸಂಬಂಧಿಸಿದಂತೆ ಸುಮಾರು 200 ರಾಷ್ಟ್ರಗಳು ಶನಿವಾರ ಜಾಗತಿಕ ಒಪ್ಪಂದಕ್ಕೆ ಸಹಿ ಹಾಕಿವೆ.

ಭಾರತ ಮತ್ತು ಚೀನಾ ಅಂತಿಮ ಶೃಂಗಸಭೆಯ ನಿರ್ಧಾರವನ್ನು ಸ್ವಾಗತ ಮಾಡಿವೆ. ಶೃಂಗಸಭೆಯ ಕೊನೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಭಾರತ ಪ್ರಸ್ತಾಪಿಸಿದ ಈ ಅಂಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ಮೂಲಕ ಇದೇ ಪ್ರಥಮ ಬಾರಿಗೆ ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುವ ಇಂಗಾಲದ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಯೋಜನೆಯೊಂದನ್ನು ರೂಪಿಸಿ ಅನುಮೋದಿಸಿದೆ.

ಶೃಂಗಸಭೆಯಲ್ಲಿ ಭಾರತದ ನಿಲುವು ತಿಳಿಸಿದ ಪರಿಸರ ಸಚಿವ ಭೂಪೇಂದರ್ ಯಾದವ್‌(Environment Minister Bhupender Yadav), ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ದಹನ ಇಂಧನವನ್ನು ಜವಾಬ್ದಾರಿಯಿಂದ ಹೇಗೆ ಬಳಸಬೇಕು ಎಂಬುದು ತಿಳಿದಿದೆ, ಬಡಜನರ ಜೀವನ ಮಟ್ಟ ಸುಧಾರಣೆಗಾಗಿ ಕಲ್ಲಿದ್ದಲನ್ನು ಮುಂದೆಯೂ ಬಳಸುವುದು ಅಗತ್ಯವಾಗಿದೆ. ಜೊತೆಗೆ ಅದರ ಬಳಕೆಯನ್ನು ಹಂತ ಹಂತವಾಗಿ ಮಿತಗೊಳಿಸಬೇಕಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ:ಎರಡು ತಿಂಗಳ ಹಿಂದೆಯೇ ವಾರ್ನರ್ ಬಗ್ಗೆ ಭವಿಷ್ಯವಾಣಿ ನುಡಿದಿದ್ದ ಫಿಂಚ್​

200ಕ್ಕೂ ಅಧಿಕ ದೇಶಗಳು ಪಾಲ್ಗೊಂಡ ಈ ಶೃಂಗಸಭೆ ಮುಂದಿನ ವರ್ಷ ಮತ್ತೆ ಸಭೆ ಸೇರಲು ಒಪ್ಪಿಕೊಂಡಿತು ಹಾಗೂ ಇಂಗಾಲದ ಹೊರಸೂಸುವ ಪ್ರಮಾಣವನ್ನು ತಗ್ಗಿಸಿ, ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೇ ಸೀಮಿತಗೊಳಿಸುವ ಗುರಿ ಈಡೇರಿಕೆಗೆ ಪ್ರಯತ್ನ ಮುಂದುವರಿಸಲು ವಾಗ್ದಾನ ಮಾಡಿವೆ.

ಭಾರತ ಚೀನಾ ವಿರುದ್ಧ ಜಾನ್ಸನ್​ ಪರೋಕ್ಷ ಅಸಮಾಧಾನ

ಈ ಸಂಬಂಧ ಜಾನ್ಸನ್ ಪ್ರತಿಕ್ರಿಯಿಸಿ, ಹವಾಮಾನ ಬದಲಾವಣೆಯು ಈಗಾಗಲೇ ಜೀವನ್ಮರಣದ ವಿಷಯವಾಗಿದೆ. ಅವರ ದ್ವೀಪಗಳು ಮುಳುಗಿದಾಗ ಮಾತ್ರ ನಿಲ್ಲಬಲ್ಲರು, ಅವರ ಕೃಷಿಭೂಮಿ ಮರುಭೂಮಿಯಾಗಿ ಮಾರ್ಪಟ್ಟಿದೆ, ಅವರ ಮನೆಗಳು ಚಂಡಮಾರುತದಿಂದ ಜರ್ಜರಿತವಾಗಿವೆ. ಅವರು ಈ ಶೃಂಗಸಭೆಯಿಂದ ಉನ್ನತ ಮಟ್ಟದ ಮಹತ್ವಾಕಾಂಕ್ಷೆಯನ್ನು ಕೋರಿದ್ದಾರೆ ಎಂದು ಭಾರತ ಮತ್ತು ಚೀನಾವನ್ನು ಹೆಸರಿಸದೇ ಜಾನ್ಸನ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ನಾವು ಲಾಬಿ ಮಾಡಬಹುದು, ಕ್ಯಾಜೋಲ್ ಮಾಡಬಹುದು, ಪ್ರೋತ್ಸಾಹಿಸಬಹುದು, ಆದರೆ, ಅವು ಸಾರ್ವಭೌಮ ರಾಷ್ಟ್ರಗಳು ಅದನ್ನು ಅವು ಮಾಡಲು ಬಯಸುವುದಿಲ್ಲ. ಈ ಹಿನ್ನೆಲೆ ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದು ಅಂತಿಮವಾಗಿ ಅವರ ನಿರ್ಧಾರವಾಗಿದೆ. ಹಾಗೆ ಅವರು ಅದಕ್ಕೆ ಸ್ಪಷ್ಟವಾಗಿ ನಿಲ್ಲಬೇಕು ಎಂದೂ ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.