ETV Bharat / bharat

ನಿಮ್ಮ ನಾಯಕನ ಬಗ್ಗೆ ತಿಳಿಯಿರಿ: ಯುವಪಡೆಯೊಂದಿಗೆ ಪ್ರಧಾನಿ ಮೋದಿ ಸಂವಾದ

author img

By

Published : Jan 24, 2023, 12:54 PM IST

ಯುವಪಡೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ - ನೇತಾಜಿ ಜನ್ಮದಿನದ ಹಿನ್ನೆಲೆ ಕಾರ್ಯಕ್ರಮ - ನೇತಾಜಿ ಕುರಿತು ದೇಶದ ಯುವಕರಿಂದ ಸೆಂಟ್ರಲ್​​ ಹಾಲ್​ನಲ್ಲಿ ಅಭಿಪ್ರಾಯ - ನಿಮ್ಮ ನಾಯಕನ ಬಗ್ಗೆ ತಿಳಿಯಿರಿ ಕಾರ್ಯಕ್ರಮ

pm-modi-interaction-with-youngsters
ಯುವಪಡೆಯೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ: ನೇತಾಜಿ ಸುಭಾಷ್​ಚಂದ್ರ ಬೋಸ್​ ಅವರ ಜನ್ಮದಿನದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಯುವಕರೊಂದಿಗೆ "ನಿಮ್ಮ ನಾಯಕನ ಬಗ್ಗೆ ತಿಳಿಯಿರಿ" ಎಂಬ ವಿಷಯದ ಕುರಿತಾಗಿ ಸಂವಾದ ಕಾರ್ಯಕ್ರಮ ನಡೆಸಿದರು. ಇವರ ವಿಡಿಯೋವನ್ನು ಪ್ರಧಾನಿಗಳೇ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಕ್ಕಳ ಪ್ರಶಸ್ತಿಗೆ ಭಾಜನರಾದ 11 ಮಕ್ಕಳನ್ನೂ ಭೇಟಿ ಮಾಡಿದರು.

  • Had a lively interaction with a group of youngsters from across the country who were a part of the ‘Know Your Leader’ programme. Here are highlights from this programme. pic.twitter.com/0MZRZ5L5lx

    — Narendra Modi (@narendramodi) January 24, 2023 " class="align-text-top noRightClick twitterSection" data=" ">

ಯುವಕರೊಂದಿಗೆ ನಡೆದ ಸಂವಾದದಲ್ಲಿ ನೇತಾಜಿ ಸುಭಾಷ್​ಚಂದ್ರ ಬೋಸ್​ ಅವರ ಜೀವನದ ವಿವಿಧ ಅಂಶಗಳನ್ನು ಮತ್ತು ಅವರಿಂದ ನಾವು ಕಲಿಯಬಹುದಾದ ವಿಷಯಗಳ ಬಗ್ಗೆ ವಿಸ್ತೃತವಾಗಿ ಪ್ರಧಾನಿಗಳು ಚರ್ಚಿಸಿದರು. ಸುಭಾಷ್​​ಚಂದ್ರ ಬೋಸ್​ ಅವರು ತಮ್ಮ ಜೀವನದಲ್ಲಿ ಯಾವ ರೀತಿಯ ಸವಾಲುಗಳನ್ನು ಎದುರಿಸಿದರು ಹೇಗೆ ಎದುರಿಸಿದರು ಎಂಬುದನ್ನು ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಲು ಪ್ರಯತ್ನಿಸಬೇಕು ಎಂದು ಅವರು ಇದೇ ವೇಳೆ ಸಲಹೆ ನೀಡಿದರು.

ಓದಿ: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿವಿಐಪಿ ಕೊಠಡಿಗೆ ಪ್ರವೇಶಿಸಲು ಯತ್ನಿಸಿದ್ದ ಯುವಕನ ಬಂಧನ

ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದಕ್ಕೆ ಸಂತಸ: ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಂವಾದ ನಡೆಸಲು. ಸೆಂಟ್ರಲ್​ ಹಾಲ್​ನಲ್ಲಿ ಕುಳಿತುಕೊಳ್ಳಲು ಅವಕಾಶ ಸಿಕ್ಕಿದ್ದಕ್ಕೆ ಯುವಕ, ಯುವತಿಯರು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮೂಲೆ ಮೂಲೆಗಳಿಂದ ಯುವಕರನ್ನು ಆಯ್ಕೆ ಮಾಡಲಾಗಿತ್ತು. ಹೀಗಾಗಿ ಇದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಕಾರ್ಯಕ್ರಮ ಎಂದು ಪ್ರಧಾನಿಗಳು ಬಣ್ಣಿಸಿದ್ದಾರೆ.

ಸಂವಾದಕ್ಕಾಗಿ 80 ಯುವಕರ ಆಯ್ಕೆ: ನಿಮ್ಮ ನಾಯಕನ ಬಗ್ಗೆ ತಿಳಿಯಿರಿ ಸಂವಾದ ಕಾರ್ಯಕ್ರಮಕ್ಕಾಗಿ ದೇಶದ ವಿವಿಧೆಡೆಯಿಂದ 80 ಯುವಕ, ಯುವತಿಯರನ್ನು ಆಯ್ಕೆ ಮಾಡಲಾಗಿತ್ತು. DIKSHA ಪೋರ್ಟಲ್ ಮತ್ತು MyGov ನಲ್ಲಿ ರಸಪ್ರಶ್ನೆಗಳನ್ನು ಒಳಗೊಂಡ ವಿಸ್ತೃತ, ವಸ್ತುನಿಷ್ಠ ಪ್ರಶ್ನೆಗಳು ಮತ್ತು ಅರ್ಹತೆ ಆಧಾರಿತ ವಿಧಾನದ ಮೂಲಕ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾಷಣ ಸ್ಪರ್ಧೆ, ನೇತಾಜಿಯವರ ಜೀವನ ಮತ್ತು ಕೊಡುಗೆ ಕುರಿತು ಸ್ಪರ್ಧೆ ನಡೆಸುವ ಮೂಲಕ ವಿಶ್ವವಿದ್ಯಾಲಯಗಳಿಂದಲೂ ಯುವಕರನ್ನು ಆರಿಸಲಾಗಿದೆ.

31 ಯುವಕರಿಗೆ ಮಾತನಾಡಲು ಅವಕಾಶ: ಇದಲ್ಲದೇ, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ನೇತಾಜಿ ಸುಭಾಷ್​ಚಂದ್ರ ಬೋಸ್​ ಅವರಿಗೆ ಪುಷ್ಟನಮನ ಕಾರ್ಯಕ್ರಮದಲ್ಲಿ ನೇತಾಜಿಯವರ ಕೊಡುಗೆಗಳ ಕುರಿತು ಮಾತನಾಡಲು 31 ಯುವಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಅವರು ಹಿಂದಿ, ಇಂಗ್ಲಿಷ್, ಸಂಸ್ಕೃತ, ಮರಾಠಿ ಮತ್ತು ಬಾಂಗ್ಲಾ ಭಾಷೆಗಳಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಂವಾದದ ವಿಡಿಯೋ ಮೋದಿ ಟ್ವೀಟ್​: ಇನ್ನು ಯುವಪಡೆಯೊಂದಿಗೆ ತಾವು ನಡೆಸಿದ ಸಂವಾದದ ಕುರಿತ ವಿಡಿಯೋಯೊಂದನ್ನು ಟ್ವೀಟ್​ ಮಾಡಿ ಹಂಚಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ್​​ ಮೋದಿ ಅವರು, ಉತ್ಸಾಹಭರಿತ ಸಮೂಹದೊಂದಿಗೆ ಸಂವಾದ ನಡೆಸಿದೆ ಎಂದು ಬರೆದುಕೊಂಡಿದ್ದಾರೆ.

ಓದಿ: ಹೈದರಾಬಾದ್ ಕೇಂದ್ರೀಯ​ ವಿವಿಯಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.