ETV Bharat / bharat

G 20 presidency: ಬ್ರೆಜಿಲ್​ನಲ್ಲಿ ಮುಂದಿನ ಜಿ20 ಸಭೆ.. ಅಧ್ಯಕ್ಷ ಲುಲಾ ಸಿಲ್ವಾಗೆ ದಂಡ ಹಸ್ತಾಂತರಿಸಿದ ಪ್ರಧಾನಿ ಮೋದಿ

author img

By ETV Bharat Karnataka Team

Published : Sep 10, 2023, 4:15 PM IST

ಪ್ರಧಾನಿ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಿಗೆ ಮುಂದಿನ ಜಿ 20 ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದರು. ಡಿಸೆಂಬರ್​ 1 ರಿಂದ ಬ್ರೆಜಿಲ್​ ಅಧಿಕೃತವಾಗಿ ಅಧ್ಯಕ್ಷ ಸ್ಥಾನವನ್ನು ಹೊರಲಿದೆ.

ಬ್ರೆಜಿಲ್​ನಲ್ಲಿ ಮುಂದಿನ ಜಿ20 ಸಭೆ
ಬ್ರೆಜಿಲ್​ನಲ್ಲಿ ಮುಂದಿನ ಜಿ20 ಸಭೆ

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಜಿ20 ಶೃಂಗಸಭೆಯು ಹಲವಾರು ಚರಿತ್ರೆಗಳನ್ನು ಸೃಷ್ಟಿಸಿದ್ದು, ಮುಂದಿನ ಶೃಂಗದ ಅಧ್ಯಕ್ಷತೆಯ ಹೊಣೆಯನ್ನು ಬ್ರೆಜಿಲ್​ ದೇಶಕ್ಕೆ ಹಸ್ತಾಂತರಿಸಲಾಗಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದಂಡವನ್ನು ಬ್ರೆಜಿಲ್​ ಅಧ್ಯಕ್ಷ ಲೂಯಿಸ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರಿಗೆ ನೀಡಿ, ಮುಂದಿನ ಅಧ್ಯಕ್ಷತೆಗೆ ಶುಭ ಕೋರಿದರು. ಬ್ರೆಜಿಲ್ ಅಧಿಕೃತವಾಗಿ ಈ ವರ್ಷದ ಡಿಸೆಂಬರ್ 1 ರಂದು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಲುಲಾ ಡ ಸಿಲ್ವಾ ಅವರು, ಜಿ20 ಶೃಂಗಸಭೆಯನ್ನು ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು. ಆರ್ಥಿಕತೆ ಬೆಳವಣಿಗೆಗೆ ಧ್ವನಿ ನೀಡುವ ಭಾರತದ ಪ್ರಯತ್ನಗಳಿಗೆ ಧನ್ಯವಾದಗಳು. ಸಾಮಾಜಿಕ ಸೇರ್ಪಡೆ, ಹಸಿವಿನ ವಿರುದ್ಧ ಹೋರಾಟ, ಶಕ್ತಿ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಜಿ20 ಶೃಂಗದ ಆದ್ಯತಾ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಶ್ಲಾಘಿಸಿದರು.

ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಉದಯೋನ್ಮುಖ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಬಗ್ಗೆ ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ, ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಬ್ರೆಜಿಲ್​ ಅಧ್ಯಕ್ಷ ಸಿಲ್ವಾ ಅವರು ಭಾರತಕ್ಕೆ ಆಗಮಿಸಿದಾಗ ಸ್ವಾಗತಿಸಿದ ಚಿತ್ರವನ್ನು ಪ್ರಧಾನಿ ಮೋದಿ ಅವರು ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಹಂಚಿಕೊಂಡಿದ್ದರು. 'ಅಧ್ಯಕ್ಷ ಲುಲಾ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗಿದೆ. ನಾನು ಅವರನ್ನು ಇತ್ತೀಚೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಭೇಟಿಯಾಗಿದ್ದೆ. ಜಿ 20 ಶೃಂಗಸಭೆಯಲ್ಲಿ ಅವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದರು.

ಈ ವರ್ಷದ ಆರಂಭದಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಬ್ರೆಜಿಲ್​ ಮತ್ತು ಭಾರತ ಬ್ರಿಕ್ಸ್​, ಐಬಿಎಸ್​ಎ, ಜಿ20, ಯುಎನ್​, ಡಬ್ಲ್ಯೂಟಿಒ ನಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಸದಸ್ಯ ರಾಷ್ಟ್ರಗಳಾಗಿವೆ. ಭಾರತ ಬ್ರೆಜಿಲ್ ಸಂಬಂಧಗಳನ್ನು 2006 ರಲ್ಲಿ ಉನ್ನತೀರಿಸಲಾಯಿತು. ಆ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸಲಾಯಿತು.

ಹಿಂದಿರುಗಿದ ಅಮೆರಿಕದ ಅಧ್ಯಕ್ಷ: ಜಿ20 ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ವಿಯೆಟ್ನಾಂ ಪ್ರವಾಸ ಕೈಗೊಂಡರು. ಇಂದು ಬೆಳಗ್ಗೆ ರಾಜಧಾನಿಯ ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ಬೈಡನ್ ಸೇರಿದಂತೆ ಇತರೆ ಜಿ20 ಪ್ರತಿನಿಧಿಗಳು ಗೌರವ ನಮನ ಸಲ್ಲಿಸಿದರು.

ಜೋ ಬೈಡನ್​​ ಅವರು ಅಮೆರಿಕ ಅಧ್ಯಕ್ಷರಾದ ನಂತರ ಭಾರತಕ್ಕೆ ನೀಡಿರುವ ಮೊದಲ ಭೇಟಿ ಇದಾಗಿತ್ತು. ಎರಡು ದಿನಗಳ ಶೃಂಗಸಭೆಯಲ್ಲಿ ಭಾಗವಹಿಸಲು ಶುಕ್ರವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದ ಅಧ್ಯಕ್ಷರು, ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಜಿ20 ಔತಣಕೂಟದಲ್ಲಿ ನಿತೀಶ್, ಸ್ಟಾಲಿನ್, ಮಮತಾ ಭಾಗಿ; ಗೆಹ್ಲೋಟ್​, ಕೇಜ್ರಿವಾಲ್ ಗೈರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.