ETV Bharat / bharat

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರು ಟಿಎಸ್​ಪಿಎಸ್​ಸಿ ಅಧಿಕಾರಿಗಳಿಗೆ ಇಡಿ ಸಮನ್ಸ್​

author img

By

Published : Apr 12, 2023, 12:56 PM IST

ಸಹಾಯಕ ಇಂಜಿನಿಯರಿಂಗ್​ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಈಗಾಗಲೇ ಎಸ್​ಐಟಿ ಹಲವರನ್ನು ಬಂಧಿಸಿದೆ.

paper-leak-case-ed-summons-to-two-tspsc-officials
paper-leak-case-ed-summons-to-two-tspsc-officials

ಹೈದರಾಬಾದ್​: ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ (ಟಿಎಸ್​ಪಿಎಸ್​ಸಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ಪತ್ತೆಗೆ ತನಿಖೆ ಚುರುಕುಗೊಂಡಿದೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಬ್ಬರು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದ್ದಾರೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

ಟಿಎಸ್​ಪಿಎಸ್​ಸಿಯ ಇಬ್ಬರು ಅಧಿಕಾರಿಗಳನ್ನು ಬುಧವಾರ ಮತ್ತು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ. ಬಿಗಿ ಭದ್ರತೆ, ಕಣ್ಗಾವಲಿನ ಮಧ್ಯೆ ಪತ್ರಿಕೆ ಸೋರಿಕೆ ಆಗಿರುವ ಹಿನ್ನೆಲೆ ಏಜೆನ್ಸಿ ಟಿಎಸ್​ಪಿಎಸ್​ಸಿ ಗೌಪ್ಯ ವಿಭಾಗದ ಅಧಿಕಾರಗಳಾದ ಶಂಕರ ಲಕ್ಷ್ಮಿ ಮತ್ತು ಮತ್ತೊಬ್ಬ ಅಧಿಕಾರಿ ಸತ್ಯನಾರಾಯಣ ಅವರಿಗೆ ಸಮನ್ಸ್​ ಜಾರಿ ಮಾಡಿದೆ. ಅಲ್ಲದೇ, ಏಜೆನ್ಸಿ ಈ ಪ್ರಕರಣದ ಕುರಿತು ಎಲ್ಲ ಮಾಹಿತಿಗಳನ್ನು ನೀಡುವಂತೆ ಹೈದರಾಬಾದ್​ ಪೊಲೀಸ್​ನ ವಿಶೇಷ ತನಿಖಾ ತಂಡ (ಎಸ್​ಐಟಿ)ಗೆ ಸೂಚನೆ ನೀಡಿದೆ. ಈಗಾಗಲೇ ಈ ಪ್ರಕರಣದಲ್ಲಿ ಇಡಿ ಸಮನ್ಸ್​ ಜಾರಿ ಮಾಡಿರುವ ಟಿಎಸ್​ಪಿಎಸ್​ಸಿಯ ಇಬ್ಬರು ಅಧಿಕಾರಿಗಳು ಸೇರಿದಂತೆ ಅನೇಕ ಮಂದಿಯನ್ನು ಎಸ್​ಐಟಿ ಬಂಧಿಸಿದೆ.

ಎಸ್​ಐಟಿ ತನಿಖೆ: ತನಿಖೆಯ ಭಾಗವಾಗಿ ಇಡಿ ಕೂಡ ಇದೀಗ ಬಂಧನದಲ್ಲಿರುವ ಇಬ್ಬರು ಅಧಿಕಾರಿಗಳ ವಿಚಾರಣೆ ನಡೆಸಲು ಮುಂದಾಗಿದ್ದು, ಈ ಸಂಬಂಧ ಕೋರ್ಟ್​​ಗೆ ಅವಕಾಶ ನೀಡುವಂತೆ ಕೋರಿದೆ. ಪೇಪರ್ ಸೋರಿಕೆ ಪ್ರಕರಣವು ಟಿಎಸ್​ಪಿಎಸ್​ಸಿ ಯಲ್ಲಿನ ಡೇಟಾ ಉಲ್ಲಂಘನೆಗೆ ಸಂಬಂಧಿಸಿದೆ. ಈ ಸಂಬಂಧ ಹೈದರಾಬಾದ್ ಪೊಲೀಸರ ವಿಶೇಷ ತನಿಖಾ ತಂಡವು ಈಗಾಗಲೇ ಟಿಎಸ್​ಪಿಎಸ್​ಸಿ ಅಧ್ಯಕ್ಷರ ಹೇಳಿಕೆಯನ್ನು ದಾಖಲಿಸಿದ್ದಾರೆ.

ಈ ಮುಂಚೆ, ತೆಲಂಗಾಣ ಉಚ್ಛ ನ್ಯಾಯಾಲಯ ಕೂಡ ಆಯೋಗದ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆಯ ವರದಿಯ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುವಂತೆ ಎಸ್​ಐಟಿಗೆ ಸೂಚಿಸಿತು. ಈ ಪ್ರಶ್ನಾ ಪತ್ರಿಕೆ ಸೋರಿಕೆಯ ವಿರುದ್ಧ ಅನೇಕರು ಕಾಳಜಿ ವ್ಯಕ್ತಪಡಿಸಿದ್ದು, ಉದ್ಯೋಗ ನಿರೀಕ್ಷೆಯಲ್ಲಿದ್ದ ಅನೇಕರಲ್ಲಿ ಕಳವಳಕ್ಕೆ ಕಾರಣವಾಗಿದೆ. ಈ ಸಂಬಂಧ ಈಗಾಗಲೇ ಎನ್​ಎಸ್​ಯುಐ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿದೆ.

ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ ಪೇಪರ್ ಸೋರಿಕೆಯಾದ ಪರಿಣಾಮವಾಗಿ ಈಗಾಗಲೇ ಎಸ್​ಐಟಿ ತನಿಖೆ ಮುಂದಾಗಿದ್ದು, ಇದರ ಜೊತೆಗೆ ರಾಜ್ಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ನಡೆಸಿದೆ. ಈ ಹಿನ್ನೆಲೆ ಇದೀಗ ತೆಲಂಗಾಣದಲ್ಲಿ ಗ್ರೂಪ್ 1 ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.

ಏನಿದು ಪ್ರಕರಣ?: ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಇಂಜಿನಿಯರಿಂಗ್​ ಹುದ್ದೆಗಳ ಭರ್ತಿಗೆ ಮುಂದಾಗಿತ್ತು. ಒಟ್ಟು 837 ಹುದ್ದೆ ನೇಮಕಾತಿಗೆ ಕಳೆದ ತಿಂಗಳು ಮಾರ್ಚ್​ನಲ್ಲಿ ಸಹಾಯಕ ಎಂಜಿನಿಯರ್​ ಪರೀಕ್ಷೆಗೆ ಮುಂದಾಗಿತ್ತು. ಈ ವೇಳೆ, ಪತ್ರಿಕೆ ಸೇರಿಕೆಯಾದ ಹಿನ್ನೆಲೆ ಈ ಪರೀಕ್ಷೆಯನ್ನು ರದ್ದು ಪಡಿಸಿದ್ದು, ಮರು ಪರೀಕ್ಷೆ ನಡೆಸಲು ಆಯೋಗ ಪ್ರಕಟಣೆ ಹೊರಡಿಸಿತು.

ಈ ಪತ್ರಿಕೆ ಸೋರಿಕೆಯಾದ ಬೆನ್ನಲ್ಲೇ ಅನೇಕ ವಿದ್ಯಾರ್ಥಿ ಸಂಘಟನೆಗಳು ರಾಜ್ಯದಲ್ಲಿ ಪ್ರತಿಭಟನೆಯನ್ನು ನಡೆಸಿದವು. ವಿದ್ಯಾರ್ಥಿಗಳು ಈ ಉದ್ಯೋಗ ಸಿಗುವ ಭರವಸೆಯಲ್ಲಿ ಕಷ್ಟಪಟ್ಟು ಓದಿರುತ್ತಾರೆ. ಆದರೆ, ಈ ಉದ್ಯೋಗಗಳನ್ನು ಕೆಲವರು ಮಾರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಸೋರಿಕೆಯ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: 'ನಿವೃತ್ತಿಗೂ ಒಂದು ದಿನ ಮುನ್ನ ಘೋಷಣೆಯಾಗುವ ವಾರ್ಷಿಕ ವೇತನ ಹೆಚ್ಚಳಕ್ಕೆ ನೌಕರರು ಅರ್ಹ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.