ETV Bharat / bharat

ಜಮ್ಮುವಿನಲ್ಲಿ ಅತಿಕ್ರಮಣ ಭೂಮಿ ತೆರವು ಕಾರ್ಯಾಚರಣೆ: ಏಳು ಎಕರೆಗೂ ಹೆಚ್ಚು ಭೂಮಿ ವಶಕ್ಕೆ

author img

By

Published : Sep 4, 2021, 3:05 PM IST

ಜಮ್ಮು ಕಾಶ್ಮೀರದಲ್ಲಿ ಸುಮಾರು 7 ಎಕರೆಗೂ ಹೆಚ್ಚು ಭೂಮಿಯನ್ನು ಅತಿಕ್ರಮಣದಾರರಿಂದ ವಶಕ್ಕೆ ಪಡೆಯಲಾಗಿದೆ.

Over seven acres of encroached prime land retrieved in J-K's Samba
ಜಮ್ಮುವಿನಲ್ಲಿ ಅತಿಕ್ರಮಣ ಭೂಮಿ ತೆರವು ಕಾರ್ಯಾಚರಣೆ: ಏಳು ಎಕರೆಗೂ ಹೆಚ್ಚು ಭೂಮಿ ವಶಕ್ಕೆ

ಜಮ್ಮು, ಜಮ್ಮು ಕಾಶ್ಮೀರ: ಭೂಮಿ ಅತಿಕ್ರಮಣ ಮಾಡಿಕೊಂಡಿದ್ದ, ಹಲವರ ವಿರುದ್ಧ ಜಮ್ಮು ಕಾಶ್ಮೀರದಲ್ಲಿ ಕ್ರಮ ಜರುಗಿಸಲಾಗಿದೆ. ಅತ್ಯಂತ ಪ್ರಮುಖವಾದ ಸುಮಾರು 7 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.

ಸಾಂಬಾ ಜಿಲ್ಲೆಯಲ್ಲಿ ಶುಕ್ರವಾರ ಭೂಮಿ ಅತಿಕ್ರಮಣ ವಿರೋಧಿ ಅಭಿಯಾನ ಕೈಗೊಳ್ಳಲಾಗಿದೆ. ಅತಿಕ್ರಮಣ ಮಾಡಲಾಗಿದ್ದ ಭೂಮಿಯನ್ನು ತೆರವುಗೊಳಿಸಲು ಡೆಪ್ಯುಟಿ ಕಮೀಷನರ್ ಅನುರಾಧ ಗುಪ್ತಾ ಅವರು ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು.

ರಾಮಗಢ ಬಳಿಯ ದಬುಝ್ ಕಾಕಾ ಗ್ರಾಮದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದ ತಂಡ, ಸುಮಾರು ಏಳು ಎಕರೆಗೂ ಹೆಚ್ಚು ಭೂಮಿಯನ್ನು ಜಪ್ತಿ ಮಾಡಿದೆ. ಜೆಸಿಬಿಗಳ ಮತ್ತು ಇತರ ಯಂತ್ರಗಳ ಮೂಲಕ ಸ್ಥಳದಲ್ಲಿ ನಿರ್ಮಿಸಲಾಗಿದ್ದ, ಕಟ್ಟಡಗಳು ಮತ್ತು ಇತರ ರಚನೆಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: ತೆರೆ ಮೇಲೆ ಬರಲು 'ತಲೈವಿ' ಸಜ್ಜು: ಜಯಲಲಿತಾ ಸ್ಮಾರಕಕ್ಕೆ ನಮಿಸಿದ ನಟಿ ಕಂಗನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.