ETV Bharat / bharat

ಪಾಕ್​ನಲ್ಲಿ ಗೂಢಾಚಾರಿಕೆ ನಡೆಸಿದ ನಿವೃತ್ತ ಅಂಚೆ ಸಿಬ್ಬಂದಿಗೆ ₹10 ಲಕ್ಷ ಪರಿಹಾರಕ್ಕಾಗಿ ಸುಪ್ರೀಂ ಸೂಚನೆ

author img

By

Published : Sep 14, 2022, 11:02 PM IST

ಪಾಕಿಸ್ತಾನದಲ್ಲಿ ಗೂಢಾಚಾರಿಕೆ ನಡೆಸಿ ಸಿಕ್ಕಿಬಿದ್ದು, ಶಿಕ್ಷೆ ಅನುಭವಿಸಿದ ಭಾರತೀಯ ಮೇಲ್​ ಸೇವೆ ಸಿಬ್ಬಂದಿಗೆ 10 ಲಕ್ಷ ಪರಿಹಾರ ನೀಡಲು ಸುಪ್ರೀಂಕೋರ್ಟ್​ ಸೂಚಿಸಿದೆ.

not-satisfied-with-sc-decision-being
₹10 ಲಕ್ಷ ಪರಿಹಾರಕ್ಕಾಗಿ ಸುಪ್ರೀಂ ಸೂಚನೆ

ಕೋಟಾ(ರಾಜಸ್ಥಾನ): ಭಾರತೀಯ ಮೇಲ್ ಸೇವೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪಾಕಿಸ್ತಾನದಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದು 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ವೇಳೆ ಸರ್ಕಾರ ತನ್ನ ಕುಟುಂಬಕ್ಕೆ ವೇತನ ನೀಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ ರಾಜಸ್ಥಾನದ ವ್ಯಕ್ತಿಗೆ ಸುಪ್ರೀಂಕೋರ್ಟ್​ 10 ಲಕ್ಷ ಪರಿಹಾರ ನೀಡಲು ಸೂಚಿಸಿದೆ.

ಪ್ರಕರಣವೇನು: ತಾನು ಭಾರತೀಯ ಮೇಲ್​ ಸೇವೆಯ ಸಿಬ್ಬಂದಿಯಾಗಿದ್ದರೂ ಪಾಕಿಸ್ತಾನದಲ್ಲಿ ಭಾರತದ ಪರ ಗೂಢಾಚಾರಿಕೆ ನಡೆಸುತ್ತಿದ್ದೆ. ಈ ವೇಳೆ ತಾನು ಸಿಕ್ಕಿಬಿದ್ದು 14 ವರ್ಷ ಕಠಿಣ ಶಿಕ್ಷೆಗೆ ಒಳಗಾಗಿದ್ದೆ. ಸರ್ಕಾರ ತನಗೆ ಈ ವೇಳೆ ನೀಡಬೇಕಿದ್ದ ವೇತನವನ್ನು ಕಟ್​​ ಮಾಡಿದೆ. ಇದನ್ನು ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್​, 14 ವರ್ಷ ಜೈಲು ಶಿಕ್ಷೆಯನ್ನು ಋಜುವಾತು ಮಾಡಿದ ಕಾರಣ ಆತನಿಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ.

ಓದಿ:ಲೋಕಾಯುಕ್ತ ಬಲವೃದ್ಧಿಸುವ ತಿದ್ದುಪಡಿ ಬಿಲ್: ಸಭಾಪತಿ ಚುನಾವಣೆಗೆ ಸಚಿವ ಸಂಪುಟ ಅಸ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.