ETV Bharat / bharat

ಯುಪಿಐ ಪೇಮೆಂಟ್​ಗಳ ಮೇಲೆ ಸೇವಾ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

author img

By

Published : Aug 22, 2022, 1:18 PM IST

no-service-charge-on-upi-payments
ಯುಪಿಐ ಪೇಮೆಂಟ್​ಗಳ ಮೇಲೆ ಸೇವಾ ಶುಲ್ಕ ವಿಧಿಸಲ್ಲ

ಯುಪಿಐ ಪೇಮೆಂಟ್​ಗಳ ಮೇಲೆ ಸೇವಾ ಶುಲ್ಕ ವಿಧಿಸುವ ವರದಿಯನ್ನು ಅಲ್ಲಗಳೆದ ವಿತ್ತ ಸಚಿವಾಲಯ, ಸರ್ಕಾರದ ಮುಂದೆ ಇಂತಹ ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ: ಆನ್​ಲೈನ್​ ಹಣ ಪಾವತಿಯಲ್ಲಿ ಕ್ರಾಂತಿ ಉಂಟು ಮಾಡಿರುವ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವುದಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟನೆ ನೀಡಿದೆ. ಯುಪಿಐ, ನೆಫ್ಟ್​ನಂತಹ ಆನ್​ಲೈನ್​ ಪಾವತಿಗಳಿಗೆ ಶುಲ್ಕ ವಿಧಿಸುವ ಬಗ್ಗೆ ರಿಸರ್ವ್ ಬ್ಯಾಂಕ್​ ಜನರ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ಶನಿವಾರ ವರದಿಯಾಗಿತ್ತು.

ಈ ಸುದ್ದಿಗೆ ಸ್ಪಷ್ಟೀಕರಣ ನೀಡಿರುವ ವಿತ್ತ ಸಚಿವಾಲಯ, ಯುಪಿಐ ಪೇಮೆಂಟ್​ ಜನರಿಗೆ ಭಾರಿ ಅನುಕೂಲ ನೀಡಿದೆ. ಇದು ಡಿಜಿಟಲ್​ ಹಣಪಾವತಿಯಲ್ಲಿ ಯಶಸ್ಸು ಸಾಧಿಸಿದೆ. ಜನರ ಅನುಕೂಲಕ್ಕೋಸ್ಕರ ಇರುವ ವ್ಯವಸ್ಥೆಯ ಮೇಲೆ ಯಾವುದೇ ಸೇವಾ ಶುಲ್ಕ ಜಾರಿ ಮಾಡುವುದಿಲ್ಲ ಎಂದು ಹೇಳಿದೆ.

  • UPI is a digital public good with immense convenience for the public & productivity gains for the economy. There is no consideration in Govt to levy any charges for UPI services. The concerns of the service providers for cost recovery have to be met through other means. (1/2)

    — Ministry of Finance (@FinMinIndia) August 21, 2022 " class="align-text-top noRightClick twitterSection" data=" ">

ಯುಪಿಐ ಕಂಪನಿಗಳ ಚೇತರಿಕೆಗೆ ಅನ್ಯ ಕ್ರಮ ಜಾರಿ ಮಾಡಲಾಗುವುದು. ಸರ್ಕಾರ ಕಳೆದ ವರ್ಷ ನೀಡಿದಂತೆ ಈ ವರ್ಷವೂ ಆರ್ಥಿಕ ನೆರವು ನೀಡಲಿದೆ. ಜನರ ಮೇಲೆ ಈ ಹೊರೆಯನ್ನು ಹಾಕುವುದಿಲ್ಲ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸಮಾಜದ ಜಾಗೃತಿ, ಒಗ್ಗಟ್ಟಿಗೆ ಆರೆಸ್ಸೆಸ್ ಕೆಲಸ: ಮೋಹನ್ ಭಾಗವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.