ETV Bharat / bharat

ಬೆಂಗಳೂರಿನಲ್ಲಿ ಜುಲೈ 17, 18ರಂದು ವಿಪಕ್ಷಗಳ ಸಭೆ: ಕೆ. ಸಿ. ವೇಣುಗೋಪಾಲ್

author img

By

Published : Jul 3, 2023, 5:35 PM IST

ಫ್ಯಾಸಿಸ್ಟ್‌ ಹಾಗೂ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸುವ ಸಂಕಲ್ಪದಲ್ಲಿ ಅಚಲರಾಗಿದ್ದೇವೆ ಎಂದು ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಟ್ವೀಟ್​ ಮಾಡಿದ್ದಾರೆ.

next-opposition-meeting-to-be-held-on-july-17-to-18-in-bengaluru
ಬೆಂಗಳೂರಿನಲ್ಲಿ ಜುಲೈ17, 18ರಂದು ವಿಪಕ್ಷಗಳ ಸಭೆ: ಕೆ.ಸಿ.ವೇಣುಗೋಪಾಲ್

ನವದೆಹಲಿ: ವಿರೋಧ ಪಕ್ಷಗಳ ಮುಂದಿನ ಸಭೆ ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಹೋದರನ ಪುತ್ರ ಅಜಿತ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕ್ಯಾಬಿನೆಟ್​ ಸೇರಿರುವುದು ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಈ ವೇಳೆ ಅವರು ಹೇಳಿದ್ದಾರೆ.

ಪಟ್ನಾದಲ್ಲಿ ನಡೆದ ಎಲ್ಲ ವಿರೋಧ ಪಕ್ಷಗಳ ಸಭೆಯು ಭಾರಿ ಯಶಸ್ಸು ಗಳಿಸಿದ ಬಳಿಕ, ನಾವು ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ 17, 18ರಂದು ನಡೆಸಲಿದ್ದೇವೆ. ಫ್ಯಾಸಿಸ್ಟ್‌ ಹಾಗೂ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸುವ ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದಿಟ್ಟ ದೂರದೃಷ್ಟಿಯನ್ನು ಪ್ರಸ್ತುತಪಡಿಸುವ ಸಂಕಲ್ಪದಲ್ಲಿ ಅಚಲರಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್​ಸಿಪಿ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಆರೋಪ ಮಾಡಿದ್ದರು ಈಗ ನಾವು ಈ ನಾಟಕವನ್ನು ನೋಡಿದ್ದೇವೆ. ಇದು ಇಡಿ ಮತ್ತು ಇತರೆ ಏಜೆನ್ಸಿಗಳ ಸ್ಪಷ್ಟ ಪ್ರಾಯೋಜಿತ ಆಟವಾಗಿದೆ. ನಾವು ಬಿಜೆಪಿ ವಿರುದ್ಧ ಹೆಚ್ಚು ಆಕ್ರಮಣಕಾರಿಯಾಗಿ ಹೋರಾಡುತ್ತೇವೆ. ಇದು ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವುದಿಲ್ಲ, ಇದು ಎನ್‌ಸಿಪಿ ವಿಷಯವಾಗಿದೆ. ಶರದ್ ಪವಾರ್ ಪಕ್ಷದ ಅತ್ಯಂತ ಹಿರಿಯ ನಾಯಕ. ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕೆಲವು ನಾಯಕರು ಪಕ್ಷವನ್ನು ಬದಲಾಯಿಸಿರಬಹುದು, ಆದರೆ ಪಕ್ಷದ ಬೆಂಬಲಿಗರು ಅವರೊಂದಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.

ಜೂನ್ 29 ರಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಹಿಮಾಚಲ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಪ್ರತಿಪಕ್ಷ ನಾಯಕರ ಮುಂದಿನ ಸಭೆಯನ್ನು ಶಿಮ್ಲಾದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಜುಲೈ 13 ಮತ್ತು 14 ರಂದು ಸಭೆ ನಡೆಯಲಿದೆ ಎಂದು ಅವರು ಹೇಳಿದ್ದರು. ಇದಕ್ಕೂ ಮೊದಲು ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾನ ಮನಸ್ಕ ಪಕ್ಷಗಳ ಮುಂದಿನ ಸಭೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿದೆ. 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಹೋರಾಡಲು ಮಾರ್ಗಸೂಚಿಯನ್ನು ರೂಪಿಸಲು ವಿರೋಧ ಪಕ್ಷಗಳು ಶಿಮ್ಲಾದಲ್ಲಿ ಸಭೆ ಸೇರಲಿದ್ದೇವೆ ಎಂದಿದ್ದರು.

ಇದನ್ನೂ ಓದಿ: Maharashtra Political crisis: ಫಡ್ನವಿಸ್ ಮನೆಯಲ್ಲಿ ರಾಹುಲ್ ನಾರ್ವೇಕರ್ ಸಭೆ: ಜಿತೇಂದ್ರ ಅವ್ಹಾದ್ ಆಕ್ಷೇಪ

ಪಕ್ಷಾಂತರ ಮಾಡಿದ ಶಾಸಕರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ: ಮತ್ತೊಂದೆಡೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಸತಾರಾದಲ್ಲಿ ಮಾತನಾಡಿ, ಅಜಿತ್ ಪವಾರ್ ಅವರ ಬಂಡಾಯಕ್ಕೆ ತಮ್ಮ ಆಶೀರ್ವಾದ ಇದೆ ಎಂಬ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ. ಪಕ್ಷಾಂತರ ಮಾಡಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ವಿರುದ್ಧ ಪಕ್ಷ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ನಾಯಕರ ಕಾರ್ಯಗಳಿಂದ ನಾನು ವಿಚಲಿತನಾಗಿಲ್ಲ. ನಿನ್ನೆ ಶಿಂದೆ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಹಕ್ಕು ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರಿಗೆ ಇದೆ ಎಂದು ಪವಾರ್ ಇದೇ ವೇಳೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.