ETV Bharat / bharat

ನಾಗರಿಕರು ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯನ್ನು ನಂಬಬೇಕು: ಸಿಜೆಐ ಡಿ ವೈ ಚಂದ್ರಚೂಡ್

author img

By

Published : Nov 20, 2022, 8:54 AM IST

ಜಿಲ್ಲಾ ನ್ಯಾಯಾಲಯವು ನ್ಯಾಯಾಂಗ ಮತ್ತು ಸಾಮಾನ್ಯ ನಾಗರಿಕರ ನಡುವಿನ ಸಂಪರ್ಕದ ಮೊದಲ ಹಂತವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್‌ಗಳಂತೆ ಜಿಲ್ಲಾ ನ್ಯಾಯಾಂಗವೂ ಮುಖ್ಯ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.

CJI DY Chandrachud
ಡಿ ವೈ ಚಂದ್ರಚೂಡ್

ನವದೆಹಲಿ: ನ್ಯಾಯ ಪಡೆಯಲು ಬಯಸುವ ಸಾಮಾನ್ಯ ನಾಗರಿಕರ ಅಗತ್ಯಗಳಿಗೆ ಜಿಲ್ಲಾ ನ್ಯಾಯಾಲಯ ನಿಜವಾಗಿಯೂ ಉತ್ತರಿಸುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಜಿಲ್ಲಾ ನ್ಯಾಯಾಂಗವನ್ನು ನಂಬುವುದನ್ನು ಕಲಿಯುವ ಅಗತ್ಯವಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಒತ್ತಿ ಹೇಳಿದರು.

ದೇಶದ 50ನೇ ಸಿಜೆಐ ಆಗಿ ನೇಮಕಗೊಂಡಿದ್ದಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು, ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯ ವ್ಯವಹಾರಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್‌ಗಳಂತೆ ಜಿಲ್ಲಾ ನ್ಯಾಯಾಂಗವೂ ಮುಖ್ಯವಾಗಿದೆ. ಜಿಲ್ಲಾ ನ್ಯಾಯಾಲಯವು ನ್ಯಾಯಾಂಗ ಮತ್ತು ಸಾಮಾನ್ಯ ನಾಗರಿಕರ ನಡುವಿನ ಸಂಪರ್ಕದ ಮೊದಲ ಹಂತ. ನಾಗರಿಕರಾಗಿ ನಾವು ಜಿಲ್ಲಾ ನ್ಯಾಯಾಂಗವನ್ನು ನೋಡುವ ರೀತಿ ನಮ್ಮ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದರು.

ಜಾಮೀನು ನೀಡಲು ಭಯ: ಜಾಮೀನು ನೀಡಲು ತಳಮಟ್ಟದಲ್ಲಿ ಇಷ್ಟವಿಲ್ಲದ ಕಾರಣ ಉನ್ನತ ನ್ಯಾಯಾಂಗವು ಜಾಮೀನು ವಿಷಯಗಳ ಕುರಿತು ತೀರ್ಪು ನೀಡುತ್ತದೆ. ತಳಮಟ್ಟದ ನ್ಯಾಯಾಧೀಶರು ಜಾಮೀನು ನೀಡಲು ಏಕೆ ಹಿಂಜರಿಯುತ್ತಾರೆ ಅಂದ್ರೆ, ಅವರಿಗೆ ಸಾಮರ್ಥ್ಯವಿಲ್ಲ ಹಾಗೂ ತಳಮಟ್ಟದ ನ್ಯಾಯಾಧೀಶರು ಅಪರಾಧವನ್ನು ಅರ್ಥಮಾಡಿಕೊಂಡಿಲ್ಲ ಎಂದರ್ಥವಲ್ಲ. ಅವರಲ್ಲಿ ಭಯದ ಭಾವನೆ ಅಡಗಿದೆ. ಇಂತಹ ಹೇಯ ಪ್ರಕರಣಕ್ಕೆ ನಾನು ಜಾಮೀನು ನೀಡಿದ್ದೇನೆ ಎಂಬ ಕಾರಣಕ್ಕೆ ನಾಳೆ ಯಾರಾದರೂ ನನ್ನನ್ನು ಗುರಿಯಾಗಿಸುತ್ತಾರೆ ಎಂಬ ಭಯ ತಳಮಟ್ಟದ ನ್ಯಾಯಾಧೀಶರಲ್ಲಿದೆ. ಹೀಗಾಗಿ, ಉನ್ನತ ನ್ಯಾಯಾಂಗವು ಜಾಮೀನು ಅರ್ಜಿಗಳಿಂದ ತುಂಬಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾನೂನು ದಬ್ಬಾಳಿಕೆಯ ಸಾಧನವಾಗಬಾರದು: ಸಿಜೆಐ ಡಿವೈ ಚಂದ್ರಚೂಡ್

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂಎಂ ಸುಂದ್ರೇಶ್, ಅಟಾರ್ನಿ ಜನರಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.