ETV Bharat / bharat

ರಾಷ್ಟ್ರವ್ಯಾಪಿ 19 ಕೋಟಿ ದಾಟಿದ ಕೊರೊನಾ ಲಸಿಕೆ ನೀಡಿಕೆ!

author img

By

Published : May 21, 2021, 6:51 PM IST

ಸತತ 8ನೇ ದಿನವು ಪ್ರತಿ ದಿನದ ಸೋಂಕು ಪ್ರಕರಣಗಳಲ್ಲಿ ಹೊಸ ಪ್ರಕರಣಗಳಿಗಿಂತ ಚೇತರಿಕೆಯ ಪ್ರಕರಣಗಳು ಹೆಚ್ಚಾಗಿವೆ. ಕಳೆದ 24 ಗಂಟೆಗಳಲ್ಲಿ 3,57,295 ಮಂದಿ ಗುಣಮುಖರಾಗಿದ್ದಾರೆ..

Vaccination
Vaccination

ನವದೆಹಲಿ : ಭಾರತ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಒಟ್ಟಾರೆ ದೇಶದಲ್ಲಿ ಮೂರನೇ ಹಂತದ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿ ಇಂದು 19 ಕೋಟಿ (19,18,79,503) ಡೋಸ್ ಲಸಿಕೆ ಹಾಕಲಾಗಿದೆ.

ಇಂದು ಬೆಳಗ್ಗೆ 7 ಗಂಟೆವರೆಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ, 27,53,883 ಸೆಷನ್​ಗಳ ಮೂಲಕ ಒಟ್ಟು 19,18,79,503 ಡೋಸ್ ಲಸಿಕೆ ಹಾಕಲಾಗಿದೆ. ಇದರಲ್ಲಿ 97,24,339 ಹೆಚ್‌ಸಿಡ್ಲ್ಯೂಗಳಿಗೆ ಮೊದಲನೇ ಡೋಸ್ ಮತ್ತು 66,80,968 ಹೆಚ್​ಸಿಡ್ಲ್ಯೂಗಳಿಗೆ ಎರಡನೇ ಡೋಸ್ ನೀಡಲಾಗಿದೆ.

1,47,91,600 ಎಫ್ಎಲ್ ಡಬ್ಲ್ಯೂಗಳಿಗೆ (1ನೇ ಡೋಸ್), 82,85,253 ಎಫ್ಎಲ್​ಡಬ್ಲ್ಯೂಗಳಿಗೆ (2ನೇ ಡೋಸ್), 18 ರಿಂದ 44 ವಯೋಮಾನದ 86,04,498 ಫಲಾನುಭವಿಗಳಿಗೆ (ಮೊದಲ ಡೋಸ್), 45 ರಿಂದ 60 ವರ್ಷದ 5,98,35,256 (1ನೇ ಡೋಸ್) ಮತ್ತು 95,80,860 (2ನೇ ಡೋಸ್), 60 ವರ್ಷ ಮೇಲ್ಪಟ್ಟ 5,62,45,627 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು 1,81,31,102 ಫಲಾನುಭವಿಗಳಿಗೆ 2ನೇ ಡೋಸ್ ನೀಡಲಾಗಿದೆ.

ದೇಶದಲ್ಲಿ ಈವರೆಗೆ ನೀಡಿರುವ ಲಸಿಕೆಗಳ ಪೈಕಿ ಹತ್ತು ರಾಜ್ಯಗಳಲ್ಲಿ ಒಟ್ಟು ಶೇ.66.32ರಷ್ಟು ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 20.61 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಸಾಧನೆಯೊಂದಿಗೆ ಭಾರತ ಒಂದೇ ದಿನದಲ್ಲಿ ಅತ್ಯಧಿಕ ಪರೀಕ್ಷೆಗಳನ್ನು ನಡೆಸಿದ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಮತ್ತೊಂದೆಡೆ ಪ್ರತಿ ದಿನದ ಪಾಸಿಟಿವಿಟಿ ದರ ಶೇ.12.59ಕ್ಕೆ ಕುಸಿದಿದೆ.

ಸತತ 8ನೇ ದಿನವು ಪ್ರತಿ ದಿನದ ಸೋಂಕು ಪ್ರಕರಣಗಳಲ್ಲಿ ಹೊಸ ಪ್ರಕರಣಗಳಿಗಿಂತ ಚೇತರಿಕೆಯ ಪ್ರಕರಣಗಳು ಹೆಚ್ಚಾಗಿವೆ. ಕಳೆದ 24 ಗಂಟೆಗಳಲ್ಲಿ 3,57,295 ಮಂದಿ ಗುಣಮುಖರಾಗಿದ್ದಾರೆ.

ಇಂದು ಭಾರತದಲ್ಲಿ ಒಟ್ಟಾರೆ ಗುಣಮುಖರಾದವರ ಸಂಖ್ಯೆ 2,27,12,735 ತಲುಪಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಸರಾಸರಿ ಶೇ.87.25 ತಲುಪಿದೆ. ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಹತ್ತು ರಾಜ್ಯಗಳಲ್ಲಿ ಶೇ.74.55ರಷ್ಟು ಜನರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.