ETV Bharat / bharat

15 ಕೋಟಿ ರೂ. ಮೌಲ್ಯದ 7 ಕೆಜಿ ಹೆರಾಯಿನ್ ವಶಪಡಿಸಿಕೊಂಡ ಮುಂಬೈ ಕ್ರೈಂ ಬ್ರ್ಯಾಂಚ್​..

author img

By

Published : Oct 6, 2021, 6:30 PM IST

Updated : Oct 6, 2021, 6:48 PM IST

ಮಾದಕ ವಸ್ತು ನಿಗ್ರಹ ದಳ ಡೋಂಗ್ರಿ ಪ್ರದೇಶದ ಮೇಲೆ ದಾಳಿ ನಡೆಸಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 15 ಕೋಟಿ ರೂ. ಮೌಲ್ಯದ 7 ಕೆಜಿ ಹೆರಾಯಿನ್​ ವಶಪಡಿಸಿಕೊಂಡಿದೆ.

Mumbai drugs case
ಮುಂಬೈ ಡ್ರಗ್ಸ್​ ಕೇಸ್​

ಮುಂಬೈ: ಮುಂಬೈ ಕ್ರೈಂ ಬ್ರ್ಯಾಂಚ್​ನ ಮಾದಕ ವಸ್ತು ನಿಗ್ರಹ ಘಟಕ ಒಂದು ದೊಡ್ಡ ಡ್ರಗ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಮಾದಕ ವಸ್ತು ನಿಗ್ರಹ ದಳ ಡೋಂಗ್ರಿ ಪ್ರದೇಶದ ಮೇಲೆ ದಾಳಿ ನಡೆಸಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 15 ಕೋಟಿ ರೂ. ಮೌಲ್ಯದ 7 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಈವರೆಗೆ ಇಬ್ಬರನ್ನು, ತನಿಖೆ ಚುರುಕುಗೊಂಡಿದೆ.

ಇದನ್ನೂ ಓದಿ: ಲಖಿಂಪುರ್​ ಹಿಂಸಾಚಾರ: ಮೃತ ಕುಟುಂಬಕ್ಕೆ ಪಂಜಾಬ್​, ಛತ್ತೀಸ್​ಗಢ​ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ


ದೇಶಾದ್ಯಂತ ಮಾದಕ ವಸ್ತು ಕಳ್ಳಸಾಗಣೆ ಹಾಗೂ ಮಾರಾಟ ವಿಪರೀತವಾಗಿ ಹೆಚ್ಚಾಗುತ್ತಿದೆ. ಬಾಲಿವುಡ್​ ಮಂದಿ ಮಾದಕವಸ್ತು ಸೇವನೆ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿರುವ ಸುದ್ದಿಗಳು ನಿತ್ಯವೂ ವರದಿಯಾಗುತ್ತಿವೆ.

ಕ್ರೂಸ್​ಶಿಪ್​​​​ ಡ್ರಗ್ಸ್​​ ಪಾರ್ಟಿ ಪ್ರಕರಣ:

ಕ್ರೂಸ್ ಶಿಪ್​​ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಗ್ರಹ ಘಟಕ ಈವರೆಗೆ 17 ಮಂದಿಯನ್ನು ಬಂಧಿಸಿದೆ. ಬಾಲಿವುಡ್​ ನಟ ಶಾರುಖ್​ ಖಾನ್​​ ಪುತ್ರ ಆರ್ಯನ್ ಖಾನ್ ಸೇರಿದಂತೆ ಬಂಧಿತರಾದ 17 ಮಂದಿನ್ನು ಅ. 14ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಳಪಡಿಸಲಾಗಿದೆ. ಸಿಕ್ಕಿಬಿದ್ದವರಲ್ಲಿ ಪಾರ್ಟಿಯನ್ನು ಆಯೋಜಿಸಿದ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗೆ ಸೇರಿದವರೂ ಕೂಡಾ ಇದ್ದಾರೆ.

Last Updated : Oct 6, 2021, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.