ETV Bharat / bharat

'ಮೋದಿಗೆ ಹಿಟ್ಲರ್​ನಂತೆ ಸಾವು, ದೇಶದಲ್ಲಿ ರಕ್ತ ಚೆಲ್ಲಲಿದೆ': ಕಾಂಗ್ರೆಸ್​ ನಾಯಕರ ಟೀಕಾಪ್ರಹಾರ

author img

By

Published : Jun 20, 2022, 5:59 PM IST

Updated : Jun 20, 2022, 6:36 PM IST

ಕಾಂಗ್ರೆಸ್‌ ನಾಯಕ ರಾಹುಲ್​ ಗಾಂಧಿಗೆ ಇ.ಡಿ. ವಿಚಾರಣೆ ಮತ್ತು ಕೇಂದ್ರದ ಅಗ್ನಿಪಥ್​ ಯೋಜನೆಯ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯಲ್ಲಿ ನಡೆದ ಧರಣಿಯಲ್ಲಿ ಕೈ​ ನಾಯಕರೊಬ್ಬರು ಮೋದಿ ಹಿಟ್ಲರ್​ ಸತ್ತಂತೆ ಸಾಯುತ್ತಾರೆ ಎಂದು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

ಮೋದಿ ಹಿಟ್ಲರ್​ನಂತೆ ಸಾಯ್ತಾನೆ, ದೇಶದಲ್ಲಿ ರಕ್ತ ಚೆಲ್ಲಲಿದೆ
ಮೋದಿ ಹಿಟ್ಲರ್​ನಂತೆ ಸಾಯ್ತಾನೆ, ದೇಶದಲ್ಲಿ ರಕ್ತ ಚೆಲ್ಲಲಿದೆ

ನವದೆಹಲಿ: "ಮೋದಿಗೆ ನಾಯಿಯ ಸಾವು ಬರುತ್ತೆ, ಮೋದಿ ಹಿಟ್ಲರ್​ ಸತ್ತಂತೆ ಸಾಯುತ್ತಾರೆ. ಇಡೀ ದೇಶ ರಕ್ತದ ಮಡುವಿನಲ್ಲಿ ತೇಲಲಿದೆ" ಇದು ಕಾಂಗ್ರೆಸ್​ ನಾಯಕರ ಟೀಕಾಪ್ರಹಾರದ ಮಾತುಗಳು!.

ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯನ್ನು ನಿಂದಿಸುವ ಭರದಲ್ಲಿ ಕಾಂಗ್ರೆಸ್​ ನಾಯಕರೊಬ್ಬರು "ನಾಯಿಯೊಂದು ಬೀದಿ ಹೆಣವಾಗುವಂತೆ ಮೋದಿಯೂ ಕೂಡ ಅದೇ ರೀತಿಯಾಗಿ ಸಾಯಲಿದ್ದಾರೆ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಇನ್ನೊಬ್ಬ ಕಾಂಗ್ರೆಸ್​ ನಾಯಕ ಸುಬೋಧ್​ ಕಾಂತ್​ ಸಹಾಯ್​ ಪ್ರಧಾನಿ "ಮೋದಿ ಹಿಟ್ಲರ್​ ಮಾದರಿಯಲ್ಲಿ ಹೆಣವಾಗಲಿದ್ದಾರೆ" ಎಂದು ಕಿಡಿಕಾರಿದ್ದಾರೆ.


ಅಗ್ನಿಪಥ್​ ಯೋಜನೆ ಮತ್ತು ರಾಹುಲ್​ ಗಾಂಧಿಯ ಇಡಿ ವಿಚಾರಣೆಯ ವಿರುದ್ಧ ದೇಶಾದ್ಯಂತ ಕಾಂಗ್ರೆಸ್​ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿಯನ್ನೇ ಟಾರ್ಗೆಟ್​ ಮಾಡಿರುವ ನಾಯಕರು, ಮೋದಿಯ ಸಾವಿನ ಬಗ್ಗೆ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ.

ದೆಹಲಿಯಲ್ಲಿ ಇಂದು ನಡೆದ ಸತ್ಯಾಗ್ರಹದಲ್ಲಿ ಕಾಂಗ್ರೆಸ್​ ನಾಯಕ ಸುಬೋಧ್​ ಕಾಂತ್​ ಸಹಾಯ್​ ಮಾತನಾಡಿ, "ಪ್ರಧಾನಿ ಮೋದಿಯವರು ಹಿಟ್ಲರ್​ ಹಾದಿಯನ್ನು ಅನುಸರಿಸುತ್ತಿದ್ದಾರೆ. ಹಿಟ್ಲರ್​ನಂತೆಯೇ ಸಾವನ್ನಪ್ಪುತ್ತಾರೆ" ಎಂದರು.

"ದೇಶಾದ್ಯಂತ ರಕ್ತ ಚೆಲ್ಲಲಿದೆ": ಇನ್ನು ಜಾರ್ಖಂಡ್​ನ ಕಾಂಗ್ರೆಸ್​ ಶಾಸಕ ಮಾಲಾ ಇರ್ಫಾನ್ ಅನ್ಸಾರಿ ಎಂಬುವವರು ಅಗ್ನಿಪಥ್​ ಯೋಜನೆಯನ್ನು ಟೀಕಿಸಿ, "ಈ ಯೋಜನೆ ದೇಶದಲ್ಲಿ ರಕ್ತವನ್ನು ಚೆಲ್ಲುವಂತೆ ಮಾಡಲಿದೆ. ಕೇಂದ್ರ ಸರ್ಕಾರ ಯುವಕರ ರಕ್ತವನ್ನು ತರ್ಪಣ ನೀಡುತ್ತಿದೆ" ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಪ್ರತಿಪಕ್ಷಗಳ ವಿನಂತಿ ನಿರಾಕರಿಸಿದ ಮಹಾತ್ಮ ಗಾಂಧಿ ಮೊಮ್ಮಗ!

Last Updated : Jun 20, 2022, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.