ETV Bharat / bharat

ಉದ್ಯಮಿ ಹೇಮಂತ್​ ಪರಾಖ್​ ಅಪಹರಣ.. ಸೂರತ್​ ಬಳಿ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

author img

By ETV Bharat Karnataka Team

Published : Sep 3, 2023, 7:01 PM IST

ನಾಸಿಕ್​ನ ಉದ್ಯಮಿ ಹೇಮಂತ್​ ಪರಾಖ್ ಅವರನ್ನು ಅಪಹರಣಗೈದ ದುಷ್ಕರ್ಮಿಗಳು ಇಂದು ಸೂರತ್​ ನಗರದಲ್ಲಿ ಬಿಟ್ಟು ಹೋಗಿದ್ದಾರೆ.

mh-businessman-hemant-parakh-released-after-kidnapping-near-surat-minister-bhujbal-met-parakh
ಉದ್ಯಮಿ ಹೇಮಂತ್​ ಪರಾಖ್​ ಅಪಹರಣ.. ಸೂರತ್​ ಬಳಿ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

ನಾಸಿಕ್​( ಮಹಾರಾಷ್ಟ್ರ) : ನಾಸಿಕ್​ನ​ ಖ್ಯಾತ ಬಿಲ್ಡರ್​ ಹಾಗೂ ಗಜ್ರಾ ಗ್ರೂಪ್​ನ ಅಧ್ಯಕ್ಷ ಹೇಮಂತ್​ ಪರಾಖ್​ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಇಂದು ಸೂರತ್​ ಬಳಿ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಶನಿವಾರ ರಾತ್ರಿ ಹೇಮಂತ್​ ಅವರನ್ನು ಮನೆಯ ಸಮೀಪದಿಂದ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.

ಶನಿವಾರ ರಾತ್ರಿ ಹೇಮಂತ್​ ಅವರನ್ನು ಮನೆ ಸಮೀಪದಿಂದ ಅಪಹರಿಸಲಾಗಿತ್ತು. ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಹೇಮಂತ್​ ಅವರನ್ನು ಅಪಹರಿಸಿದ್ದರು. ಉದ್ಯಮಿ ಅಪಹರಣದ ಬಗ್ಗೆ ತಿಳಿಯುತ್ತಿದ್ದಂತೆ ನಾಸಿಕ್​ನಲ್ಲಿ ಭಾರೀ ಸಂಚಲನ ಉಂಟಾಗಿತ್ತು. ವಿಷಯ ತಿಳಿದ ತಕ್ಷಣ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಬಗ್ಗೆ ಕಾರ್ಯ ಪ್ರವೃತ್ತರಾದ ಪೊಲೀಸ್​ ಅಧಿಕಾರಿಗಳು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ನಾಲ್ಕು ತಂಡಗಳನ್ನು ರಚಿಸಿದ್ದರು. ಅಲ್ಲದೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಅಂಕುಶ್ ಶಿಂಧೆ, ಉಪ ಆಯುಕ್ತ ಪ್ರಶಾಂತ್ ಬಚಾವೋ, ಮೋನಿಕಾ ರಾವುತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಅಪಹರಣಕಾರರ ಜಾಡನ್ನು ಪತ್ತೆ ಹಚ್ಚಲು ನಗರದ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಜೊತೆಗೆ ನಗರದಿಂದ ಹೊರ ಹೋಗುವ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದರು. ಇಂದು ಅಪಹರಣಕಾರರು ಉದ್ಯಮಿಯನ್ನು ಸೂರತ್​ ನಗರದಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಉದ್ಯಮಿಯಿಂದ ಸುಲಿಗೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ತನಿಖೆ ವೇಳೆ ಉದ್ಯಮಿಯನ್ನು ಅಪಹರಣಕಾರರು ಬಿಡುಗಡೆ ಮಾಡಿರುವ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ. ಆದರೆ ಆರೋಪಿಗಳು ಉದ್ಯಮಿಯ ಕಣ್ಣಿಗೆ ಬಟ್ಟೆ ಕಟ್ಟಿದ್ದರಿಂದ ಆರೋಪಿಗಳನ್ನು ಗುರುತಿಸಲು ಅವರಿಗೆ ಸಾಧ್ಯವಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮನೆಗೆ ಮರಳಿರುವ ಉದ್ಯಮಿ ಹೇಮಂತ್ ಪರಾಖ್ ಅವರನ್ನು ಸಚಿವ ಛಗನ್​ ಭುಜ್ಬಲ್​ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಕರಣ ಸಂಬಂಧ ಉನ್ನತ ತನಿಖೆ ನಡೆಸಲು ಅಧಿಕಾರಿಗಳ ಜೊತೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಇದೇ ವೇಳೆ ಅಪಹರಣಕಾರರು ಉದ್ಯಮಿ ಹೇಮಂತ್​ ಪರಾಖ್​ ಅವರ ಕಣ್ಣುಗಳನ್ನು ಕಟ್ಟಿದ್ದರು. ಇದರಿಂದ ಆರೋಪಿಗಳ ಗುರುತು ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Accident: ಪಿಲಿಭಿತ್​​​ನಲ್ಲಿ ಭೀಕರ ರಸ್ತೆ ಅಪಘಾತ.. ಮೂವರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.