ETV Bharat / bharat

ಹಿಜಾಬ್ ವಿವಾದ ನಮ್ಮ ಆಂತರಿಕ ವಿಚಾರ, ಅಭಿಪ್ರಾಯ ಹೊರಹಾಕುವುದು ಸರಿಯಲ್ಲ: ರಾಷ್ಟ್ರಗಳಿಗೆ ವಿದೇಶಾಂಗ ಇಲಾಖೆ ಸೂಚನೆ

author img

By

Published : Feb 12, 2022, 11:59 AM IST

ಭಾರತವನ್ನು ಚೆನ್ನಾಗಿ ತಿಳಿದಿರುವವರು ಭಾರತದ ಬಗ್ಗೆ ಮೆಚ್ಚುಗೆಯನ್ನು ಹೊಂದಿರುತ್ತಾರೆ. ನಮ್ಮ ಆಂತರಿಕ ಸಮಸ್ಯೆಗಳ ಬಗ್ಗೆ ಪ್ರೇರಿತ ಅಭಿಪ್ರಾಯಗಳನ್ನು ಹೊರಹಾಕುವುದು ಸ್ವಾಗತಾರ್ಹವಲ್ಲ ಎಂದು ವಿವಿಧ ರಾಷ್ಟ್ರಗಳಿಗೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.

MEA on comments by some countries on dress code in some educational institutions in Karnataka
ಹಿಜಾಬ್ ವಿವಾದ ನಮ್ಮ ಆಂತರಿಕ ವಿಚಾರ, ಅಭಿಪ್ರಾಯ ಹೊರಹಾಕುವುದು ಸರಿಯಲ್ಲ: ರಾಷ್ಟ್ರಗಳಿಗೆ ವಿದೇಶಾಂಗ ಇಲಾಖೆ ಸೂಚನೆ

ನವದೆಹಲಿ: ರಾಜ್ಯದಲ್ಲಿ ಆರಂಭವಾದ ಹಿಜಾಬ್ ವಿವಾದದ ವಿಚಾರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಬೇರೆ ರಾಷ್ಟ್ರಗಳು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದು ಸ್ವಾಗತಾರ್ಹವಲ್ಲ ಎಂದಿದೆ.

ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಟ್ವೀಟ್ ಮಾಡಿದ್ದು, ಕರ್ನಾಟಕದ ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿನ ಡ್ರೆಸ್ ಕೋಡ್‌ಗೆ ಸಂಬಂಧಿಸಿದ ವಿಚಾರ ಹೈಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ನಮ್ಮ ಸಾಂವಿಧಾನಿಕ ಚೌಕಟ್ಟು ಮತ್ತು ಕಾರ್ಯವಿಧಾನಗಳು, ಹಾಗೆಯೇ ನಮ್ಮ ಪ್ರಜಾಪ್ರಭುತ್ವದ ನೀತಿಗೆ ಅನುಗುಣವಾಗಿ ಈ ವಿಚಾರವನ್ನು ಬಗೆಹರಿಸಿಕೊಳ್ಳುತ್ತೇವೆ. ಭಾರತವನ್ನು ಚೆನ್ನಾಗಿ ತಿಳಿದಿರುವವರು ಭಾರತದ ಬಗ್ಗೆ ಮೆಚ್ಚುಗೆಯನ್ನು ಹೊಂದಿರುತ್ತಾರೆ. ನಮ್ಮ ಆಂತರಿಕ ಸಮಸ್ಯೆಗಳ ಬಗ್ಗೆ ಪ್ರೇರಿತ ಅಭಿಪ್ರಾಯಗಳನ್ನು ಹೊರಹಾಕುವುದು ಸ್ವಾಗತಾರ್ಹವಲ್ಲ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ವಿಶ್ವಾದ್ಯಂತ 1 ಗಂಟೆಗಳ ಕಾಲ ಕೈಕೊಟ್ಟ ಟ್ವಿಟರ್​.. ಈಗ ಎಲ್ಲವೂ ಸುಲಲಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.