ETV Bharat / bharat

ತಾಯಿಯೊಂದಿಗೆ ಸುಖ ನಿದ್ರೆಯಲ್ಲಿದ್ದ ಮಗು ಕದ್ದು ಪರಾರಿಯಾದ ಕ್ರೂರಿ: ವಿಡಿಯೋ

author img

By

Published : Aug 28, 2022, 11:09 AM IST

ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ವ್ಯಕ್ತಿ ಪರಾರಿಯಾಗಿರುವ ಘಟನೆ ಯುಪಿಯ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ನಡೆದಿದೆ.

Man Steals Child
ಮಗುವನ್ನು ಕದ್ದು ಪರಾರಿಯಾದ ವ್ಯಕ್ತಿ

ಉತ್ತರ ಪ್ರದೇಶ: ಇಲ್ಲಿನ ಮಥುರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ತಾಯಿಯೊಂದಿಗೆ ಮಲಗಿದ್ದ7 ತಿಂಗಳ ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ. ಘಟನೆಯ ದೃಶ್ಯಾವಳಿ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ವ್ಯಕ್ತಿ ಪರಾರಿ ಆಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

  • ये व्यक्ति रे०स्टेशन मथुरा जं० से अपनी माँ के साथ सो रहे महज 7 माह के बच्चे को उठाकर ले गया।
    इस व्यक्ति को पकड़वाने में मदद कीजिये।
    आप सिर्फ Retweet कर इसके फ़ोटो/वीडियो को Groups में share कर दीजिये, विशेष कर कासगंज, बदायूँ और बरेली साइड में।
    मुझे भरोसा है ये अवश्य पकड़ा जाएगा। pic.twitter.com/fTnuGbSlsi

    — SACHIN KAUSHIK (@upcopsachin) August 27, 2022 " class="align-text-top noRightClick twitterSection" data=" ">

ಮೊದಲಿಗೆ ಎಲ್ಲರೂ ಮಲಗಿರುವುದನ್ನು ಗಮನಿಸಿದ ವ್ಯಕ್ತಿ ಒಂದೆರಡು ಬಾರಿ ಸುತ್ತಲೂ ಓಡಾಡಿದ್ದಾನೆ. ನಂತರ ಮತ್ತೆ ಹಿಂದಿರುಗಿ ಬಂದು ಮಗುವನ್ನು ನಿಧಾನವಾಗಿ ಎತ್ತಿಕೊಂಡು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ರೈಲಿನತ್ತ ಓಡಿ ಹೋಗಿದ್ದಾನೆ. ನಾಪತ್ತೆಯಾಗಿರುವ ಮಗುವನ್ನು ಪತ್ತೆ ಹಚ್ಚಲು ಪೊಲೀಸರು ಹಲವು ತಂಡಗಳನ್ನು ರಚಿಸಿದ್ದಾರೆ.

ಅಲ್ಲದೇ ಪ್ರಕರಣ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದ್ದು, ಆರೋಪಿಯ ಫೋಟೋ ಬಿಡುಗಡೆ ಮಾಡಲಾಗಿದೆ. ಆತನ ಬಗ್ಗೆ ಮಾಹಿತಿ ಗೊತ್ತಾದರೆ ತಿಳಿಸುವಂತೆ ಸಾರ್ವಜನಿಕರಿಗೆ ಮಥುರಾ ಪೊಲೀಸರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇಂದು ಧರೆಗುರುಳಲಿವೆ 70 ಕೋಟಿ ವೆಚ್ಚದ ನೋಯ್ಡಾ ಬೃಹತ್​​ ಕಟ್ಟಡಗಳು.. 3,700 ಕೆಜಿ ಸ್ಫೋಟಕ ಬಳಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.