ETV Bharat / bharat

ಬೈಕ್‌ ರಿವರ್ಸ್ ತೆಗೆಯುವಾಗ ಪ್ಯಾಂಟ್‌ಗೆ ಬಿತ್ತು ಕೆಸರು: ಯುವಕನಿಂದಲೇ ಸ್ವಚ್ಛಗೊಳಿಸಿ ಕೆನ್ನೆಗೆ ಬಾರಿಸಿದ ಮಹಿಳಾ ಪೊಲೀಸ್‌

author img

By

Published : Jan 12, 2022, 7:50 PM IST

ವ್ಯಕ್ತಿಯೊಬ್ಬ ದ್ವಿಚಕ್ರ ವಾಹನವನ್ನು ಹಿಂದಕ್ಕೆ ತೆಗೆಯುತ್ತಿದ್ದ. ಈ ವೇಳೆ ಅಲ್ಲಿದ್ದ ಮಹಿಳಾ ಪೊಲೀಸ್​ ಸಿಬ್ಬಂದಿ ಫ್ಯಾಂಟ್​ಗೆ ಕೆಸರು ಹತ್ತಿದೆ. ಇದನ್ನು ಗಮನಿಸಿ ಆಕೆ ತಕ್ಷಣ ಯುವಕನನ್ನು ತನ್ನ ಬಳಿಗೆ ಕರೆದು ಪ್ಯಾಂಟ್ ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ.

MP police woman force to clean her trousers
MP police woman force to clean her trousers

ಭೋಪಾಲ್​(ಮಧ್ಯಪ್ರದೇಶ): ಗೃಹರಕ್ಷಕ ದಳದ ಮಹಿಳಾ ಕಾನ್ಸ್​ಟೇಬಲ್‌​ವೋರ್ವರು ವ್ಯಕ್ತಿಯಿಂದ ತನ್ನ ಪ್ಯಾಂಟ್​​ ಸ್ವಚ್ಛಗೊಳಿಸಿ, ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದ್ದು, ವಿಡಿಯೋ ವೈರಲ್​ ಆಗ್ತಿದೆ.

ವಿವರ:

ವ್ಯಕ್ತಿಯೊಬ್ಬ ದ್ವಿಚಕ್ರ ವಾಹನವನ್ನು ಹಿಂದಕ್ಕೆ ತೆಗೆಯುತ್ತಿದ್ದ. ಈ ವೇಳೆ ಅಲ್ಲಿದ್ದ ಮಹಿಳಾ ಪೊಲೀಸ್​ ಸಿಬ್ಬಂದಿ ಫ್ಯಾಂಟ್​ಗೆ ಕೆಸರು ಹತ್ತಿದೆ. ಇದನ್ನು ಗಮನಿಸಿ ಆಕೆ ತಕ್ಷಣ ಯುವಕನನ್ನು ತನ್ನ ಬಳಿಗೆ ಕರೆದು ಪ್ಯಾಂಟ್ ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿ ವಸ್ತ್ರದಿಂದ ಪ್ಯಾಂಟ್​ ಸ್ವಚ್ಛಗೊಳಿಸುತ್ತಿರುವುದು ಕಂಡುಬರುತ್ತದೆ. ಪ್ಯಾಂಟ್‌ ಸ್ವಚ್ಛಗೊಳಿಸಿದ ಬಳಿಕ ಮಹಿಳಾ ಪೊಲೀಸ್‌ ಸಿಬ್ಬಂದಿ ಆ ಯುವಕನಿಗೆ ಕಪಾಳಮೋಕ್ಷ ಮಾಡಿ, ಸ್ಥಳದಿಂದ ಹೊರಟು ಹೋಗಿದ್ದಾರೆ.

  • मध्य प्रदेश के रीवा में एक महिला पुलिसकर्मी ने सिरमौर चौक के पास पहले युवक से पैंट साफ कराई. फिर उसे जोरदार थप्पड़ जड़ दिया. बाइक हटाते हुए महिला पुलिसकर्मी के पैंट में कीचड़ लग गया था @ndtv @ndtvindia @DGP_MP @drnarottammisra pic.twitter.com/m0hdSJ2mrZ

    — Anurag Dwary (@Anurag_Dwary) January 12, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಇಸ್ರೋ ನೂತನ ಅಧ್ಯಕ್ಷರಾಗಿ ರಾಕೆಟ್​​ ವಿಜ್ಞಾನಿ ಎಸ್​.ಸೋಮನಾಥ್ ನೇಮಕ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಗೃಹರಕ್ಷಕ ದಳದ ಕಾನ್ಸ್​ಟೇಬಲ್​ ಶಶಿಕಲಾ ಈ ರೀತಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ರೇವಾ ಎಸ್ಪಿ ಶಿವಕುಮಾರ್ ಮಾತನಾಡಿದ್ದು, 'ನಾವು ಘಟನೆಯ ವಿಡಿಯೋ ಗಮನಿಸಿದ್ದೇವೆ. ವ್ಯಕ್ತಿಯೋರ್ವ ಬಲವಂತವಾಗಿ ಪ್ಯಾಂಟ್ ಸ್ವಚ್ಛಗೊಳಿಸುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ದೂರು ನೀಡಿದರೆ, ವಿಚಾರಣೆ ನಡೆಸುತ್ತೇವೆ' ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.