ಇಸ್ರೋ ನೂತನ ಅಧ್ಯಕ್ಷರಾಗಿ ರಾಕೆಟ್​​ ವಿಜ್ಞಾನಿ ಎಸ್​.ಸೋಮನಾಥ್ ನೇಮಕ: ಈಟಿವಿ ಭಾರತ್ ಜೊತೆ ಮಾತು

author img

By

Published : Jan 12, 2022, 7:10 PM IST

Updated : Jan 12, 2022, 11:01 PM IST

Rocket Scientist S Somanath

ಇಸ್ರೋ ಅಧ್ಯಕ್ಷ ಕೆ.ಶಿವನ್​ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಆ ಸ್ಥಾನಕ್ಕೆ ಇದೀಗ ಹಿರಿಯ ವಿಜ್ಞಾನಿ ಎಸ್.ಸೋಮನಾಥ್​​ ನೇಮಕಗೊಂಡಿದ್ದಾರೆ. ಇವರು ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್​.ಸೋಮನಾಥ್​​ ನೇಮಕಗೊಂಡಿದ್ದಾರೆ.

ಈಟಿವಿ ಭಾರತ್ ಜೊತೆ ಇಸ್ರೋ ನೂತನ ಅಧ್ಯಕ್ಷರ ಮಾತು

2018ರಿಂದಲೂ ವಿಕ್ರಮ್​ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ್​, ಈಗಾಗಲೇ ಲಿಕ್ವಿಡ್​ ಪ್ರೊಪಲ್ಷನ್​ ಸಿಸ್ಟಿಮ್​ ಸೆಂಟರ್​​​ನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ​​

Rocket Scientist S Somanath
ಇಸ್ರೋ ನೂತನ ಅಧ್ಯಕ್ಷರಾಗಿ ಎಸ್​.ಸೋಮನಾಥ್​ ಆಯ್ಕೆ

ಚಂದ್ರಯಾನ-2, GSAT-9 ಯೋಜನೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಸೋಮನಾಥ್​ ಅವರನ್ನು ರಾಕೆಟ್​ ವಿಜ್ಞಾನಿ ಎಂದು ಕರೆಯಲಾಗುತ್ತದೆ. ಕೊಲ್ಲಂನ ಟಿಕೆಂ ಕಾಲೇಜ್​ ಆಫ್​ ಇಂಜಿನಿಯರಿಂಗ್​ನಿಂದ ಮೆಕ್ಯಾನಿಕಲ್​​ ಇಂಜಿನಿಯರಿಂಗ್​ ಪದವೀಧರರಾಗಿರುವ ಇವರು, ಬೆಂಗಳೂರಿನ ಇಂಡಿಯನ್​ ಇನ್​​ಸ್ಟಿಟ್ಯೂಟ್​ ಆಫ್​ ಸೈನ್ಸ್​​ನಿಂದ ಏರೋಸ್ಪೇಸ್ ಎಂಜಿನಿಯರಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

ಇಸ್ರೋ ನೂತನ ಅಧ್ಯಕ್ಷರಾಗಿ ಅಯ್ಕೆಯಾಗುತ್ತಿದ್ದಂತೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಎಸ್​. ಸೋಮನಾಥ್​, ತಮ್ಮ ಮುಂದಿನ ಯೋಜನೆ, ಕಾರ್ಯ ವೈಖರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Rocket Scientist S Somanath
ಇಸ್ರೋ ಅಧ್ಯಕ್ಷರಾಗಿದ್ದ ಕೆ. ಶಿವನ್​
Last Updated :Jan 12, 2022, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.