ETV Bharat / bharat

'ಫ್ಲೈಯಿಂಗ್​ ಕಿಸ್ಸಿನಿಂದ ಇಷ್ಟು ನೊಂದರೆ, ಮಣಿಪುರ ಮಹಿಳೆಯರ ಸ್ಥಿತಿ ಹೇಗಿರಬೇಕು ಯೋಚಿಸಿ': ಸಂಸದೆಯರಿಗೆ ಮಹಿಳಾ ಐಎಎಸ್​ ಅಧಿಕಾರಿ ಪ್ರಶ್ನೆ

author img

By

Published : Aug 10, 2023, 1:21 PM IST

ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಫ್ಲೈಯಿಂಗ್​ ಕಿಸ್​ ಮಾಡಿದ್ದನ್ನು ಪ್ರಶ್ನಿಸಿ ಬಿಜೆಪಿ ಮಹಿಳಾ ಸಂಸದೆಯರು ಸ್ಪೀಕರ್​ಗೆ ದೂರಿನ ಪತ್ರವನ್ನು ನೀಡಿದ್ದಾರೆ. ಇದರ ವಿರುದ್ಧ ಮಧ್ಯಪ್ರದೇಶದ ಹಿರಿಯ ಐಎಎಸ್​ ಮಹಿಳಾ ಅಧಿಕಾರಿಯೊಬ್ಬರು ಮಣಿಪುರ ಬೆತ್ತಲೆ ಮಹಿಳೆಯರ ಘಟನೆಯನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ.

ಸಂಸದೆಯರಿಗೆ ಮಹಿಳಾ ಐಎಎಸ್​ ಅಧಿಕಾರಿ ಪ್ರಶ್ನೆ
ಸಂಸದೆಯರಿಗೆ ಮಹಿಳಾ ಐಎಎಸ್​ ಅಧಿಕಾರಿ ಪ್ರಶ್ನೆ

ಭೋಪಾಲ್( ಮಧ್ಯಪ್ರದೇಶ): ಸಂಸತ್ತಿನಲ್ಲಿ ಸಂಸದ ರಾಹುಲ್​ ಗಾಂಧಿ ಅವರು ಅವಿಶ್ವಾಸ ನಿಲುವಳಿ ಮೇಲೆ ಮಾತನಾಡಿದ ಬಳಿಕ ಫ್ಲೈಯಿಂಗ್​ ಕಿಸ್​ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಕೆಲ ಮಹಿಳಾ ಸದಸ್ಯೆಯರು ರಾಹುಲ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಉಲ್ಲೇಖಿಸಿ ಮಧ್ಯಪ್ರದೇಶದ ಮಹಿಳಾ ಹಿರಿಯ ಐಎಎಸ್ ಅಧಿಕಾರಿಯೊಬ್ಬರು "ಮಣಿಪುರ ಮಹಿಳೆಯರ ಪರಿಸ್ಥಿತಿ ಹೇಗಿರಬೇಕು ಒಮ್ಮೆ ಯೋಚಿಸಿ" ಎಂದು ಕುಟುಕಿದ್ದಾರೆ.

  • ज़रा सोचिए मणिपुर की महिलाओं को कैसा महसूस हुआ होगा? pic.twitter.com/lINeLtQyuT

    — Shailbala Martin (@MartinShailbala) August 9, 2023 " class="align-text-top noRightClick twitterSection" data=" ">

ರಾಹುಲ್​ ಫ್ಲೈಯಿಂಗ್​ ಕಿಸ್​ ವಿರುದ್ಧ ಸಂಸತ್ತಿನ ಒಳಗೆ, ಹೊರಗೆ ಪ್ರತಿಭಟಿಸುತ್ತಿರುವ ಮಹಿಳಾ ಸಂಸದರಿಗೆ, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಅವಮಾನಿಸಿದ ಘಟನೆಯನ್ನು ಉಲ್ಲೇಖಿಸಿ ಈ ರೀತಿ ಕೇಳಲಾಗಿದೆ.

ಮಧ್ಯಪ್ರದೇಶ ಕೇಡರ್ ಐಎಎಸ್​ ಅಧಿಕಾರಿಯಾಗಿರುವ, ಭೋಪಾಲ್‌ನ ರಾಜ್ಯ ಸಚಿವಾಲಯದ ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಶೈಲ್ಬಾಲಾ ಮಾರ್ಟಿನ್ ಅವರು ಮಹಿಳಾ ಸಂಸದೆಯರ ಪತ್ರವನ್ನು X ನಲ್ಲಿ(ಹಿಂದಿನ ಟ್ವಿಟರ್​) ಹಂಚಿಕೊಂಡು, "ಮಣಿಪುರದ ಮಹಿಳೆಯರು ಪರಿಸ್ಥಿತಿ ಹೇಗಿರಬೇಡ ಎಂದು ಯೋಚಿಸಿ" ಎಂದು ಹಿಂದಿಯಲ್ಲಿ ಪ್ರಶ್ನಿಸಿದ್ದಾರೆ.

ರಾಹುಲ್​ ಗಾಂಧಿ ಮಾಡಿದ್ದೇನು?: ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ನಂತರ, ರಾಹುಲ್​ ಗಾಂಧಿ ಅವರು ಫ್ಲೈಯಿಂಗ್ ಕಿಸ್ ಮಾಡಿದರು. ಅದೇ ವೇಳೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್​ಗೆ ಪ್ರಶ್ನೆಗಳಿಗೆ ಉತ್ತರಿಸಲು ಎದ್ದುನಿಂತರು. ಮಹಿಳೆಯರು ಇರುವ ಸದನದಲ್ಲಿ ವಯನಾಡು ಸಂಸದನ ಈ ನಡೆಯನ್ನು ಅವರು ಕಟುವಾಗಿ ಟೀಕಿಸಿದರು.

ಸದನದಲ್ಲಿ ನನಗಿಂತ ಮೊದಲು ಮಾತನಾಡಿದ ವ್ಯಕ್ತಿ ಸ್ತ್ರೀದ್ವೇಷಿಯಾಗಿದ್ದಾನೆ. ಅವರಿಂದ ಸದನವು ಇಂತಹ ಅಸಭ್ಯ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಪವಿತ್ರ ಸದನದಲ್ಲಿ ಈವರೆಗೂ ಇಂತಹ ಘಟನೆ ನಡೆದಿಲ್ಲ. ಗಾಂಧಿ ಕುಟುಂಬದ ಕುಡಿಯ ವರ್ತನೆ, ಸಂಸ್ಕೃತಿಯನ್ನು ಇಡೀ ದೇಶವೇ ನೋಡಿದೆ ಎಂದು ತರಾಟೆಗೆ ತೆಗೆದುಕೊಂಡರು.

ಬಳಿಕ, 20ಕ್ಕೂ ಹೆಚ್ಚು ಮಹಿಳಾ ಸಂಸದರು ಲೋಕಸಭೆಯ ಸ್ಪೀಕರ್‌ಗೆ ದೂರು ಸಲ್ಲಿಸಿದ್ದು, ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್​ ನಾಯಕ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸದನದಲ್ಲಿ ಮಹಿಳಾ ಸದಸ್ಯರ ಘನತೆಗೆ ಅವಮಾನ ಮಾಡಿದ್ದಲ್ಲದೇ, ಅಪಖ್ಯಾತಿ ಮತ್ತು ಘನತೆಗೆ ಕುಂದು ತಂದಿದೆ. ಎಂದು ಆರೋಪಿಸಿದ್ದಾರೆ.

ಮಣಿಪುರ ಮಹಿಳೆಯರ ವಿಡಿಯೋ: ಮಣಿಪುರದ ಕಾಂಗ್‌ಪೋಕ್ಸಿ ಜಿಲ್ಲೆಯಲ್ಲಿ ಮೇ 4 ರಂದು ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದರ ವಿಡಿಯೋ ಜುಲೈ 19 ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಇದರ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಅವಿಶ್ವಾಸ ನಿಲುವಳಿ: ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಉತ್ತರ, ಮಣಿಪುರ ವಿಚಾರವಾಗಿ ವಿಪಕ್ಷಗಳ 'ಸಂಘರ್ಷ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.