ETV Bharat / bharat

ನ್ಯಾಯಾಧೀಶರ ಹತ್ಯೆಯಾಗಿ 34 ವರ್ಷಗಳ ಬಳಿಕ ತನಿಖೆ ಆರಂಭಿಸಿದ ಜಮ್ಮು ಕಾಶ್ಮೀರ ಪೊಲೀಸರು

author img

By

Published : Aug 8, 2023, 10:26 AM IST

jk_sri_02_english copy of NK Ganjoo murder case_dry_7203376
ನ್ಯಾಯಾಧೀಶರ ಹತ್ಯೆಯಾಗಿ 34 ವರ್ಷಗಳ ಬಳಿಕ ತನಿಖೆ ಆರಂಭಿಸಿದ ಜಮ್ಮು ಕಾಶ್ಮೀರ ಪೊಲೀಸ್​

ಜೆಕೆ ಪೊಲೀಸರು ಕಾಶ್ಮೀರದಲ್ಲಿ ತನಿಖೆಯನ್ನು ಪ್ರಾರಂಭಿಸಿದರು ಪಂಡಿತ್ ಜೂಡ್ ನೀಲಕಂಠ ಗಂಜೂ ಅವರ ಹತ್ಯೆಯ 34 ವರ್ಷಗಳ ನಂತರ ಅಲ್ಲಿನ ತನಿಖಾ ದಳ ತನಿಖೆ ಆರಂಭಿಸಿದೆ.

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ನ್ಯಾಯಾಧೀಶರೊಬ್ಬರ ಹತ್ಯೆ ನಡೆದು 34 ವರ್ಷಗಳ ಬಳಿಕ ಜಮ್ಮುಕಾಶ್ಮೀರ ತನಿಖಾ ಸಂಸ್ಥೆ ಎಸ್​​​ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಜಮ್ಮು- ಕಾಶ್ಮೀರದ ಲಿಬರೇಶನ್ ಫ್ರಂಟ್ ಸಂಸ್ಥಾಪಕ ಮಕ್ಬೂಲ್ ಭಟ್ ಅವರಿಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆಯನ್ನು ಪುನಾರಂಭಿಸಿದೆ.

ಮೂರು ದಶಕಗಳ ಹಿಂದೆ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಕ್ರಿಮಿನಲ್ ಪಿತೂರಿಯನ್ನು ಬಯಲಿಗೆಳೆಯಲು ಹಾಗೂ ಈ ಕೊಲೆ ಪ್ರಕರಣದ ಸಂಗತಿಗಳನ್ನು ಹೊರ ತರಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ರಾಜ್ಯ ತನಿಖಾ ಸಂಸ್ಥೆ (SIA) ಇಂದು ತನಿಖೆ ಆರಂಭಿಸಿದ್ದು, ಈ ಬಗ್ಗೆ ಗೊತ್ತಿರುವ ಸಾಕ್ಷ್ಯಗಳಿಗೆ ತಡಕಾಡುತ್ತಿದೆ. ಈ ಘಟನೆ ಬಗ್ಗೆ ಗೊತ್ತಿರುವವರು ಮಾಹಿತಿ ನೀಡಿವಂತೆ ತನಿಖಾ ಸಂಸ್ಥೆ ಮನವಿ ಮಾಡಿದೆ.

ಶ್ರೀನಗರದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಹಾಗೂ ಕಾಶ್ಮೀರಿ ಪಂಡಿತರಾದ ನೀಲಕಾಂತ್ ಗಂಜೂ ಅವರು, 1968 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಅಮರ್ ಚಂದ್ ಕೊಲೆ ಸಂಬಂಧದ ಪ್ರಕರಣದಲ್ಲಿ, JKLF ಸಂಸ್ಥಾಪಕ ಮಕ್ಬೂಲ್ ಭಟ್ ಅವರಿಗೆ ಮರಣದಂಡನೆ ವಿಧಿಸಿದ್ದರು. ಈ ಮರಣದಂಡನೆಯನ್ನು 1982 ರಲ್ಲಿ ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿತ್ತು. ಸುಪ್ರೀಂಕೋರ್ಟ್​​ನ ತೀರ್ಪಿನ ಬಳಿಕ ಭಟ್ ಅವರನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. 9 ಫೆಬ್ರವರಿ 1984 ರಂದು ಅದೇ ಜೈಲಿನಲ್ಲಿ ಸಮಾಧಿ ಕೂಡಾ ಮಾಡಲಾಗಿತ್ತು.

ಇದಾದ ಬಳಿಕ ಶ್ರೀನಗರದ ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ 67 ವರ್ಷದ ನಿವೃತ್ತ ನ್ಯಾಯಾಧೀಶ ಗಂಜೂ ಹತ್ಯೆ ಮಾಡಲಾಗಿತ್ತು. 1989 ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಿಂದಾಗಿ ಅಲ್ಲಿನ ಕಾಶ್ಮೀರಿ ಪಂಡಿತರೆಲ್ಲ ಜಮ್ಮು ಕಡೆಗೆ ವಲಸೆ ಹೋಗಿದ್ದರು.

ಜಡ್ಜ್​ ಗಂಜೂ ಅವರ ಹತ್ಯೆಗೂ ಮೊದಲು ಬಿಜೆಪಿ ನಾಯಕ ಟಿಕಾ ಲಾಲ್ ತಾಪ್ಲೂ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಕಣಿವೆಯಲ್ಲಿ ಉಗ್ರವಾದ ಸ್ಫೋಟಗೊಂಡ ನಂತರ 1989 ಮತ್ತು 1990 ರಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿತ್ತು. ಈ ವೇಳೆ ಹಲವಾರು ಕಾಶ್ಮೀರಿ ಪಂಡಿತರು ಉಗ್ರರ ಗುಂಡಿಗೆ ಬಲಿಯಾಗಿದ್ದರು. ಇದೀಗ ಈ ಎಲ್ಲ ಪ್ರಕರಣಗಳನ್ನು ಜಮ್ಮು ಕಾಶ್ಮೀರ ಪೊಲೀಸ್​ ತನಿಖಾ ಸಂಸ್ಥೆ ಎಸ್​​ಐಎ ಮರು ತನಿಖೆ ನಡೆಸಿ, ಸತ್ಯಾ ಸತ್ಯತೆ ಹೊರ ತರಲು ಮುಂದಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ, ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವಾಜ್ ಉಮರ್ ಫಾರೂಕ್ ಅವರ ತಂದೆ ಮೌಲ್ವಿ ಮುಹಮ್ಮದ್ ಫಾರೂಕ್ ಅವರ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಎಸ್‌ಐಎ ತಿಳಿಸಿದೆ.
ಇದನ್ನು ಓದಿ:ಕುಡಿದ ಅಮಲಿನಲ್ಲಿ ಬಟ್ಟೆ ಎಳೆದ ವ್ಯಕ್ತಿ.. 15 ನಿಮಿಷಗಳ ಕಾಲ ನಡುರಸ್ತೆಯಲ್ಲೇ ವಿವಸ್ತ್ರಳಾಗಿ ನಿಂತು ಕಣ್ಣೀರು ಹಾಕಿದ ಯುವತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.