ETV Bharat / bharat

ಎಸ್​ಸಿ, ಎಸ್​ಟಿ, ಒಬಿಸಿ ಮೀಸಲಾತಿ ಶೇ 77ಕ್ಕೇರಿಕೆ: ಜಾರ್ಖಂಡ್ ಸರ್ಕಾರದ ಮಹತ್ವದ ನಿರ್ಧಾರ

author img

By

Published : Sep 15, 2022, 6:57 AM IST

ಎಸ್​ಸಿ, ಎಸ್​ಟಿ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳ(ಒಬಿಸಿ) ಸದಸ್ಯರಿಗೆ ಶೇ 77 ರಷ್ಟು ಉದ್ಯೋಗ ಮೀಸಲಾತಿ ನೀಡುವುದಾಗಿ ಜಾರ್ಖಂಡ್ ಸರ್ಕಾರ ಬುಧವಾರ ಘೋಷಿಸಿದೆ.

ಮುಖ್ಯಮಂತ್ರಿ ಹೇಮಂತ್ ಸೊರೆನ್
Chief Minister Hemant Soren

ರಾಂಚಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗು ಇತರೆ ಹಿಂದುಳಿದ ವರ್ಗಗಳ ಸದಸ್ಯರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 77 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಜಾರ್ಖಂಡ್ ಸರ್ಕಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಹೇಮಂತ್ ಸೊರೆನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಬಿಸಿ ಮೀಸಲಾತಿಯನ್ನು ಶೇ.14 ರಿಂದ ಶೇ.27ಕ್ಕೆ ಹೆಚ್ಚಿಸಲಾಗಿದೆ. ಇದರ ಜೊತೆಗೆ, ಸ್ಥಳೀಯ ನಿವಾಸಿಗಳನ್ನು ಗುರುತಿಸುುವ 1932 ರ ಭೂ ದಾಖಲೆಗಳನ್ನು ಬಳಸುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. 1932 ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿದ ಕೊನೆಯ ಭೂಮಾಪನದ ಆಧಾರದ ಮೇಲೆ ಸ್ಥಳೀಯರನ್ನು ಗುರುತಿಸಬೇಕೆಂಬ ಆದಿವಾಸಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೀಸಲಾತಿ ಹೆಚ್ಚಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಪುಟ ಕಾರ್ಯದರ್ಶಿ ವಂದನಾ ದಾಡೆಲ್, "ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗಗಳು, ಇತರೆ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲಗೊಂಡ ವರ್ಗಗಳಿಗೆ ಜಾರ್ಖಂಡ್ ಖಾಲಿ ಹುದ್ದೆಗಳ ಮೀಸಲಾತಿ ಮತ್ತು ಸೇವೆಗಳ ಕಾಯ್ದೆ 2001ರ ತಿದ್ದುಪಡಿ ಅನ್ವಯ ಪ್ರತಿಶತ 77 ರಷ್ಟು ಮೀಸಲಾತಿ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ" ಎಂದರು.

ಪ್ರಸ್ತುತ ಜಾರ್ಖಂಡ್‌ ಉದ್ಯೋಗ ಮೀಸಲಾತಿ ನೀತಿಯಲ್ಲಿ, ಎಸ್​ಸಿ ಸಮುದಾಯದ ಸ್ಥಳೀಯ ಜನರು 12%, ಎಸ್​ಟಿ 28%, ಅತ್ಯಂತ ಹಿಂದುಳಿದ ವರ್ಗ 15%, ಒಬಿಸಿ 12% ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ 10% ಮೀಸಲಾತಿ ಇದೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್​ನಲ್ಲಿ ಚಿನ್ನ ಗೆದ್ದವರಿಗೆ 2 ಕೋಟಿ ರೂ. ಘೋಷಿಸಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.