ETV Bharat / bharat

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಸರ್ಕಾರಕ್ಕೆ ಇಕ್ಕಟ್ಟು, ಸಿಎಂ ನೇತೃತ್ವದಲ್ಲಿ ಶಾಸಕರು ಶಿಫ್ಟ್​

author img

By

Published : Aug 27, 2022, 6:30 PM IST

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಜೆಎಂಎಂ, ಕಾಂಗ್ರೆಸ್​ ಹಾಗೂ ಆರ್​ಜೆಡಿ ಪಕ್ಷಗಳ ಮೈತ್ರಿಕೂಟದ ಯುಪಿಎ ಸರ್ಕಾರದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

jharkhand-political-turmoil-bus-took-out-mlas-from-cm-house-in-ranchi
ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಯುಪಿಎ ಸರ್ಕಾರಕ್ಕೆ ಇಕ್ಕಟ್ಟು, ಸಿಎಂ ನೇತೃತ್ವದಲ್ಲಿ ಶಾಸಕರು ಶಿಫ್ಟ್​

ರಾಂಚಿ (ಜಾರ್ಖಂಡ್‌): ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಶಾಸಕ ಸ್ಥಾನದ ಮೇಲೆ ಅನರ್ಹತೆ ತೂಗುಗತ್ತಿ ಹಾಗೂ ಶಾಸಕರ ಕುದುರೆ ವ್ಯಾಪಾರದ ಭೀತಿಯಿಂದ ಕುತೂಹಲಕಾರಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಇಂದು ಏಕಾಏಕಿ ಸ್ವತಃ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದಲ್ಲೇ ಶಾಸಕರು ರಾಜಧಾನಿ ರಾಂಚಿಯಿಂದ ಕುಂತಿ ಜಿಲ್ಲೆಗೆ ತಮ್ಮ ಮೊಕ್ಕಾಂ ಬದಲಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್​ ಹಾಗೂ ಆರ್​ಜೆಡಿ ಪಕ್ಷಗಳ ಮೈತ್ರಿಕೂಟದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎಂಎಂನ 30 ಶಾಸಕರು, ಕಾಂಗ್ರೆಸ್​ನ 18 ಮತ್ತು ಆರ್​ಜೆಡಿಯ ಒಬ್ಬ ಶಾಸಕರು ಹಾಗೂ ಪ್ರತಿಪಕ್ಷ ಬಿಜೆಪಿಯ 26 ಶಾಸಕರಿದ್ದಾರೆ. ಇದೀಗ ಆಡಳಿತಾರೂಢ ಪಕ್ಷಗಳ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಲು ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  • Jharkhand | Visuals from Latratu dam in Khunti dist where UPA legislators went with CM, heavy police force deployed

    All ministers & MLAs are together. We'll go to other places too, don't know where we will go next. Several things in motion right now: Minister Satyanand Bhokta https://t.co/oZVrnheww0 pic.twitter.com/1K1IWrAgSp

    — ANI (@ANI) August 27, 2022 " class="align-text-top noRightClick twitterSection" data=" ">

ಮೊದಲಿಗೆ ಮೂರು ಪಕ್ಷಗಳ ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೇನ್ ನಿವಾಸದಲ್ಲಿ ಸಭೆ ಸೇರಿದ್ದರು. ನಂತರ ಸಿಎಂ ನಿವಾಸದಿಂದ ಮೂರು ಬಸ್‌ಗಳಲ್ಲಿ ಶಾಸಕರು ಹೊರಬಂದರು. ಮೊದಲ ಬಸ್‌ನಲ್ಲಿ ಸ್ವತಃ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅಲ್ಲದೇ, ನಿರಾಳರಾಗಿರುವಂತೆ ಕಂಡು ಬಂದ ಸಿಎಂ ಹೇಮಂತ್ ಸೊರೇನ್ ಯಾವುದೇ ಟೆನ್ಷನ್ ಇಲ್ಲದೆ ಶಾಸಕರೊಂದಿಗೆ ಸೆಲ್ಫಿ ಸಹ ತೆಗೆದುಕೊಂಡಿದ್ದಾರೆ.

  • Two buses, carrying Jharkhand MLAs, left from CM Hemant Soren's residence earlier this afternoon after a meeting of the UPA legislators.

    Pics from inside the buses. pic.twitter.com/nGodgPV7FY

    — ANI (@ANI) August 27, 2022 " class="align-text-top noRightClick twitterSection" data=" ">

ಡ್ಯಾಂ ಪ್ರದೇಶದಲ್ಲಿ ಶಾಸಕರ ಮೊಕ್ಕಾಂ: ರಾಂಚಿಯಿಂದ ಸಿಎಂ ಹೇಮಂತ್ ಸೊರೇನ್ ನೇತೃತ್ವದಲ್ಲಿ ಕುಂತಿ ಜಿಲ್ಲೆಗೆ ಬಂದಿರುವ ಶಾಸಕರು, ಇಲ್ಲಿನ ಲಟ್ರಟು ಡ್ಯಾಂ ಪ್ರದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಜಧಾನಿ ರಾಂಚಿಯಿಂದ ಕೇವಲ 30 ಕಿಮೀ ದೂರದಲ್ಲಿ ಈ ಡ್ಯಾಂ ಇದ್ದು, ಎಲ್ಲ ಶಾಸಕರು ಇಲ್ಲಿಯ ಅತಿಥಿಗೃಹದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಇಡೀ ಪ್ರದೇಶದಲ್ಲಿ ಭಾರಿ ಪೊಲೀಸ್​ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಯುಪಿಎ ಸರ್ಕಾರಕ್ಕೆ ಇಕ್ಕಟ್ಟು, ಸಿಎಂ ನೇತೃತ್ವದಲ್ಲಿ ಶಾಸಕರು ಶಿಫ್ಟ್​

ನಮ್ಮ ಎಲ್ಲ ಸಚಿವರು ಮತ್ತು ಶಾಸಕರು ಒಟ್ಟಿಗೆ ಇದ್ದಾರೆ. ನಾವು ಬೇರೆ ಸ್ಥಳಗಳಿಗೂ ಹೋಗುತ್ತೇವೆ. ಮುಂದೆ ನಾವು ಎಲ್ಲಿಗೆ ಹೋಗುತ್ತೇವೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಹಲವಾರು ವಿಷಯಗಳು ಹರಿದಾಡುತ್ತಿವೆ ಎಂದು ಸಚಿವ ಸತ್ಯಾನಂದ ಭೋಕ್ತಾ ತಿಳಿಸಿದ್ದಾರೆ.

ಸಿಎಂ ನಿವಾಸದಲ್ಲಿ ಸಭೆ ವೇಳೆಯೂ ಎಲ್ಲ ಶಾಸಕರು ಲಗೇಜ್‌ನೊಂದಿಗೆ ಕಾಣಿಸಿಕೊಂಡಿದ್ದರು. ಪ್ರಸ್ತುತ ರಾಜಕೀಯ ಗೊಂದಲದ ನಡುವೆಯೂ ಹೇಮಂತ್ ಸೊರೇನ್​ ತಮ್ಮ ಶಾಸಕರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಶಾಸಕರನ್ನು ರಾಂಚಿಯಿಂದ ಹೊರಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ಕೆಲ ದಿನಗಳ ಹಿಂದೆಯೇ ಅದಕ್ಕೆ ಸಿದ್ಧತೆ ನಡೆದಿದ್ದು, ವೋಲ್ವೋ ಬಸ್ ಕೂಡ ಬುಕ್ ಆಗಿತ್ತು ಎಂದು ಹೇಳಲಾಗುತ್ತಿದೆ. ಶುಕ್ರವಾರವೇ ನಡೆದ ಸಭೆಯಲ್ಲಿ ರಾಂಚಿಯಿಂದ ಹೊರ ಹೋಗಲು ಸಿದ್ಧರಾಗಿ ಬರುವಂತೆ ಶಾಸಕರಿಗೆ ಸೂಚಿಸಲಾಗಿತ್ತು ಎನ್ನಲಾಗುತ್ತಿದೆ.

ಈ ರಾಜಕೀಯ ಬಿಕ್ಕಟ್ಟು ಯಾಕೆ: ಜಾರ್ಖಂಡ್‌ನಲ್ಲಿ ಈ ರಾಜಕೀಯ ಬಿಕ್ಕಟ್ಟಿಗೆ ಮುಖ್ಯ ಕಾರಣ ಗಣಿಗಾರಿಕೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮ ಹೆಸರಿನಲ್ಲಿದ್ದ ಗಣಿಗಾರಿಕೆ ಗುತ್ತಿಗೆಯನ್ನು ವಿಸ್ತರಿಸಿಕೊಂಡು ಕಾನೂನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದರ ಸಂಬಂಧವೇ ಚುನಾವಣಾ ಆಯೋಗವು ಹೇಮಂತ್ ಸೊರೇನ್ ಅವರನ್ನು ಶಾಸಕರಿಂದ ಅನರ್ಹಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ ಎನ್ನಲಾಗುತ್ತಿದೆ. ಈ ಶಿಫಾರಸ್ಸಿವ ವರದಿ ನಂತರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಪ್ರಾರಂಭವಾಗಿದೆ. ಹೀಗಾಗಿಯೇ ಕಳೆದ ಮೂರು ದಿನಗಳಲ್ಲಿ ಯುಪಿಎ ಮೈತ್ರಿಕ್ಕೂಟವು ನಾಲ್ಕನೇ ಸಭೆಯನ್ನು ನಡೆಸಿದೆ.

ಇದನ್ನೂ ಓದಿ: ಹೇಮಂತ್​ ಸೊರೆನ್ ಶಾಸಕ ಸ್ಥಾನಕ್ಕೆ ಕುತ್ತು.. ಕಲ್ಪನಾ ಸೊರೆನ್ ಜಾರ್ಖಂಡ್‌ ಮುಂದಿನ ಸಿಎಂ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.