ETV Bharat / bharat

ಬಿಜೆಪಿಯ ಕುದುರೆ ವ್ಯಾಪಾರ ಭೀತಿ ನಡುವೆ ರಾಂಚಿಗೆ ಮರಳಿದ ಶಾಸಕರು: ವಿಶ್ವಾಸಮತಯಾಚನೆಗೆ ಸಿಎಂ ಸೋರೆನ್ ಸಜ್ಜು

author img

By

Published : Sep 4, 2022, 10:59 PM IST

ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೇಮಂತ್​ ಸೋರೆನ್ ವಿಶ್ವಾಸಮತಯಾಚಿಸಲಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

jharkhand-crisis-mlas-back-in-ranchi-soren-to-seek-trust-vote-on-monday
ಬಿಜೆಪಿಯ ಕುದುರೆ ವ್ಯಾಪಾರ ಭೀತಿ ನಡುವೆ ರಾಂಚಿಗೆ ಮರಳಿದ ಶಾಸಕರು: ವಿಶ್ವಾಸಮತಯಾಚನೆಗೆ ಸಿಎಂ ಸೋರೆನ್ ಸಜ್ಜು

ರಾಯಪುರ/ರಾಂಚಿ: ಪ್ರತಿಪಕ್ಷದ ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ ಭೀತಿಯಿಂದ ಛತ್ತೀಸ್‌ಗಢದ ರಾಯಪುರದ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದ ಜಾರ್ಖಂಡ್​ನ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ಇಂದು ವಿಮಾನದಲ್ಲಿ ರಾಜಧಾನಿ ರಾಂಚಿಗೆ ಮರಳಿದ್ದಾರೆ. ಇತ್ತ, ಮುಖ್ಯಮಂತ್ರಿ ಹೇಮಂತ್​ ಸೋರೆನ್ ತಮ್ಮ ಸರ್ಕಾರದ ಅಸ್ಥಿತ್ವವನ್ನು ಖಾತ್ರಿ ಪಡಿಸಲು ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತಯಾಚಿಸಲಿದ್ದಾರೆ.

ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿ ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂಬ ಆತಂತಕದಿಂದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಕಾಂಗ್ರೆಸ್​ ನೇತೃತ್ವದ ಯುಪಿಎ ಮೈತ್ರಿಕೂಟವು ತನ್ನ ಶಾಸಕರನ್ನು ರಾಜ್ಯದಿಂದ ಸ್ಥಳಾಂತರ ಮಾಡಿತ್ತು. ತನ್ನ ಎಲ್ಲ ಶಾಸಕರನ್ನು ರಾಯಪುರ ಸಮೀಪದ ಐಷಾರಾಮಿ ರೆಸಾರ್ಟ್​ಗೆ ಸ್ಥಳಾಂತರಿಸಲಾಗಿತ್ತು. ಆಗಸ್ಟ್ 30ರಿಂದಲೂ ರೆಸಾರ್ಟ್‌ನಲ್ಲಿ ಶಾಸಕರು ಬೀಡು ಬಿಟ್ಟಿದ್ದರು.

ಇಂದು ಸುಮಾರು 30 ಶಾಸಕರು ರಾಯಪುರದಂದ ರಾಜಧಾನಿ ರಾಂಚಿಗೆ ಮರಳಿದ್ದು, ಶಾಸಕರಿದ್ದ ವಿಮಾನವು ಸಂಜೆ 6 ಗಂಟೆ ಸುಮಾರಿಗೆ ರಾಂಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನ ನಿಲ್ದಾಣದಿಂದ ಎರಡು ಬಸ್‌ಗಳಲ್ಲಿ ಕರೆತಂದು ರಾಂಚಿಯ ಜೈಲ್ ಚೌಕ್ ಪ್ರದೇಶದ ಬಳಿ ಇರುವ ಸರ್ಕ್ಯೂಟ್ ಹೌಸ್‌ಗೆ ಶಾಸಕರನ್ನು ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್​ ಹಾಗೂ ಆರ್​ಜೆಡಿ ಪಕ್ಷಗಳ ಮೈತ್ರಿಕೂಟದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎಂಎಂನ 30 ಶಾಸಕರು, ಕಾಂಗ್ರೆಸ್​ನ 18 ಮತ್ತು ಆರ್​ಜೆಡಿಯ ಒಬ್ಬ ಶಾಸಕರು ಹಾಗೂ ಪ್ರತಿಪಕ್ಷ ಬಿಜೆಪಿಯ 26 ಶಾಸಕರಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಸರ್ಕಾರಕ್ಕೆ ಇಕ್ಕಟ್ಟು, ಸಿಎಂ ನೇತೃತ್ವದಲ್ಲಿ ಶಾಸಕರು ಶಿಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.