ETV Bharat / bharat

ಲೈಂಗಿಕ ಕಿರುಕುಳ ಆರೋಪ: ವಿಚಾರಣೆಗೆ ಹಾಜರಾದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ

author img

By

Published : May 22, 2023, 4:18 PM IST

Updated : May 22, 2023, 4:38 PM IST

IYC President Srinivas BV reaches Guwahati to face questioning in sexual harassment case
ಲೈಂಗಿಕ ಕಿರುಕುಳ ಆರೋಪ: ವಿಚಾರಣೆಗೆ ಹಾಜರಾದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ

ಉಚ್ಚಾಟಿತ ಯುವ ಕಾಂಗ್ರೆಸ್ ನಾಯಕಿ ಅಂಗಿತಾ ದತ್ತಾ ದಾಖಲಿಸಿರುವ ಪ್ರಕರಣದ ವಿಚಾರಣೆಗಾಗಿ ಶ್ರೀನಿವಾಸ್ ಬಿ ವಿ ಇಂದು ಅಸ್ಸೋಂ ಪೊಲೀಸರ ಮುಂದೆ ಹಾಜರಾದರು.

ಗುವಾಹಟಿ(ಅಸ್ಸೋಂ): ಇಲ್ಲಿನ ಉಚ್ಚಾಟಿತ ಯುವ ಕಾಂಗ್ರೆಸ್ ನಾಯಕಿ ಅಂಗಿತಾ ದತ್ತಾ ದಾಖಲಿಸಿರುವ ಲೈಂಗಿಕ ಮತ್ತು ಮಾನಸಿಕ ಕಿರುಕುಳ ಪ್ರಕರಣದ ವಿಚಾರಣೆಗಾಗಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಇಂದು (ಸೋಮವಾರ) ಗುವಾಹಟಿಯಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಮುಂಜಾನೆ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. ಅಲ್ಲಿಂದ ಅವರು ಬೆಳಗ್ಗೆ 11 ಗಂಟೆಗೆ ಪನ್‌ಬಜಾರ್ ಮಹಿಳಾ ಪೊಲೀಸ್ ಠಾಣೆಯನ್ನು ತಲುಪಿದರು.

ಈ ವೇಳೆ, ಅವರೊಂದಿಗೆ ಶ್ರೀನಿವಾಸ್ ಅವರ ವಕೀಲರು ಮತ್ತು ಶಾಸಕರಾದ ರಾಕಿಬುಲ್ ಹುಸೇನ್ ಮತ್ತು ರೆಕಿಬುದ್ದೀನ್ ಅಹ್ಮದ್ ಸೇರಿದಂತೆ ಅಸ್ಸೋಂ ಕಾಂಗ್ರೆಸ್ ನಾಯಕರು ಇದ್ದರು. ಪೊಲೀಸ್ ಠಾಣೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ವಿಚಾರಣೆಯ ನಂತರ ಅವರು ನಗರದ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಚೇರಿಗೆ ತೆರಳಿದರು. ಒಂದು ಗಂಟೆಯ ನಂತರ ಕಚೇರಿಯಿಂದ ಹೊರಬಂದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಷಯ ನ್ಯಾಯಾಲಯದಲ್ಲಿದೆ ಎಂದು ಹೇಳಿದರು. ಇದೇ ಪ್ರಕರಣದಲ್ಲಿ ಶ್ರೀನಿವಾಸ್​ಗೆ ಸಿಐಡಿ ಪ್ರತ್ಯೇಕ ನೋಟಿಸ್ ಕೂಡ ಜಾರಿ ಮಾಡಿತ್ತು.

ಪ್ರಕರಣದ ಹಿನ್ನೆಲೆ ಏನು?: ಶ್ರೀನಿವಾಸ್ ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಮತ್ತು ತನ್ನ ವಿರುದ್ಧ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದತ್ತಾ ಏಪ್ರಿಲ್ 20 ರಂದು ದಿಸ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಕ್ಷದ ಹಿರಿಯ ಪದಾಧಿಕಾರಿಗಳು. ರಾಯ್‌ಪುರದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸರ್ವಸದಸ್ಯರ ಅಧಿವೇಶನದ ವೇಳೆ ದೈಹಿಕವಾಗಿ ಕಿರುಕುಳ ನೀಡಿದ್ದರು ಮತ್ತು ತಮ್ಮ ವಿರುದ್ಧ ದೂರು ನೀಡಿದರೆ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ದತ್ತಾ ಅವರು ಏಪ್ರಿಲ್ 18 ರಂದು ಸರಣಿ ಟ್ವೀಟ್‌ಗಳ ಮೂಲಕ ಐವೈಸಿ ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದರು. ಏಪ್ರಿಲ್ 20 ರಂದು ಎಫ್‌ಐಆರ್ ದಾಖಲಾದ ನಂತರ, ಗುವಾಹಟಿ ಪೊಲೀಸರ ಐವರ ತಂಡವು ಏಪ್ರಿಲ್ 23 ರಂದು ಬೆಂಗಳೂರಿಗೆ ತೆರಳಿ ಶ್ರೀನಿವಾಸ್ ಅವರ ನಿವಾಸಕ್ಕೆ ಸೂಚನೆಯನ್ನು ಅಂಟಿಸಿ. ಮೇ 2 ರೊಳಗೆ ದಿಸ್ಪುರ್ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂದು ತಿಳಿಸಿತ್ತು. ಇದಾದ ನಂತರ ಕಾಂಗ್ರೆಸ್ ದತ್ತಾ ಅವರಿಗೆ ಶೋಕಾಸ್ ನೋಟಿಸ್ ನೀಡಿ, ನಂತರ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಪಡಿಸಿತ್ತು.

ಶ್ರೀನಿವಾಸ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಗೌಹಾಟಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು, ಅದು ತಿರಸ್ಕೃತಗೊಂಡಾಗ, ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೇ 17 ರಂದು ಸುಪ್ರೀಂ ಕೋರ್ಟ್ ಅವರಿಗೆ ಪ್ರಕರಣದಲ್ಲಿ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿ, ತನಿಖೆಗೆ ಸಹಕರಿಸುವಂತೆ ಹಾಗೂ ಮೇ 22ರಂದು ಗುವಾಹಟಿಯಲ್ಲಿ ಪೊಲೀಸರ ಮುಂದೆ ಹಾಜರಾಗುವಂತೆ ಶ್ರೀನಿವಾಸ್‌ಗೆ ಸೂಚಿಸಿತ್ತು.

ಇದನ್ನೂ ಓದಿ:ಫೋಗಟ್, ಪುನಿಯಾ ನಾರ್ಕೋ ಪರೀಕ್ಷೆಗೆ ಒಪ್ಪಿದರೆ ನಾನೂ ಸಿದ್ಧ: ಬ್ರಿಜ್ ಭೂಷಣ್ ಶರಣ್ ಸಿಂಗ್

Last Updated :May 22, 2023, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.