ETV Bharat / bharat

ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಮಹಿಳೆಯ ಬಂಧನ

author img

By

Published : Aug 1, 2023, 2:28 PM IST

Representative image
ಪ್ರಾತಿನಿಧಿಕ ಚಿತ್ರ

Hoax Bomb Claim: ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಪ್ರಕ್ರಿಯೆಗೆ ವಿಳಂಬವಾದ್ದರಿಂದ ಕೆರಳಿದ ಮಹಿಳೆಯಿಂದ ಹುಸಿ ಬಾಂಬ್​ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಕೊಚ್ಚಿ (ಕೇರಳ): ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಪ್ರಕ್ರಿಯೆಗೆ ವಿಳಂಬವಾದ್ದರಿಂದ ಸಿಟ್ಟಿಗೆದ್ದ ಮಹಿಳಾ ವಿಮಾನ ಪ್ರಯಾಣಿಕರೊಬ್ಬರು ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈಗೆ ತೆರಳಬೇಕಿದ್ದ ವಿಮಾನವನ್ನು ಸುಮಾರು ಒಂದು ಗಂಟೆ ತಡ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ವಿರುದ್ಧ ದೂರು ದಾಖಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದರು.

ಬೆಳಗ್ಗೆ 6 ಗಂಟೆ ಸುಮಾರಿಗೆ ಟೇಕ್ ಆಫ್ ಆಗಬೇಕಿದ್ದ ಕೊಚ್ಚಿ - ಮುಂಬೈ ವಿಮಾನದ ಚೆಕ್ - ಇನ್ ಪ್ರಕ್ರಿಯೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಮಾಹಿತಿ ನೀಡಿವೆ. ಚೆಕ್ - ಇನ್ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಸಿಟ್ಟಿಗೆದ್ದ ಮಹಿಳೆ ತನ್ನ ಸಾಮಾನು ಸರಂಜಾಮುಗಳಲ್ಲಿ ಬಾಂಬ್ ಇತ್ತು. ಇದು ಲಗೇಜ್ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಕಾರಣವಾಯಿತು ಮತ್ತು ಪರಿಣಾಮವಾಗಿ ತಾನು ಪ್ರಯಾಣಿಸಬೇಕಿದ್ದ ವಿಮಾನದ ನಿಗದಿತ ನಿರ್ಗಮನವು ಸುಮಾರು ಒಂದು ಗಂಟೆ ವಿಳಂಬವಾಯಿತು ಎಂದು ಮಹಿಳೆ ಹೇಳಿದ್ದರು. ನೆಡುಂಬಶ್ಶೇರಿ ಪೊಲೀಸ್ ಠಾಣೆಯ ಅಧಿಕಾರಿ ಆಕೆಯ ಹೇಳಿಕೆ ದಾಖಲಿಸಿಕೊಂಡು ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮೀರತ್‌ನ ಮಿಲಿಟರಿ ವಸತಿ ಪ್ರದೇಶದಲ್ಲಿ ಬಾಂಬ್​ ಬೆದರಿಕೆ ಪತ್ರ ಪತ್ತೆ

ಹುಸಿ ಬಾಂಬ್​ ಬೆದರಿಕೆ ಪ್ರಯಾಣಿಕನ ಬಂಧನ: ಹುಸಿ ಬಾಂಬ್​ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಘಟನೆ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿತ್ತು. ಪತ್ತನಂತಿಟ್ಟ ಮೂಲದ ಸಾಬು ವರ್ಗೀಸ್ (55) ಅವರನ್ನು ನೆಡುಂಬಶ್ಶೇರಿ ಪೊಲೀಸರು ಬಂಧಿಸಿದ್ದರು. ಕಳೆದ ಗುರುವಾರ(ಜು.28) ರಾತ್ರಿ ಈ ಘಟನೆ ನಡೆದಿತ್ತು. ನೆಡುಂಬಶ್ಶೇರಿಯಿಂದ ದುಬೈಗೆ ತೆರಳಲು ಬಂದಿದ್ದರು. ಆರೋಪಿಯನ್ನು ಬಂಧಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.

ವಿಮಾನ ಹತ್ತುವ ಮುನ್ನ ಭದ್ರತಾ ತಪಾಸಣೆ ವೇಳೆ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಾಬು ವರ್ಗೀಸ್​ ಮೇಲಿತ್ತು. ವಿಮಾನ ನಿಲ್ದಾಣದಲ್ಲಿ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ ತಪಾಸಣೆ ನಡೆಸುತ್ತಿದ್ದಾಗ ಭದ್ರತಾ ಅಧಿಕಾರಿಗೆ ಮುಂದಿನ ಪ್ರಯಾಣಿಕನ ಬ್ಯಾಗ್​ನಲ್ಲಿ ಬಾಂಬ್ ಇರುವುದಾಗಿ ತಿಳಿಸಿದ್ದ. ತುರ್ತು ಕ್ರಮಗಳ ಭಾಗವಾಗಿ ಪ್ರಯಾಣಿಕರನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.