ETV Bharat / bharat

ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್​.. ಲೇಡಿ ಪೊಲೀಸ್​ ರಹಸ್ಯ ಕಾರ್ಯಾಚರಣೆಗೆ ಬೆಪ್ಪಾದ ಮೆಡಿಕಲ್​ ವಿದ್ಯಾರ್ಥಿಗಳು

author img

By

Published : Dec 13, 2022, 9:06 AM IST

Updated : Dec 13, 2022, 2:04 PM IST

indore-ragging-case
ವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್

ಮಧ್ಯಪ್ರದೇಶ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್​​ ಭೂತವನ್ನು ಬಿಡಿಸಲು ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

ಇಂದೋರ್(ಮಧ್ಯಪ್ರದೇಶ): ಕಾಲೇಜುಗಳಲ್ಲಿ ಸೀನಿಯರ್​ಗಳು ಜೂನಿಯರ್​ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್​ ಮಾಡುವುದು ಸಹಜ. ಆದರೆ, ಅದು ಅತಿರೇಕವಾದಾಗ ಪ್ರಾಣಾಪಾಯಗಳು ಸಂಭವಿಸಿವೆ. ಇದೇ ರೀತಿ ಮಧ್ಯಪ್ರದೇಶದ ಇಂದೋರ್​ನ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್​​ನಿಂದಾಗಿ ವಿದ್ಯಾರ್ಥಿನಿಯರು ತೀವ್ರ ಬೇಸತ್ತಿದ್ದರು. ಇದನ್ನು ಮಟ್ಟಹಾಕಲು ಪೊಲೀಸರು ಮಾಡಿದ ಐಡಿಯಾ ದೇಶದ ಗಮನ ಸೆಳೆದಿದೆ.

ಕಾಲೇಜಿನಲ್ಲಿ ವಿಪರೀತವಾಗಿ ರ‍್ಯಾಗಿಂಗ್​ ನಡೆಯುತ್ತಿತ್ತು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ನಿಗೂಢವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದರ ಪತ್ತೆಗೆ ತಾವೇ ಅಖಾಡಕ್ಕಿಳಿದಿದ್ದಾರೆ. ಪೊಲೀಸ್​ ಕಾನ್​ಸ್ಟೇಬಲ್​ ಶಾಲಿನಿ ಚೌಹಾಣ್​ ಅವರನ್ನು ವಿದ್ಯಾರ್ಥಿನಿಯ ರೂಪದಲ್ಲಿ ಕಾಲೇಜಿಗೆ ನಿತ್ಯ ಕಳುಹಿಸಿದ್ದಾರೆ.

ಶಾಲಿನಿ ಅವರು, ದಿನವೂ ಕಾಲೇಜಿಗೆ ತೆರಳಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿನಿಗಳ ಜೊತೆಗೆ ಮಾತುಕತೆ ನಡೆಸಿ ರ‍್ಯಾಗಿಂಗ್​​ ಮಾಡುವವರನ್ನು ಗುರುತಿಸಿದ್ದಾರೆ. ಬಳಿಕ 11 ಮಂದಿಯನ್ನು ಬಂಧಿಸಲಾಗಿದೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಹೈಪ್ರೊಫೈಲ್​ ರ‍್ಯಾಗಿಂಗ್​​ ಅನ್ನು ಪೊಲೀಸರು ತಂತ್ರ ರೂಪಿಸಿ ತಡೆದಿದ್ದಾರೆ.

ವಿದ್ಯಾರ್ಥಿನಿಯಾಗಿ ಕಾಲೇಜಿಗೆ ತೆರಳಿ ರಹಸ್ಯ ಕಾರ್ಯಾಚರಣೆ ನಡೆಸಿದ ಶಾಲಿನಿ ಅವರು ಈಚೆಗಷ್ಟೇ ಪೊಲೀಸ್​ ಹುದ್ದೆಗೆ ಸೇರಿಕೊಂಡಿದ್ದರು. ಅವರ ತಂದೆಯ ಅಕಾಲಿಕ ಮರಣದಿಂದಾಗಿ ಶಾಲಿನಿಗೆ ಅನುಕಂಪದ ಆಧಾರದ ಈ ಹುದ್ದೆ ನೀಡಲಾಗಿತ್ತು. ಕೆಲಸ ಆರಂಭಿಸಿದ ಕೆಲವೇ ದಿನಗಳಲ್ಲಿ ಶಾಲಿನಿ ಅವರು ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ.

ಮೊದಲು ನನ್ನ ಮನಸ್ಸು ರಹಸ್ಯ ಕಾರ್ಯಾಚರಣೆಗೆ ಒಪ್ಪಿಕೊಳ್ಳಲಿಲ್ಲ. ಈ ಹುದ್ದೆ ನನಗೆ ಹೊಸತು. ಬಳಿಕ ಪೊಲೀಸ್​ ಹುದ್ದೆ ಅಂದ ಮೇಲೆ ಇವೆಲ್ಲಾ ಇದ್ದದ್ದೇ ಎಂದು ತಿಳಿದು, ಕಾರ್ಯಾಚರಣೆಗೆ ಮುಂದಾದೆ ಎಂದು ಶಾಲಿನಿ ಅವರು ಹೇಳಿದರು.

ಓದಿ: ವಿಡಿಯೋ ಕಾಲ್​ ಮೂಲಕ ಹೆರಿಗೆ.. ಆಸ್ಪತ್ರೆಯಲ್ಲಿ ತಾಯಿ-ಮಗು ಸಾವು

Last Updated :Dec 13, 2022, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.