ETV Bharat / bharat

ದೇಶದ ಕೋವಿಡ್​ ಸಕ್ರಿಯ​ ಕೇಸ್​ಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ: ಚೇತರಿಕೆ ಪ್ರಮಾಣ ಶೇ. 96.16ಕ್ಕೆ ಏರಿಕೆ

author img

By

Published : Jun 19, 2021, 10:05 AM IST

ಭಾರತದಲ್ಲಿ ಇಲ್ಲಿಯವರೆಗೆ 2,86,78,390 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು, ಗುಣಮುಖರ ಪ್ರಮಾಣ ಶೇ. 96.16ಕ್ಕೆ ಹೆಚ್ಚಳವಾಗಿದೆ.

India COVID-19 tracker
ಭಾರತದ ಕೋವಿಡ್​ ವರದಿ

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೊರೊನಾ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಾಗಿರುವ ಕಾರಣ ಚೇತರಿಕೆ ಪ್ರಮಾಣ ಶೇ. 96.16ಕ್ಕೆ ಏರಿಕೆಯಾಗಿದೆ. ಅಲ್ಲದೇ 74 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷ ಗಡಿಯಿಂದ ಕೆಳಗಿಳಿದಿದ್ದು, ದೇಶದಲ್ಲೀಗ 7,60,019 ಕೇಸ್​ಗಳು ಮಾತ್ರ ಆ್ಯಕ್ಟೀವ್ ಆಗಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 60,753 ಸೋಂಕಿತರು ಪತ್ತೆಯಾಗಿದ್ದು, 1,647 ಮಂದಿ ವೈರಸ್​ ಸುಳಿಯಿಂದ ಬಿಡಿಸಿಕೊಳ್ಳಲಾರದೇ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,98,23,546 ಹಾಗೂ ಮೃತರ ಸಂಖ್ಯೆ 3,85,137ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 2,86,78,390 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

India COVID-19 tracker
27.23 ಕೋಟಿ ಡೋಸ್​ ವ್ಯಾಕ್ಸಿನೇಷನ್​

27.23 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಜನವರಿ 16ರಿಂದ ಈವರೆಗೆ ಕೊರೊನಾ​ ಲಸಿಕೆಯ 27,23,88,783 ಡೋಸ್​ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ ಸುಮಾರು 22.11 ಕೋಟಿ ಜನರು ಮೊದಲ ಡೋಸ್​ ಮಾತ್ರ ಪಡೆದಿದ್ದಾರೆ. 5.4 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.