ETV Bharat / bharat

ಪಂಚ ರಾಜ್ಯಗಳ ಚುನಾವಣೆ ಭರಾಟೆ ನಡುವೆ ಕೋವಿಡ್​ ಕಂಟ್ರೋಲ್​ ಮಾಡಿದ ಭಾರತ.. ಇಂದಿನ ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತೇ?

author img

By

Published : Jan 17, 2022, 9:50 AM IST

India covid reports  India COVID cases  India fight against coronavirus  India lockdown  ಭಾರತದ ಕೋವಿಡ್​ ವರದಿ  ಭಾರತದ ಕೋವಿಡ್​ ಪ್ರಕರಣಗಳು  ಕೊರೊನಾ ವೈರಸ್​ ವಿರುದ್ಧ ಭಾರತದ ಹೋರಾಟ  ಭಾರತ ಲಾಕ್​ಡೌನ್​
ಭಾರತದ ಕೋವಿಡ್​ ವರದಿ

ಭಾರತದಲ್ಲಿ ಇಂದು 2,58,089 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆಗಿಂತ ಸುಮಾರು 13 ಸಾವಿರದಷ್ಟು ಇಳಿಕೆ ಕಂಡಿದೆ.

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಯಲ್ಲಿ 2,58,089 ಸೋಂಕಿತರು ಪತ್ತೆಯಾಗಿದ್ದು, ಸುಮಾರು ನಿನ್ನೆ ಪ್ರಕರಣಗಳಿಂದ 13 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಮಾಹಿತಿ ನೀಡಿದೆ.

  • India reports 2,58,089 COVID cases (13,113 less than yesterday), 385 deaths, and 1,51,740 recoveries in the last 24 hours.

    Active case: 16,56,341
    Daily positivity rate: 119.65%

    Confirmed cases of Omicron: 8,209 pic.twitter.com/Fi345RsMuw

    — ANI (@ANI) January 17, 2022 " class="align-text-top noRightClick twitterSection" data=" ">

ಒಂದು ದಿನದಲ್ಲಿ 1,51,740 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆಯೂ ಗಣನೀಯವಾಗಿ (352,37,461) ಹೆಚ್ಚಾಗಿರುವುದು ಸಂತಸದ ಸಂಗತಿಯಾಗಿದೆ. ದೇಶದಲ್ಲಿ ಒಟ್ಟು 16,56,341 ಸಕ್ರಿಯ ಪ್ರಕರಣಗಳು ಇವೆ. ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 119.65ರಷ್ಟಿದೆ.

ಕಳೆದ 24 ಗಂಟೆಯಲ್ಲಿ 385 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಸುಮಾರು 4,86,451 ಮಂದಿ ಮೃತಪಟ್ಟಿದ್ದಾರೆ. ಇನ್ನು 8,209 ಒಮಿಕ್ರಾನ್ ಕೇಸ್​ಗಳು ದೃಢಪಟ್ಟಿವೆ. ಒಟ್ಟು ಇಲ್ಲಿಯವರೆಗೆ 158.12 ಕೋಟಿಗಳ ಡೋಸ್​ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಒಟ್ಟು ಒಮಿಕ್ರಾನ್​​ ಸಂಖ್ಯೆ: 8,209

ಒಮಿಕ್ರಾನ್​ನಿಂದ ಗುಣಮುಖರಾಗಿ ಬಿಡುಗಡೆಗೊಂಡವರು: 3,109

ಮಹಾರಾಷ್ಟ್ರ - 1738

ಪಶ್ಚಿಮ ಬಂಗಾಳ - 1672

ರಾಜಸ್ಥಾನ - 1276

ದೆಹಲಿ - 549

ಕರ್ನಾಟಕ - 548

ETV Bharat Logo

Copyright © 2024 Ushodaya Enterprises Pvt. Ltd., All Rights Reserved.