ETV Bharat / bharat

COVID Report.. ದೇಶದಲ್ಲಿ 230 ದಿನಗಳ ಬಳಿಕ ಅತಿ ಕಡಿಮೆ ಸೋಂಕಿತರು ಪತ್ತೆ

author img

By

Published : Oct 18, 2021, 10:52 AM IST

India covid report
India covid report

ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 3,40,81,315 ಜನರಿಗೆ ಕೊರೊನಾ ವೈರಸ್​​ ಅಂಟಿದ್ದು, ಇವರಲ್ಲಿ ಶೇ.98.12ರಷ್ಟು ಮಂದಿ ಗುಣಮುಖರಾಗಿದ್ದಾರೆ.

ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 13,596 ಮಂದಿ ಕೊರೊನಾ​ ಸೋಂಕಿತರು ಪತ್ತೆಯಾಗಿದ್ದು, 230 ದಿನಗಳ ಬಳಿಕ ಇಷ್ಟು ಕಡಿಮೆ ಕೇಸ್​ಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಭಾನುವಾರ 166 ಮಂದಿ ಸೋಂಕಿಗೆ ಬಲಿಯಾಗಿದ್ದು, ಕೋವಿಡ್​ ಮೃತರ ಸಂಖ್ಯೆ 4,52,290 ಹೆಚ್ಚಳವಾಗಿದೆ. ಇಲ್ಲಿಯವರೆಗೆ ಒಟ್ಟು 3,40,81,315 ಜನರಿಗೆ ವೈರಸ್​​​ ಅಂಟಿದ್ದು, ಇವರಲ್ಲಿ ಶೇ.98.12ರಷ್ಟು ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. 221 ದಿನಗಳ ಬಳಿಕ ಆ್ಯಕ್ಟಿವ್​ ಕೇಸ್​ ಪ್ರಮಾಣ ಶೇ.0.56 ಕ್ಕೆ ಇಳಿಕೆಯಾಗಿದ್ದು, ಪ್ರಸ್ತುತ 1,89,694 ಪ್ರಕರಣಗಳು ಸಕ್ರಿಯವಾಗಿದೆ.

ಇದನ್ನೂ ಓದಿ: ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಟಿವಿ, ಮೊಬೈಲ್ ಗೆಲ್ಲಿ!

97.79 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 97,79,47,783 ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ಕರ್ನಾಟಕದಲ್ಲೇ 6,08,92,368 ಡೋಸ್​ ವ್ಯಾಕ್ಸಿನ್​ ಹಾಕಲಾಗಿದ್ದು, ಶೇ.38ರಷ್ಟು ಜನರು ಎರಡೂ ಡೋಸ್ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.