ETV Bharat / bharat

'ತನ್ನ ಮನೆ ಶುದ್ಧವಾಗಿಟ್ಟುಕೊಂಡರೆ ಉತ್ತಮ': ಪಾಕ್​ಗೆ ಭಾರತದ ಮಾತಿನ ಏಟು!

author img

By

Published : Feb 25, 2021, 1:23 PM IST

ಪಾಕಿಸ್ತಾನದ ಪ್ರತಿನಿಧಿ ಭಾರತದ ವಿರುದ್ಧ ಆಧಾರರಹಿತ ಮತ್ತು ದುರುದ್ದೇಶಪೂರಿತ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಪಾಕಿಸ್ತಾನವು ವಿವಿಧ ವೇದಿಕೆಗಳನ್ನು ನಿರಂತರವಾಗಿ ದುರುಪಯೋಗಪಡಿಸಿಕೊಳ್ಳುವುದು ಹೊಸತಲ್ಲ ಎಂದು ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಯುಎನ್​ನ ಎರಡನೇ ಕಾರ್ಯದರ್ಶಿ ಸೀಮಾ ಪೂಜಾರಿ ಹೇಳಿದರು.

UNHRC
ಪಾಕ್​ಗೆ ಭಾರತದ ಮಾತಿನ ಏಟು

ನವದೆಹಲಿ: ಮಾನವ ಹಕ್ಕುಗಳ ಮಂಡಳಿಯ (ಎಚ್‌ಆರ್‌ಸಿ) 46ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದಲ್ಲಿ ಪಾಕಿಸ್ತಾನದ ಪ್ರತಿನಿಧಿಯೊಬ್ಬರು ಭಾರತದ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಭಾರತವು ತನ್ನ ಉತ್ತರಿಸುವ ಹಕ್ಕನ್ನು ಬುಧವಾರದಂದು ಚಲಾಯಿಸಿದೆ.

ಭಾರತದ ಉತ್ತರದ ಹಕ್ಕನ್ನು ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಯುಎನ್​ನ ಎರಡನೇ ಕಾರ್ಯದರ್ಶಿ ಸೀಮಾ ಪೂಜಾರಿ ಅವರು ಮಂಡಿಸಿದರು.

"ಪಾಕಿಸ್ತಾನದ ಪ್ರತಿನಿಧಿ ಈ ಆಗಸ್ಟ್ ಫೋರಂ ಅನ್ನು ಮತ್ತೊಮ್ಮೆ ದುರುಪಯೋಗಪಡಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿರುವುದರಲ್ಲಿ ನಮಗೆ ಆಶ್ಚರ್ಯವಿಲ್ಲ. ಭಾರತದ ವಿರುದ್ಧ ಆಧಾರರಹಿತ ಮತ್ತು ದುರುದ್ದೇಶಪೂರಿತ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಪಾಕಿಸ್ತಾನವು ವಿವಿಧ ವೇದಿಕೆಗಳನ್ನು ನಿರಂತರವಾಗಿ ದುರುಪಯೋಗಪಡಿಸಿಕೊಳ್ಳುವುದು ಹೊಸತಲ್ಲ" ಎಂದು ಅವರು ಹೇಳಿದರು.

"ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗವಾಗಿದೆ ಎಂದು ನಾವು ಪುನರುಚ್ಚರಿಸುತ್ತೇವೆ. ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೈಗೊಂಡ ಕ್ರಮಗಳು ನಮ್ಮ ಆಂತರಿಕ ವಿಷಯಗಳು" ಎಂದು ಅವರು ಹೇಳಿದರು.

ಮಂಗಳವಾರ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರದ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮರ್ಜಾರಿ ಟೀಕಿಸಿದ ಬಳಿಕ ಸೀಮಾ ಪೂಜಾರಿ ಆಕ್ರೋಶ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ.

"ವಿಶ್ವದ ಅತ್ಯಂತ ಕೆಟ್ಟ ಮಾನವ ಹಕ್ಕುಗಳ ದಾಖಲೆಗಳನ್ನು ಹೊಂದಿರುವ ದೇಶವಾಗಿರುವ ಪಾಕಿಸ್ತಾನವು ಭಾರತದತ್ತ ಬೆರಳು ತೋರಿಸಲು ಮುಂದಾಗುವ ಮೊದಲು, ತನ್ನದೇ ಆದ ಮನೆಯನ್ನು ಕ್ರಮವಾಗಿ ಇಟ್ಟುಕೊಳ್ಳುವುದು ಉತ್ತಮ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ ಪಾಕಿಸ್ತಾನದ ಅಲ್ಪಸಂಖ್ಯಾತರು ಎದುರಿಸುತ್ತಿರುವ ಹಿಂಸೆ, ಸಾಂಸ್ಥಿಕ ತಾರತಮ್ಯ ಮತ್ತು ಕಿರುಕುಳವು ನಿರಂತರವಾಗಿ ಅಲ್ಲಿ ಮುಂದುವರೆದಿದೆ ಎಂದು ಪೂಜಾರಿ ಒತ್ತಿ ಹೇಳಿದ್ದಾರೆ.

"ಅಲ್ಪಸಂಖ್ಯಾತ ಸಮುದಾಯಗಳ ಪೂಜಾ ಸ್ಥಳಗಳ ಮೇಲೆ ಆಗಾಗ್ಗ ದಾಳಿಗಳು ನಡೆಯುತ್ತಿವೆ. ಇದು ಅವರ ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯದ ಹಕ್ಕಿನ ಗಂಭೀರ ಉಲ್ಲಂಘನೆಯಾಗಿದೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.