ETV Bharat / bharat

ಕೋವಿಡ್‌: 1,134 ಸೋಂಕಿತರು ಪತ್ತೆ; 7 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ

author img

By

Published : Mar 22, 2023, 12:28 PM IST

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,134 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,000 ದಾಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

covid
ಕೋವಿಡ್

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಕಳೆದೊಂದು ದಿನದಲ್ಲಿ 1,134 ಹೊಸ ಕೋವಿಡ್​ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,026 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಛತ್ತೀಸ್‌ಗಢ, ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 5,30,813 ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ದೈನಂದಿನ ಪಾಸಿಟಿವಿಟಿ ದರ 1.09 ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇಕಡಾ 0.98 ಇದೆ. ದೇಶದಲ್ಲಿ ಇದುವರೆಗೆ 4.46 ಕೋಟಿ (4,46,98,118) ಮಂದಿಗೆ ಸೋಂಕು ತಗುಲಿದೆ. ರಾಷ್ಟ್ರೀಯ COVID-19 ಚೇತರಿಕೆ ದರವು 98.79 ಪ್ರತಿಶತದಷ್ಟು ದಾಖಲಾಗಿದೆ. ಸಾವಿನ ಪ್ರಮಾಣ ಶೇಕಡಾ 1.19 ರಷ್ಟಿದೆ.

ಪ್ರಸ್ತುತ ಕೋವಿಡ್​ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,41,60,279 ಕ್ಕೆ ಏರಿಯಾಗಿದೆ. ಸೋಂಕು ಪತ್ತೆಹಚ್ಚಲು ಇದುವರೆಗೆ ಒಟ್ಟು 92.05 ಕೋಟಿ ಪರೀಕ್ಷೆಗಳನ್ನ ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 1,03,831 ಮಂದಿಯನ್ನು ಪರೀಕ್ಷಿಸಲಾಗಿದೆ.

ಇದನ್ನೂ ಓದಿ : ಪರೋಕ್ಷ ಧೂಮಪಾನಿಗಳಲ್ಲಿ ಕೊರೊನಾ ಸೋಂಕಿನ ಅಪಾಯ ಹೆಚ್ಚು

ವ್ಯಾಕ್ಸಿನೇಷನ್​ ಮಾಹಿತಿ: ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ರಾಷ್ಟ್ರವ್ಯಾಪಿ ಕೋವಿಡ್​ 19 ಲಸಿಕಾ ಅಭಿಯಾನದಡಿಯಲ್ಲಿ ಇದುವರೆಗೆ ದೇಶದಲ್ಲಿ 220.65 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ 83 ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ. ಸದ್ಯಕ್ಕೆ ಶೇಕಡಾ 5.83 ಪಾಸಿಟಿವಿಟಿ ದರ ಇದೆ. ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್ -19 ವೈರಸ್ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದೆ ಮತ್ತು ಹೊಸ ತಳಿ XBB.1.16 ವೈರಸ್ ವೇಗವಾಗಿ ಹರಡುತ್ತಿದೆ.

ಇದನ್ನೂ ಓದಿ : ಶೀತ, ಕೆಮ್ಮಿನಿಂದ ಪಾರಾಗಲು ನಿಮ್ಮ ಡಯಟ್​ನಲ್ಲಿರಲಿ ಈ ವಸ್ತುಗಳು!

ಪರೋಕ್ಷ ಧೂಮಪಾನಿಗಳಿಗೆ ಎಚ್ಚರಿಕೆ: ಇನ್ನು ಪರೋಕ್ಷ ಧೂಮಪಾನಿಗಳು ಗಂಭೀರ ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯ ಇದೆ ಎಂದು ಅಧ್ಯಯವೊಂದು ತಿಳಿಸಿದೆ. ಮೊದಲ ಬಾರಿಗೆ ಆರು ರಾಜ್ಯಗಳಲ್ಲಿ ಏಮ್ಸ್​ ಗೋರಖ್​ಪುರ ಈ ಅಧ್ಯಯನ ನಡೆಸಿದೆ. ಧೂಮಪಾನಿಗಳಲ್ಲದವರಲ್ಲಿ ಅಂದ್ರೆ ಪರೋಕ್ಷ ಧೂಮಪಾನಿಗಳು ಸೇವಿಸುವ ಹೊಗೆ ಮತ್ತು ಕೋವಿಡ್​ ತೀವ್ರತೆಯ ನಡುವಿನ ಕುರಿತು ಈ ಅಧ್ಯಯನ ನಡೆಸಲಾಗಿದೆ. ಈ ಪ್ರಕಾರ, ಮನೆಯಲ್ಲಿ ಇತರರ ಧೂಮಪಾನದ ಚಟದಿಂದಾಗಿ ಪರೋಕ್ಷವಾಗಿ ಧೂಮಪಾನಕ್ಕೆ ಒಳಗಾಗುವವರು ಗಂಭೀರ ಕೋವಿಡ್​ ಸೋಂಕಿಗೆ ತುತ್ತಾಗುವವರ ಸಾಧ್ಯತೆ 3.03 ರಷ್ಟು ಹೆಚ್ಚಿದೆ. ಕೆಲಸದ ಸ್ಥಳದಲ್ಲಿ ಪರೋಕ್ಷ ಧೂಮಪಾನದಿಂದ 2.19 ಪಟ್ಟು ಕೋವಿಡ್ 19 ಸೋಂಕು ಹರಡುವ​ ಅಪಾಯ ಹೆಚ್ಚಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಕೊರೊನಾ ವೈರಾಣು ಪಸರಿಸಿದ್ದು ಚೀನಾದ ವುಹಾನ್​ ಲ್ಯಾಬ್​ನಿಂದ: ಅಮೆರಿಕದ ಎಫ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.