ETV Bharat / sukhibhava

ಪರೋಕ್ಷ ಧೂಮಪಾನಿಗಳಲ್ಲಿ ಕೊರೊನಾ ಸೋಂಕಿನ ಅಪಾಯ ಹೆಚ್ಚು

author img

By

Published : Mar 21, 2023, 5:48 PM IST

ಪರೋಕ್ಷ ಧೂಮಪಾನಿಗಳು ನೇರ ಧೂಮಪಾನಿಗಳಿಗಿಂತ ಹೆಚ್ಚಾಗಿ ಕೋವಿಡ್​ ಸೋಂಕಿನ ತೀವ್ರತೆ ಒಳಗಾಗುವ ಅಪಾಯ ಹೊಂದುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

indirect-smokers-are-more-at-risk-of-corona-infection
indirect-smokers-are-more-at-risk-of-corona-infection

ನವದೆಹಲಿ: ಕೋವಿಡ್​ ಬಂದು ಮೂರು ವರ್ಷ ಕಳೆದರೂ ಅದು ಇನ್ನೂ ಸಕ್ರಿಯವಾಗೇ ಇದೆ. ಅದರಲ್ಲೂ ಕಡಿಮೆಯಾಗಿದ್ದ ಕೋವಿಡ್​ ಪ್ರಕರಣಗಳು ಇದೀಗ ಏರಿಕೆ ಕಾಣುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಈ ಕೋವಿಡ್​ ಪರೋಕ್ಷೆ ಧೂಮಪಾನಿಗಳಿಗೆ ಹೆಚ್ಚಿನ ಅಪಾಯ ಉಂಟು ಮಾಡುವ ಸಾಧ್ಯತೆ ಕುರಿತು ತಿಳಿದು ಬಂದಿದೆ. ಪರೋಕ್ಷ ಧೂಮಪಾನಿಗಳು ಗಂಭೀರ ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯ ಇದೆ ಎಂದು ಅಧ್ಯಯನ ತಿಳಿಸಿದೆ.

ಏಮ್ಸ್​ ಗೋರಖ್​ಪುರ ಅಧ್ಯಯನ ಮೊದಲ ಬಾರಿಗೆ ಆರು ರಾಜ್ಯಗಳಲ್ಲಿ ಈ ಸಂಬಂಧ ಅಧ್ಯಯನ ನಡೆಸಿದೆ. ಧೂಮಪಾನಿಗಳಲ್ಲದವರಲ್ಲಿ ಪರೋಕ್ಷ ಧೂಮಪಾನಿಗಳು ಸೇವಿಸುವ ಹೊಗೆ ಮತ್ತು ಕೋವಿಡ್​ ತೀವ್ರತೆಯ ನಡುವಿನ ಕೊಂಡಿ ಕುರಿತು ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನಲ್ಲಿ ಮನೆಯಲ್ಲಿ ಇತರರು ಧೂಮಪಾನದ ಚಟದಿಂದಾಗಿ ಪರೋಕ್ಷ ಧೂಮಪಾನಕ್ಕೆ ಒಳಗಾಗುವವರು ಗಂಭೀರ ಕೋವಿಡ್​ ಸೋಂಕಿಗೆ ತುತ್ತಾಗುವವರ ಸಾಧ್ಯತೆ 3.03 ರಷ್ಟು ಹೆಚ್ಚಿದೆ. ಇನ್ನು ಕೆಲಸದ ಸ್ಥಳದಲ್ಲಿ ಪರೋಕ್ಷ ಧೂಮಪಾನದಿಂದ 2.19ಪಟ್ಟು ಕೋವಿಡ್​ ಅಪಾಯ ಹೆಚ್ಚಿದೆ ಎಂದು ತಿಳಿಸಲಾಗಿದೆ.

ಈ ಸಂಬಂಧ ಮಾಹಿತಿ ನೀಡಿರುವ ಡಾ ಸುರೇಖಾ ಕಿಶೋರ್​​, ಧೂಮಪಾನ ಜೀವನಕ್ಕೆ ಸಾಕಷ್ಟು ಬೆದರಿಕೆ ಅಪಾಯವನ್ನು ಹೊಂದಿದೆ. ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ- 2003ರ ಅನುಸಾರ ಧೂಮಪಾನ ನಿಷೇಧಿಸಿರುವುದು ಉತ್ತಮ ಕ್ರಮ ಎಂದು ಇದೇ ವೇಳೆ ಸಂತಸ ವ್ಯಕ್ತಪಡಿಸಿದ್ದರು. ಸಾರ್ವಜನಿಕ ಸ್ಥಳವಿರಲಿ, ಮನೆ ಇರಲಿ ಧೂಮಪಾನ ನೇರವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಜನವರಿ 2020 ಮತ್ತು ಫೆಬ್ರವರಿ 2022ರ ನಡುವೆ 18 ವರ್ಷದ ಅನೇಕ ಜನರು ಕೋವಿಡ್​ ಸೋಂಕಿನ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾದರು. ಈ ಪ್ರಕರಣಗಳನ್ನು ನಂತರ ಪರೋಕ್ಷ ಧೂಮಪಾನಿಗಳ ಹೊಗೆ ಮತ್ತು ಇತರ ಆರೋಗ್ಯ, ಜೀವನಶೈಲಿ, ನಿಯಂತ್ರಣ ಮಾದರಿಗೆ ಹೋಲಿಸಿದಾಗ, ಕೋವಿಡ್​ ಸೌಮ್ಯ ಅಥವಾ ಮಧ್ಯಮ ಲಕ್ಷಣಗಳನ್ನು ತೋರಿಸಿದೆ. ಧೂಮಪಾನಿಗೆ ಹೋಲಿಸಿದಾಗ ಪರೋಕ್ಷ ಧೂಮಪಾನಿಗಳು ಈ ಕೋವಿಡ್​ 19 ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ ಎಂದು ಅಧ್ಯಯನ ಕಂಡುಕೊಂಡಿದೆ ಎಂದರು.

ಪರೋಕ್ಷ ಧೂಮಪಾನದ ಹೊಗೆಯು 7,000 ಕ್ಕೂ ಹೆಚ್ಚು ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಶ್ವಾಸಕೋಶದ ಕ್ಯಾನ್ಸರ್, ಪರಿಧಮನಿಯ ಹೃದಯ ಕಾಯಿಲೆ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳಂತಹ ಕಾಯಿಲೆಗಳಿಗೆ ಕಾರಣ ಆಗುತ್ತದೆ. ಇದು ಕೋವಿಡ್​​ ತೀವ್ರತೆಯನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ತಂಬಾಕು ನಿಯಂತ್ರಣ ಕಾನೂನು ಧೂಮಪಾನವನ್ನು ನಿಷೇಧಿಸಿದರೂ ಅನೇಕ ಒಳಾಂಗಣ ಪ್ರದೇಶ, ಕೆಲಸದ ಸ್ಥಳ, ಸಾರ್ವಜನಿಕ ಸಾರಿಗೆ, ವಿಮಾನ ನಿಲ್ದಾಣದಲ್ಲಿ ಅದಕ್ಕಾಗಿ ಪ್ರತ್ಯೇಕ ಪ್ರದೇಶ ನಿರ್ಮಾಣ ಮಾಡುವ ಮೂಲಕ ಅನುಮತಿ ನೀಡಲಾಗಿದೆ. ಮನೆ ಮತ್ತು ಒಳಾಂಗಣ ಪ್ರದೇಶದಲ್ಲಿ ಪರೋಕ್ಷ ಧೂಮಪಾನಕ್ಕೆ ಒಳಗಾಗುವರಲ್ಲಿ ಕೋವಿಡ್​ 19 ತೀವ್ರತೆ ಅಪಾಯ ಹೆಚ್ಚಿರುವುದು ತೋರಿಸುತ್ತದೆ. ಧೂಮಪಾನವು ಕೋವಿಡ್-19 ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಮತ್ತು ಅನಾರೋಗ್ಯದ ತೀವ್ರತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಓಮ್ರಿಕಾನ್​ XBB 1.5 ತಳಿಯು ಹೆಚ್ಚು ರೂಪಾಂತರ ಹೊಂದಿದ್ದು, ಬಲು ಬೇಗ ಹರಡುತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.