ಭಾರತ- ಚೀನಾ ನಡುವೆ 14 ಸುತ್ತಿನ ಮಾತುಕತೆ ಅಂತ್ಯ.. ಸತತ 13 ಗಂಟೆಗಳ ಕಾಲ ಚರ್ಚೆ..!

author img

By

Published : Jan 13, 2022, 11:00 AM IST

india-and-china-military-talks

ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್ ಮೂಲದ 14 ಕಾರ್ಪ್ಸ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್​ ಗುಪ್ತಾ ವಹಿಸಿದ್ದರೆ ಚೀನಾದ ಪರ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲಾ ಮುಖ್ಯಸ್ಥ ಮೇಜರ್ ಜನರಲ್ ಯಾಂಗ್ ಲಿನ್ ವಹಿಸಿದ್ದರು.

ನವದೆಹಲಿ: ಚೀನಾ ಮತ್ತು ಭಾರತ ನಡುವೆ 14 ನೇ ಸುತ್ತಿನ ಮಾತುಕತೆ ನಡೆದಿದೆ. 13 ಗಂಟೆಗಳ ಸುದೀರ್ಘ ಮಾತುಕತೆ ವೇಳೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಪ್ರಮುಖವಾಗಿ ಪೂರ್ವ ಲಡಾಖ್‌ನಲ್ಲಿನಲ್ಲಿರುವ ಪೆಟ್ರೋಲಿಂಗ್ ಪಾಯಿಂಟ್​ಗಳಿಂದ ಶೀಘ್ರವಾಗಿ ಪಡೆಗಳನ್ನ ವಾಪಸ್ ಪಡೆಯುವಂತೆ ಭಾರತ ಚೀನಾವನ್ನು ಒತ್ತಾಯಿಸಿದೆ.

ನಿನ್ನೆ ಬೆಳಗ್ಗೆ ಆರಂಭವಾದ ಸಭೆ ರಾತ್ರಿ10:30ಕ್ಕೆ ಕೊನೆಗೊಂಡಿದೆ. ಹಾಟ್ ಸ್ಪ್ರಿಂಗ್ಸ್‌ (ಪೆಟ್ರೋಲಿಂಗ್ ಪಾಯಿಂಟ್ 15 )ನಿಂದ ಸೇನೆ ವಾಪಸ್​ ಪಡೆಯಬೇಕು ಎಂಬ ಬಗ್ಗೆಯೇ ನಿನ್ನೆಯ ಮಾತುಕತೆ ವೇಳೆ ಪ್ರಸ್ತಾಪಕ್ಕೆ ಬಂದಿದ್ದು, ಮಾತುಕತೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್ ಮೂಲದ 14 ಕಾರ್ಪ್ಸ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್​ ಗುಪ್ತಾ ವಹಿಸಿದ್ದರೆ ಚೀನಾದ ಪರ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲಾ ಮುಖ್ಯಸ್ಥ ಮೇಜರ್ ಜನರಲ್ ಯಾಂಗ್ ಲಿನ್ ನೇತೃತ್ವ ವಹಿಸಿದ್ದರು. ಡೆಪ್ಸಾಂಗ್ ಬಲ್ಜ್ ಮತ್ತು ಡೆಮ್‌ಚೋಕ್‌ ಭಾಗದಲ್ಲಿ ಇರುವ ಸಮಸ್ಯೆಗಳ ಪರಿಹಾರ ಸೇರಿದಂತೆ ಉಳಿದಿರುವ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮಾತುಕತೆ ವೇಳೆ ಒತ್ತು ನೀಡಲಾಯಿತು.

ವಿಫಲವಾಗಿದ್ದ 13ನೇ ಸುತ್ತಿನ ಮಾತುಕತೆ

ಈ ಹಿಂದೆ 13 ಸುತ್ತಿನ ಮಾತುಕತೆಯಲ್ಲಿ ಭಾರತದ ಪರವಾಗಿ 14 ಕೋರ್‌ ಪಡೆಯ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಪಿಜಿಕೆ ಮೆನನ್‌ ಮತ್ತು ಚೀನಾ ಪರವಾಗಿ ಕ್ಸಿನ್‌ಜಿಯಾಂಗ್‌ ಜಿಲ್ಲೆಯ ಕಮಾಂಡರ್‌ ಮೇಜರ್‌ ಜನರಲ್‌ ಲಿಯು ಲಿನ್‌ ಅವರು ಭಾಗಿಯಾಗಿ ವಿಸ್ತೃತ ಚರ್ಚೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾಗಿತ್ತು.

ಕಳೆದ ವರ್ಷ ಮೇನಿಂದ ನಡೆಯುತ್ತಿರುವ ಘರ್ಷಣೆಯ ಭಾಗವಾಗಿ ಪೂರ್ವ ಲಡಾಕ್‌ನ ಗಲ್ವಾನ್‌ ಕಣಿವೆಯಲ್ಲಿ ಉಭಯ ಸೇನೆಗಳ 50 ಸಾವಿರ ಪಡೆಗಳು ನಿಯೋಜಿತರಾಗಿದ್ದಾರೆ. ಅದರೊಂದಿಗೆ ಟ್ಯಾಂಕರ್‌ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಕೂಡ ಗಡಿಯ ನೆಲೆಗಳಲ್ಲಿ ಸಂಗ್ರಹಿಸಲಾಗಿವೆ.

12ನೇ ಸುತ್ತಿನ ಮಾತುಕತೆ ಉಭಯ ಸೇನಾ ಕಮಾಂಡರ್‌ಗಳ ಮಟ್ಟದಲ್ಲಿ ನಡೆದಿತ್ತು. ಈ ವೇಳೆ ಗೊಗ್ರಾ ಪೋಸ್ಟ್‌ನ ಪ್ಯಾಟ್ರೋಲಿಂಗ್‌ ಪಾಯಿಂಟ್‌ 17ಎ ಯಿಂದ ಸೇನಾಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಚೀನಾ ಈ ಒಪ್ಪಂದವನ್ನು ಪೂರ್ಣವಾಗಿ ಪಾಲಿಸಿಲ್ಲ. ಪಾಂಗಾಂಗ್​​ ಸರೋವರದ ದಡದಲ್ಲಿನ ಹಾಟ್‌ಸ್ಟ್ರಿಂಗ್ಸ್‌ ಪ್ರದೇಶದಿಂದ ಕೂಡ ಸೇನಾಪಡೆಗಳನ್ನು ಹಿಂಪಡೆಯುವ ಒಪ್ಪಂದ ಇನ್ನೂ ಬಾಕಿ ಉಳಿದಿದೆ.

ಇದನ್ನೂ ಓದಿ:ವಿಶ್ವಾದ್ಯಂತ ಒಂದೇ ದಿನ 31 ಲಕ್ಷ ಜನರಿಗೆ ಕೋವಿಡ್ ಪಾಸಿಟಿವ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.