ETV Bharat / bharat

'ಕಾನೂನುಗಳನ್ನು ಜಾರಿಗೊಳಿಸದಿದ್ದರೆ, ಅವುಗಳ ಉದ್ದೇಶ ಈಡೇರುವುದಿಲ್ಲ': ಅಜಿತ್ ದೋವಲ್

author img

By

Published : Nov 12, 2021, 12:14 PM IST

Ajit Doval at IPS parade in HYD
ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ದೀಕ್ಷಾಂತ್ ಸಮರೋಹ ಸಮಾರಂಭ

ಕಾನೂನುಗಳನ್ನು ರಕ್ಷಿಸದಿದ್ದರೆ ಅಥವಾ ಜಾರಿಗೊಳಿಸದಿದ್ದರೆ, ಅವುಗಳ ಉದ್ದೇಶ ಈಡೇರುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Advisor Ajith Doval) ಪ್ರತಿಪಾದಿಸಿದ್ದಾರೆ.

ಹೈದರಾಬಾದ್‌(ತೆಲಂಗಾಣ): ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ದೀಕ್ಷಾಂತ್ ಸಮರೋಹ ಸಮಾರಂಭ(Deekshanth Samaroh ceremony) ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Advisor Ajith Doval) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ದೀಕ್ಷಾಂತ್ ಸಮರೋಹ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

ಐಪಿಎಸ್ ಪ್ರೊಬೇಷನರಿಗಳ 73ನೇ ಬ್ಯಾಚ್‌ನ ಪಾಸಿಂಗ್ ಔಟ್ ಪರೇಡ್ ಅನ್ನು ಅಕಾಡೆಮಿಯಲ್ಲಿ ನಡೆಸಲಾಯಿತು. ದೋವಲ್ ಅಧಿಕಾರಿಗಳಿಂದ ಶುಭಾಶಯ ಕೋರಿದರು. ಪರೇಡ್‌ನಲ್ಲಿ 149 ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು, ಅವರಲ್ಲಿ 31 ಮಹಿಳಾ ಅಧಿಕಾರಿಗಳಿದ್ದರು.

17 ಮಂದಿ ವಿದೇಶಿ ತರಬೇತಿ ಅಧಿಕಾರಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (SVPNA)ಯಲ್ಲಿ ತರಬೇತಿ ಪಡೆದಿದ್ದಾರೆ. ಸತತ 3ನೇ ಬಾರಿಗೆ ದರ್ಪಣ್ ಅಹ್ಲುವಾಲಿಯಾ ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತರಬೇತಿಯಲ್ಲಿ ಉತ್ತಮ ಪ್ರತಿಭೆ ತೋರಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೆಲಂಗಾಣಕ್ಕೆ ನಾಲ್ವರು ಟ್ರೈನಿ ಐಪಿಎಸ್‌ಗಳನ್ನು ಹಾಗೂ ಆಂಧ್ರಪ್ರದೇಶಕ್ಕೆ ಐವರು ಟ್ರೈನಿ ಐಪಿಎಸ್‌ಗಳನ್ನು ನೇಮಿಸಲಾಗಿದೆ.

ಕಾನೂನುಗಳನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ:

"ಪ್ರಜಾಪ್ರಭುತ್ವವ ಕೇವಲ ಮತಪೆಟ್ಟಿಗೆಯಲ್ಲಿರುವುದಲ್ಲ. ಜನರು ಚುನಾಯಿತರಾಗುವ ಕಾನೂನುಗಳಲ್ಲಿದೆ. ಆ ಕಾನೂನುಗಳನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಇದು ಕಾನೂನುಗಳನ್ನು ಮಾಡುವುದರ ಬಗ್ಗೆ ಅಲ್ಲ. ಅವುಗಳನ್ನು ಜಾರಿಗೊಳಿಸುವ ಬಗ್ಗೆ. ಕಾನೂನುಗಳನ್ನು ರಕ್ಷಿಸದಿದ್ದರೆ ಅಥವಾ ಜಾರಿಗೊಳಿಸದಿದ್ದರೆ, ಅವುಗಳ ಉದ್ದೇಶ ಈಡೇರುವುದಿಲ್ಲ" ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದರು.

ಪ್ರಜಾಪ್ರಭುತ್ವದ ಸಂರಕ್ಷಣೆ ನಿಮ್ಮ ಸಾಮರ್ಥ್ಯ, ಸಮರ್ಪಣೆ, ಮತ್ತು ನಡವಳಿಕೆಯ ಮೇಲೆ ಅವಲಂಬಿತವಾಗಿದೆ. ಯುವ ಐಪಿಎಸ್ ಅಧಿಕಾರಿಗಳು 130 ಕೋಟಿ ಜನರ ಕಾನೂನುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಾಂತಿ ಕಾಪಾಡುವುದು ಮಾತ್ರವಲ್ಲ. ದೇಶದ ಪ್ರದೇಶವನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ದೋವಲ್ ಹೇಳಿದರು.

ಇದನ್ನೂ ಓದಿ:ಲಖನೌದಲ್ಲಿ ಮತ್ತೆ 2 ಝಿಕಾ ವೈರಸ್ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.