ತಮಿಳುನಾಡಿನ ದೇಗುಲದಿಂದ ಕಳ್ಳತನವಾಗಿದ್ದ ಪುರಾತನ ವಿಗ್ರಹಗಳು ಅಮೆರಿಕದಲ್ಲಿ ಪತ್ತೆ

author img

By

Published : Jun 16, 2022, 2:59 PM IST

Tamil Nadu idols found in US

ಕಂಚಿನಿಂದ ಮಾಡಲ್ಪಟ್ಟ ಸೋಮಸ್ಕಂದರ ವಿಗ್ರಹವು ಅಮೆರಿಕದ ಕ್ಯಾಲಿಫೋರ್ನಿಯಾದ ನಾರ್ಟನ್ ಸೈಮನ್ ಮ್ಯೂಸಿಯಂನಲ್ಲೂ ಥಾನಿ ಅಮ್ಮನ್ ವಿಗ್ರಹ ಡೆನ್ವರ್‌ನ ಮ್ಯೂಸಿಯಂನಲ್ಲೂ ದೊರೆತಿದೆ.

ತಂಜಾವೂರ್​(ತಮಿಳುನಾಡು): ಸುಮಾರು ಆರು ವರ್ಷಗಳ ಹಿಂದೆ ಕುಂಭಕೋಣಂನ ದೇವಸ್ಥಾನದಿಂದ ಕಳ್ಳತನವಾಗಿದ್ದ ಎರಡು ಪುರಾತನ ವಿಗ್ರಹಗಳನ್ನು ತಮಿಳುನಾಡು ವಿಗ್ರಹ ವಿಭಾಗದ ಅಧಿಕಾರಿಗಳು(ಸಿಐಡಿ) ಕಾರ್ಯಾಚರಣೆ ನಡೆಸಿ ಅಮೆರಿಕದಲ್ಲಿ ಪತ್ತೆ ಹಚ್ಚಿದ್ದಾರೆ.

ಡಿಜಿಪಿ ಜಯಂತ್ ಮುರಳಿ ಅವರಿಗೆ ಕುಂಭಕೋಣಂ ಸಮೀಪದ ಶಿವಪುರಂ ಗ್ರಾಮದ ನಾರಾಯಣಸ್ವಾಮಿ ಎಂಬವರು ಈ ಕುರಿತು ಮನವಿ ಸಲ್ಲಿಸಿದ್ದರು. ಶಿವಪುರಂನ ಶಿವಗುರುನಾಥನ್ ಸ್ವಾಮಿ ದೇವಸ್ಥಾನದಲ್ಲಿರುವ ಕೆಲವು ಪುರಾತನ ವಿಗ್ರಹಗಳು ನಕಲಿಯಾಗಿರಬಹುದು, ಮೂಲ ವಿಗ್ರಹಗಳು ಕಳ್ಳತನವಾಗಿವೆ ಎಂದು ತಿಳಿಸಿದ್ದರು. ಬಳಿಕ ಸಿಐಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪುದುಚೇರಿಯ ಫ್ರೆಂಚ್ ಸಂಸ್ಥೆಯಿಂದ ಪರಿಶೀಲನೆಗಾಗಿ ಕೆಲವು ವಿಗ್ರಹಗಳ ಚಿತ್ರಗಳನ್ನು ಸಂಗ್ರಹಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಶಿವಗುರುನಾಥನ್ ಸ್ವಾಮಿ ದೇವಸ್ಥಾನದ ಸೋಮಸ್ಕಂದರ ಮತ್ತು ಥಾನಿ ಅಮ್ಮನ್ ವಿಗ್ರಹಗಳೊಂದಿಗೆ ಆ ಚಿತ್ರಗಳು ಹೊಂದಿಕೆಯಾಗಲಿಲ್ಲ. ಅವುಗಳನ್ನು ಕದ್ದು ಬೇರೆ ನಕಲಿ ವಿಗ್ರಹಗಳನ್ನು ದೇಗುಲದಲ್ಲಿಡಲಾಗಿದೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ರಾಹುಲ್​ ಗಾಂಧಿಗೆ ಇಡಿ ಡ್ರಿಲ್​: ವಿಕೋಪಕ್ಕೆ ತಿರುಗಿ ಪಂಜಾಬ್​ ಕಾಂಗ್ರೆಸ್ ಪ್ರತಿಭಟನೆ, ಕಾರ್ಯ​ಕರ್ತರ ಮೇಲೆ ಜಲಫಿರಂಗಿ ಪ್ರಯೋಗ!

ಕಂಚಿನಿಂದ ಮಾಡಲ್ಪಟ್ಟ ಸೋಮಸ್ಕಂದರ ವಿಗ್ರಹವು ಕ್ಯಾಲಿಫೋರ್ನಿಯಾದ ನಾರ್ಟನ್ ಸೈಮನ್ ಮ್ಯೂಸಿಯಂ ಮತ್ತು ಡೆನ್ವರ್‌ನ ಮ್ಯೂಸಿಯಂನಲ್ಲಿ ಥಾನಿ ಅಮ್ಮನ್ ವಿಗ್ರಹ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.