ETV Bharat / bharat

ವಿಮಾನ ಹೈಜಾಕ್​ ಅಪರಾಧಿ ಮುಷ್ತಾಕ್ ಜರ್ಗಾರ್ ಆಸ್ತಿ ಮುಟ್ಟುಗೋಲು ಹಾಕಿದ ಎನ್​ಐಎ

author img

By

Published : Mar 2, 2023, 5:07 PM IST

ಪಾಕಿಸ್ತಾನದಲ್ಲಿದ್ದುಕೊಂಡು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಉಗ್ರವಾದಿಯ ಆಸ್ತಿಗಳನ್ನು ಎನ್​ಐಎ ಮುಟ್ಟುಗೋಲು ಹಾಕಿಕೊಂಡಿದೆ.

NIA attaches property of IC 814 hijacking accomplice Mushtaq Latram
NIA attaches property of IC 814 hijacking accomplice Mushtaq Latram

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪಾಕಿಸ್ತಾನದಲ್ಲಿ ಕುಳಿತು ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯ ನಡೆಸುವ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ನಿರ್ಣಾಯಕ ಕ್ರಮ ಕೈಗೊಂಡಿದೆ. ಸದ್ಯ ಪಾಕಿಸ್ತಾನದಲ್ಲಿರುವ ಉಗ್ರವಾದಿ ಮುಷ್ತಾಕ್ ಜರ್ಗಾರ್ ಅಲಿಯಾಸ್​ ಲಾತ್ರಾಮ್ ಎಂಬಾತನ ಆಸ್ತಿ ಪಾಸ್ತಿಗಳನ್ನು ಎನ್​ಐಎ ಮುಟ್ಟುಗೋಲು ಹಾಕಿಕೊಂಡಿದೆ. ಕಂದಹಾರ್​ನಲ್ಲಿ 1999 ರಲ್ಲಿ ಹೈಜಾಕ್ ಆಗಿದ್ದ ಇಂಡಿಯನ್ ಏರ್ ಲೈನ್ಸ್​ ವಿಮಾನ IC 814 ಇದರಲ್ಲಿದ್ದ ಪ್ರಯಾಣಿಕರ ಬಿಡುಗಡೆಗೆ ಪ್ರತಿಯಾಗಿ ಭಾರತೀಯ ಜೈಲಿನಿಂದ ಬಿಡುಗಡೆಯಾಗಿದ್ದ ಜೈಶ್ ಎ ಮೊಹಮ್ಮದ್ ಉಗ್ರವಾದಿ ಮಸೂದ್ ಅಜರ್ ಸಹಚರನೇ ಈ ಮುಷ್ತಾಕ್ ಜರ್ಗಾರ್. ಈತ ಕೂಡ ಮಸೂದ್ ಅಜರ್ ಜೊತೆಗೆ ಬಿಡುಗಡೆಯಾಗಿದ್ದ.

1989 ರಲ್ಲಿ ಮಾಜಿ ಕೇಂದ್ರ ಗೃಹ ಸಚಿವ, ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣದಲ್ಲಿ ಕೂಡ ಜರ್ಗಾರ್ ಭಾಗಿಯಾಗಿದ್ದ. ಜರ್ಗಾರ್ ಈತ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ 'ನಿಯೋಜಿತ ವೈಯಕ್ತಿಕ ಭಯೋತ್ಪಾದಕ' ಎಂದು ಘೋಷಿಸಲ್ಪಟ್ಟಿದ್ದ. ಈತ ಬಿಡುಗಡೆಯಾದಾಗಿನಿಂದ ಪಾಕಿಸ್ತಾನದಲ್ಲಿದ್ದುಕೊಂಡು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡುತ್ತಿದ್ದಾನೆ.

ಜರ್ಗಾರ್ ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ನೊಂದಿಗೆ ಸಂಬಂಧ ಹೊಂದಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿದ್ದ. ಹಲವಾರು ಕೊಲೆಗಳು ಸೇರಿದಂತೆ ಇತರ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವ ಈತ, ಅಲ್-ಖೈದಾ ಮತ್ತು ಜೆಎಂನಂತಹ ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ.

ಜರ್ಗಾರ್ ಶ್ರೀನಗರದ ನೌಹಟ್ಟಾ ಪ್ರದೇಶದವನಾಗಿದ್ದು, ಜೆಕೆಎಲ್​ಎಫ್​ ಗೆ ಕೆಲಸ ಮಾಡುತ್ತಿದ್ದ. 1989 ರಲ್ಲಿ ರುಬಿಯಾ ಸಯೀದ್‌ ಅವರನ್ನು ಅಪಹರಿಸಿದ ಗುಂಪಿನಲ್ಲಿ ಈತನೂ ಒಬ್ಬನಾಗಿದ್ದ ಮತ್ತು ಐವರು ಭಯೋತ್ಪಾದಕರ ವಿನಿಮಯಕ್ಕೆ ಬದಲಾಗಿ ರುಬಿಯಾರನ್ನು ಬಿಡುಗಡೆ ಮಾಡಲು ಡೀಲ್ ನಡೆಸಿದ್ದ. ಮೇ 15, 1992 ರಂದು ಬಂಧಿತನಾಗಿದ್ದ ಈತನನ್ನು ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ ಒತ್ತೆಯಾಳು ವಿನಿಮಯ ಒಪ್ಪಂದದ ಭಾಗವಾಗಿ ಡಿಸೆಂಬರ್ 31, 1999 ರಂದು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ವಿಮಾನ ಹೈಜಾಕ್ ಮಾಡಿದ್ದ ಉಗ್ರರು: ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ IC-814 ಡಿಸೆಂಬರ್ 24, 1999 ರಂದು ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಕಠ್ಮಂಡುವಿನಿಂದ ದೆಹಲಿಗೆ ಹಿಂದಿರುಗುತ್ತಿತ್ತು. ಇದರಲ್ಲಿದ್ದ 180 ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಐವರು ಪಾಕಿಸ್ತಾನಿ ಹೈಜಾಕರ್‌ಗಳು ವಿಮಾನವನ್ನು ಹೈಜಾಕ್ ಮಾಡಿದ್ದರು. ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಆದರೆ, ಅದಕ್ಕೆ ಅಲ್ಲಿ ಇಳಿಯಲು ಅನುಮತಿ ನೀಡಲಿಲ್ಲ. ನಂತರ ಕೇವಲ 10 ನಿಮಿಷಗಳಷ್ಟು ಹಾರಾಡುವ ಇಂಧನ ಉಳಿದಾಗ ವಿಮಾನ ಅಮೃತಸರದಲ್ಲಿ ಲ್ಯಾಂಡ್ ಆಗಿತ್ತು. ಆದರೆ, ಅಷ್ಟರಲ್ಲಿ ಉಗ್ರವಾದಿಗಳು ನಾಲ್ವರು ಪ್ರಯಾಣಿಕರನ್ನು ಹತ್ಯೆ ಮಾಡಿದ್ದರು. ಮೂವರು ಉಗ್ರಗಾಮಿಗಳಾದ ಮೌಲಾನಾ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಜರ್ಗರ್ ಬದಲಿಗೆ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಂದವಾಗಿತ್ತು.

ಇದನ್ನೂ ಓದಿ : 1999ರ ಭಾರತೀಯ ವಿಮಾನ ಅಪಹರಣ ಪ್ರಕರಣದ ಭಯೋತ್ಪಾದಕ ಅಪರಿಚಿತರಿಂದ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.