ETV Bharat / bharat

ಪ್ರತಿ ಕಿ.ಮೀಗೆ ಕೇವಲ 2 ರೂ ಖರ್ಚು! ಹೈಡ್ರೋಜನ್​ ಕಾರು ಬಳಕೆಗೆ ನಾಂದಿ ಹಾಡಿದ ನಿತಿನ್ ಗಡ್ಕರಿ

author img

By

Published : Mar 31, 2022, 3:40 PM IST

ಜಪಾನ್​ನ ಟೋಕಿಯೋ ಕಂಪನಿ ನಿರ್ಮಿಸಿರುವ ಹೈಡ್ರೋಜನ್​ ಇಂಧನ ಚಾಲಿತ ಕಾರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ವತಃ ಬಳಸುವ ಮೂಲಕ ಹೈಡ್ರೋಜನ್​ ಕಾರುಗಳ ಬಳಕೆ ಶುರು ಮಾಡಿದ್ದಾರೆ. ಪರಿಸರ ಸ್ನೇಹಿ ಕಾರು ಇದಾಗಿದ್ದು, ಕಡಿಮೆ ಪ್ರಯಾಣ ವೆಚ್ಚ ಇದರ ವಿಶೇಷತೆ.

hydrogen-car
ಹೈಡ್ರೋಜನ್​ ಕಾರು

ನವದೆಹಲಿ: ಇಂಧನ ಬೆಲೆಗಳು ಗಗನಕ್ಕೇರಿದ್ದು, ಇದರ ವಿರುದ್ಧ ಎಲ್ಲೆಡೆ ಅಸಮಾಧಾನದ ಕೂಗು ಕೇಳಿಬರುತ್ತಿದೆ. ಇದ ಬೆನ್ನಲ್ಲೇ ಜಗತ್ತಿನಲ್ಲಿ ನವೀಕರಣಗೊಳ್ಳದ ಇಂಧನಕ್ಕೆ ಪರ್ಯಾಯವಾಗಿ ಹೈಡ್ರೋಜನ್​ ಕಾರುಗಳನ್ನು ರೂಪಿಸಲಾಗುತ್ತಿದೆ. ನಿನ್ನೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರೇ ಸ್ವತಃ ಹೈಡ್ರೋಜನ್​ ಕಾರಿನಲ್ಲಿ ಸಂಸತ್ತಿಗೆ ಆಗಮಿಸುವ ಮೂಲಕ ಹೈಡ್ರೋಜನ್​ ಕಾರುಗಳ ಬಳಕೆಗೆ ನಾಂದಿ ಹಾಡಿದ್ದಾರೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್​ ಕಾರನ್ನು ಟೊಯೋಟಾ ಕಂಪನಿ ಪರಿಚಯಿಸಿದೆ. ಟೊಯೋಟಾ ಮಿರಾಯ್​ ಎಂದು ಹೆಸರಿಡಲಾದ ಈ ಪ್ರಾಯೋಗಿಕ ಕಾರಿನಲ್ಲಿ ಗಡ್ಕರಿ ಅವರು ತಮ್ಮ ನಿವಾಸದಿಂದ ಪ್ರಯಾಣ ಬೆಳೆಸಿ ಸಂಸತ್ತಿಗೆ ಬಂದಿದ್ದಾರೆ.

  • Union Minister Shri @nitin_gadkari ji visited Parliament House by Hydrogen based Fuel Cell Electric Vehicle (FCEV) today. Demonstrating the car powered by ‘Green Hydrogen’, Shri Gadkari ji emphasised the need to spread awareness about Hydrogen, FCEV technology... pic.twitter.com/NNHewczvpc

    — Office Of Nitin Gadkari (@OfficeOfNG) March 30, 2022 " class="align-text-top noRightClick twitterSection" data=" ">

ಈ ಹಿಂದೆ ಗಡ್ಕರಿ ಅವರು ಹೈಡ್ರೋಜನ್​ ಆಧರಿತವಾದ ಸುಧಾರಿತ 'ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್' (ಎಫ್‌ಸಿಇವಿ) ಟೊಯೋಟಾ ಮಿರಾಯ್ ಅನ್ನು ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸಿದ್ದರು. ಹಸಿರು ಹೈಡ್ರೋಜನ್ ಇಂಧನವು ಕಾರಿಗೆ ಹೇಗೆ ಶಕ್ತಿ ತುಂಬುತ್ತದೆ ಎಂಬ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದರು.

ಹಸಿರು ಇಂಧನ ಚಾಲಿತ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಕಾರುಗಳು ಎಲೆಕ್ಟ್ರಾನಿಕ್​ ಕಾರುಗಳಿಗಿಂತಲೂ ಕಡಿಮೆ ವೆಚ್ಚದ್ದಾಗಿವೆ. ಇವುಗಳ ಪ್ರಯಾಣ ದರವೂ ತೀರಾ ಕಡಿಮೆ. ಇವು ಮುಂದಿನ ದಿನಗಳಲ್ಲಿ ಪೆಟ್ರೋಲ್​ ಚಾಲಿತ ಕಾರುಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲಿವೆ ಎಂದು ಹೇಳಿದ್ದರು.

ಕಾರಿನ ವಿಶೇಷತೆಗಳಿವು..

  • ಹೈಡ್ರೋಜನ್​ ಚಾಲಿತ ಈ ಕಾರು 600 ಕಿಲೋಮೀಟರ್​ ಕ್ರಮಿಸುವ ಶಕ್ತಿ ಇದೆ.
  • ಇಂಧನಕ್ಕೆ ಹೋಲಿಸಿದರೆ ಇದರ ಪ್ರಯಾಣ ವೆಚ್ಚ ಭಾರಿ ಕಡಿಮೆ.
  • ಪ್ರತಿ ಕಿ.ಮೀ. ಪ್ರಯಾಣ ವೆಚ್ಚ ಕೇವಲ 2 ರೂ. ಮಾತ್ರ ಆಗಲಿದೆ.
  • ಟ್ಯಾಂಕ್​ ಅನ್ನು ಕೇವಲ 5 ನಿಮಿಷದಲ್ಲಿ ಭರ್ತಿ ಮಾಡಬಹುದು.
  • ನವೀಕರಿಸಬಹುದಾದ ಮತ್ತು ಹಸಿರು ಪರಿಸರ ಸ್ನೇಹಿ ವಾಹನ ಇದಾಗಿದೆ.

ಇದನ್ನೂ ಓದಿ: ಮುಂದಿನ ಹಣಕಾಸು ವರ್ಷದಲ್ಲಿ ಅಣುಸ್ಥಾವರಗಳಿಗಾಗಿ 100 ಟನ್ ಯುರೇನಿಯಂ ಆಮದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.