ETV Bharat / bharat

19 ವರ್ಷ ಸಾಕಿ-ಸಲಹಿದ್ದ ಮಗಳನ್ನೇ ಕೊಂದು ಹೊಲದಲ್ಲಿ ಸುಟ್ಟು ಹಾಕಿದ ತಾಯಿ

author img

By

Published : Feb 13, 2022, 12:35 PM IST

ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಮಗಳನ್ನು ಹೆತ್ತ ತಾಯಿಯೇ ಇತರ ಸಂಬಂಧಿಕರೊಂದಿಗೆ ಸೇರಿಕೊಂಡು ಕೊಂದು, ಹೊಲದಲ್ಲಿ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮರ್ಯಾದಾ ಹತ್ಯೆ
ಮರ್ಯಾದಾ ಹತ್ಯೆ

ಮುಜಾಫರ್​​ನಗರ (ಉತ್ತರ ಪ್ರದೇಶ): ಮಗಳ ಮೇಲೆ ಸಾಕಷ್ಟು ಕನಸುಗಳನ್ನು ಕಂಡು ಮುದ್ದಾಗಿ 19 ವರ್ಷಗಳ ಕಾಲ ಬೆಳೆಸಿದ್ದ ಕುಟುಂಬ ಇದೀಗ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದೆ. ಇದಕ್ಕೆ ಕಾರಣ ಪ್ರೀತಿ-ಜಾತಿ..

ಉತ್ತರ ಪ್ರದೇಶದ ಮುಜಾಫರ್​​ನಗರ ಜಿಲ್ಲೆಯ ಸಿಸೌಲಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಿಸೌಲಿ ಗ್ರಾಮದ ನಿವಾಸಿ ಗೀತಾ ಎಂಬವರ ಮಗಳು ಮದುವೆಗೆ ಮನೆಯವರ ವಿರೋಧ ಬಂದ ಹಿನ್ನೆಲೆಯಲ್ಲಿ ಪ್ರೀತಿಸಿದ್ದ ಯುವಕನ ಜೊತೆ ಮನೆಬಿಟ್ಟು ಹೋಗಿದ್ದಳು. ಬೇರೆ ಜಾತಿ ಯುವಕನೊಂದಿಗೆ ಮಗಳು ಹೋಗಿದ್ದಾಳೆ, ತಮ್ಮ ಮಾನ-ಮರ್ಯಾದೆ ಹರಾಜಾಯ್ತು ಎಂಬ ಕಾರಣಕ್ಕೆ ತಾಯಿ ಗೀತಾ ಪುತ್ರಿಯ ಪ್ರಾಣವನ್ನೇ ತೆಗೆಯುವ ನಿರ್ಧಾರ ಮಾಡಿದ್ದಾಳೆ.

ಅದರಂತೆ ಫೆ.9ರಂದು ಮಗಳನ್ನು ಮನೆಗೆ ಕರೆಯಿಸಿಕೊಂಡ ಗೀತಾ, ತನ್ನ ಹತ್ತಿರದ ಸಂಬಂಧಿಗಳೊಂದಿಗೆ ಸೇರಿಕೊಂಡು ಆಕೆಯನ್ನು ಕೊಲೆ ಮಾಡಿ, ಮೃತದೇಹವನ್ನು ತಮ್ಮ ಹೊಲದಲ್ಲಿ ಸುಟ್ಟು ಹಾಕಿದ್ದಾರೆ. ಚಿತಾಭಸ್ಮವನ್ನು ಸಹ ಹೊಲದಲ್ಲೇ ಹೂತಿಟ್ಟಿದ್ದಾರೆ. ಇತ್ತ ಆಕೆಯನ್ನು ಪ್ರೀತಿಸಿದ್ದ ಯುವಕ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಎಂಎ, ಎಂಬಿಎ ಪದವೀಧರ; ಆನ್​ಲೈನ್​ ಟ್ರೇಡಿಂಗ್​ಗೋಸ್ಕರ ಐದು ಕೊಲೆ; ಸೀರಿಯಲ್ ಕಿಲ್ಲರ್​ನ ಬಂಧನ

ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಹೂತಿಟ್ಟ ಚಿತಾಭಸ್ಮವನ್ನು ಪತ್ತೆ ಮಾಡಿ, ಕೊಲೆಯ ಪುರಾವೆ ಪಡೆದುಕೊಂಡಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಗೀತಾ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಉಳಿದವರಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.