ETV Bharat / bharat

ಹಿಮಾಚಲ ಚುನಾವಣೆ: ಸತತ 6ನೇ ಬಾರಿ ಗೆದ್ದು ದಾಖಲೆ ನಿರ್ಮಿಸಿದ ಸಿಎಂ ಜೈರಾಮ್ ಠಾಕೂರ್

author img

By

Published : Dec 8, 2022, 1:36 PM IST

ಜೈರಾಮ್ ಠಾಕೂರ್ ಅವರ ರಾಜಕೀಯ ಜೀವನವನ್ನು ನೋಡುವುದಾದರೆ, ಮಂಡಿ ಜಿಲ್ಲೆಯ ದೂರದ ಪ್ರದೇಶಕ್ಕೆ ಸೇರಿದ ಜೈರಾಮ್ ಠಾಕೂರ್ ತಮ್ಮ ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲಾರಂಭಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಭಾರತೀಯ ಜನತಾ ಯುವ ಮೋರ್ಚಾದವರೆಗೆ ಪಕ್ಷದ ಅಧ್ಯಕ್ಷ, ಚುನಾವಣಾ ರಾಜಕೀಯ, ಶಾಸಕ, ಸಚಿವ ಮತ್ತು ಮುಖ್ಯಮಂತ್ರಿಯಾಗಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

Himachal election result
ಹಿಮಾಚಲ ಚುನಾವಣೆ

ಶಿಮ್ಲಾ: ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಸಾಮಾನ್ಯವಾಗಿ ಸೋಲು ಗೆಲುವಿನ ಅಂತರ ತೀರಾ ಹೆಚ್ಚಾಗಿರುವುದಿಲ್ಲ. ಆದರೆ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಈ ಬಾರಿ ಇದನ್ನು ಹುಸಿ ಮಾಡಿದ್ದಾರೆ. ಸಿಎಂ ಜೈರಾಮ್ ಠಾಕೂರ್ ಸೆರಾಜ್ ವಿಧಾನಸಭಾ ಕ್ಷೇತ್ರದಿಂದ ಭಾರಿ ಮತಗಳಿಂದ ಗೆದ್ದು, ಹಿಂದಿನ ಸಿಎಂಗಳಾದ ವೀರಭದ್ರ ಸಿಂಗ್ ಮತ್ತು ಪ್ರೇಮ್ ಕುಮಾರ್ ಧುಮಾಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಿಎಂ ಸತತ ಆರನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ.

ಸತತ ಆರನೇ ಬಾರಿ ಗೆದ್ದ ಜೈರಾಮ್ ಠಾಕೂರ್ : ಸಾರ್ವಜನಿಕ ವಲಯದಲ್ಲಿ ಜೈರಾಮ್ ಠಾಕೂರ್ ಇಷ್ಟೊಂದು ಬೆಂಬಲ ಹೊಂದಿರಲು ಹಲವಾರು ಕಾರಣಗಳಿವೆ. ಜೈರಾಮ್ ಠಾಕೂರ್ ಸರಳ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದು, ಅವರ ರಾಜಕೀಯ ಜೀವನ ಹೋರಾಟಗಳಿಂದ ತುಂಬಿದೆ. ವಿದ್ಯಾರ್ಥಿ ರಾಜಕಾರಣದಿಂದ ಮುಖಂಡರಾಗಿ ತಯಾರಾದ ಠಾಕೂರ್, ಸಂಘಟನೆಯಲ್ಲೂ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಆರನೇ ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಪ್ರಮುಖ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ ಜೈರಾಮ್: ರಾಜಕೀಯವಾಗಿ 2018ರ ವರ್ಷ ಅತ್ಯಂತ ಪ್ರಮುಖವಾಗಿದೆ. ಜೈರಾಮ್ ಠಾಕೂರ್ ಅವರ ರಾಜಕೀಯ ಜೀವನವನ್ನು ನೋಡುವುದಾದರೆ, ಮಂಡಿ ಜಿಲ್ಲೆಯ ದೂರದ ಪ್ರದೇಶಕ್ಕೆ ಸೇರಿದ ಜೈರಾಮ್ ಠಾಕೂರ್ ತಮ್ಮ ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲಾರಂಭಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಭಾರತೀಯ ಜನತಾ ಯುವ ಮೋರ್ಚಾದವರೆಗೆ ಪಕ್ಷದ ಅಧ್ಯಕ್ಷ, ಚುನಾವಣಾ ರಾಜಕೀಯ, ಶಾಸಕ, ಸಚಿವ ಮತ್ತು ಮುಖ್ಯಮಂತ್ರಿಯಾಗಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಜೈರಾಮ್ ಠಾಕೂರ್ ರಾಜಕೀಯ ಜೀವನ: ಠಾಕೂರ್ ಜನವರಿ 6, 1965 ರಂದು ಮಂಡಿ ಜಿಲ್ಲೆಯಲ್ಲಿ ಜನಿಸಿದರು. ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿ ಸಂಘಟನೆಯಲ್ಲೇ ಉಳಿದರು. 1986ರಲ್ಲಿ ಎಬಿವಿಪಿಯ ರಾಜ್ಯ ಜಂಟಿ ಕಾರ್ಯದರ್ಶಿಯಾದರು. 1989 ರಿಂದ 93 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಎಬಿವಿಪಿ ಸಂಘಟನೆಯಲ್ಲಿ ಕೆಲಸ ಮಾಡಿದರು. 1993 ರಿಂದ 1995 ರವರೆಗೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ರಾಜ್ಯ ಅಧ್ಯಕ್ಷರೂ ಆಗಿದ್ದರು. 2000 ರಿಂದ 2003 ರವರೆಗೆ ಮಂಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮತ್ತು 2003 ರಿಂದ 2005 ರವರೆಗೆ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದರು. 2006ರಲ್ಲಿ ಜೈರಾಮ್ ಬಿಜೆಪಿ ರಾಜ್ಯಾಧ್ಯಕ್ಷರಾದರು.

1998 ರಲ್ಲಿ, ಚಚಿಯೋಟ್‌ನಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು ಮತ್ತು ಅದರ ನಂತರ 2003 ಮತ್ತು 2007 ರಲ್ಲಿ, ಚಚಿಯೋಟ್ ವಿಧಾನಸಭಾ ಸ್ಥಾನದಿಂದ ಗೆಲುವು ಮುಂದುವರೆಸಿದರು. 2007 ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದುಕೊಂಡು ಸತತ ಮೂರನೇ ಬಾರಿ ಗೆಲುವು ಸಾಧಿಸಿದರು ಮತ್ತು ಧುಮಾಲ್ ಸರ್ಕಾರದಲ್ಲಿ ಪಂಚಾಯತ್ ರಾಜ್ ಸಚಿವರಾದರು. ಡಿ-ಲಿಮಿಟೇಶನ್ ನಂತರ 2012 ರಲ್ಲಿ ಸಿರಾಜ್‌ನಿಂದ ಸ್ಪರ್ಧಿಸಿದರು ಮತ್ತು ಕಾಂಗ್ರೆಸ್​ನ ತಾರಾ ಠಾಕೂರ್ ಅವರನ್ನು 5752 ಮತಗಳಿಂದ ಸೋಲಿಸಿದರು. 2017ರಲ್ಲಿ ಕಾಂಗ್ರೆಸ್ ನ ಚೇತ್ ರಾಮ್ ಅವರನ್ನು 11254 ಮತಗಳಿಂದ ಸೋಲಿಸಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾದರು.

ಐವರು ಒಡಹುಟ್ಟಿದವರ ಪೈಕಿ ಸಿಎಂ ಜೈರಾಮ್ ನಾಲ್ಕನೆಯವರು: ಜೈರಾಮ್ ಠಾಕೂರ್ ತಮ್ಮ ಒಡಹುಟ್ಟಿದವರ ಪೈಕಿ ನಾಲ್ಕನೆಯವರಾಗಿದ್ದಾರೆ. ಪೂರ್ಣು ದೇವಿ ಅವರ ಹಿರಿಯ ಸಹೋದರಿ. ಪೂರ್ಣು ದೇವಿ ನಂತರ ಸಹೋದರರಾದ ಅನಂತರಾಮ್ ಮತ್ತು ವೀರ್ ಸಿಂಗ್ ಇದ್ದಾರೆ. ಅನಂತರಾಮ್ ಫರ್ನಿಚರ್ ವ್ಯವಹಾರ ಮಾಡುತ್ತಿದ್ದು, ವೀರ್ ಸಿಂಗ್ ಗುತ್ತಿಗೆದಾರರಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಜೈರಾಮ್ ಠಾಕೂರ್ ಇದ್ದಾರೆ, ಅವರು ಈಗ ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಕಿರಿಯ ಸಹೋದರಿ ಅನು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರದು ಅತ್ಯಂತ ಸರಳ ಕುಟುಂಬ ಜೀವನವಾಗಿದೆ. ತಾಯಿ ಬ್ರಿಕ್ಮು ದೇವಿ ಮತ್ತು ಸಹೋದರಿ ಅನು ಪ್ರಕಾರ, ತಂದೆ ಜೇತುರಾಮ್ ತನ್ನ ಮಗ ಉನ್ನತ ಸ್ಥಾನಕ್ಕೇರಲಿ ಎಂದು ಬಯಸಿದ್ದರು. ಆದರೆ ಜೇತುರಾಮ್ 25 ಡಿಸೆಂಬರ್ 2017 ರಂದು ನಿಧನರಾದರು.

ಇದನ್ನೂ ಓದಿ: ಹಿಮಾಚಲದಲ್ಲಿ ಕಾಂಗ್ರೆಸ್​ ಮೇಲುಗೈ.. ಬಿಜೆಪಿಗೆ ಮುಳುವಾದ ಬಂಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.