ETV Bharat / bharat

ಅಂಗಡಿಯೊಂದರಲ್ಲಿ ಕುಳಿತಿದ್ದ ಯುವಕನ ಮೇಲೆ ಕಬ್ಬಿಣದ ರಾಡ್​​ನಿಂದ ಹಲ್ಲೆ.. ಭೀಕರ ವಿಡಿಯೋ ವೈರಲ್​!

author img

By

Published : May 2, 2022, 7:38 PM IST

ಅಂಗಡಿಯೊಂದರ ಮುಂದೆ ಕುಳಿತುಕೊಂಡಿದ್ದ ಯುವಕನೊಬ್ಬನ ಮೇಲೆ ಕೆಲ ದುಷ್ಕರ್ಮಿಗಳು ಕಬ್ಬಿಣದ ರಾಡ್​​ನಿಂದ ಹಲ್ಲೆ ನಡೆಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

GOONS ATTACKED ON YOUTH
GOONS ATTACKED ON YOUTH

ಯಮುನಾನಗರ(ಹರಿಯಾಣ): ಇತ್ತೀಚಿನ ದಿನಗಳಲ್ಲಿ ಹರಿಯಾಣದಲ್ಲೂ ಕೂಡ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತಿದ್ದು, ಹಾಡಹಗಲೇ ಕೊಲೆ, ಕೊಲೆ ಯತ್ನ, ದರೋಡೆಯಂತಹ ಘಟನೆಗಳು ನಡೆಯುತ್ತಿವೆ. ಇದೀಗ ಯಮುನಾನಗರದಲ್ಲಿ ನಡೆದಿರುವ ಘಟನೆವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಯುವಕನೋರ್ವನ ಮೇಲೆ ಕಬ್ಬಿಣದ ರಾಡ್​​ನಿಂದ ಕೆಲವರು ಹಲ್ಲೆ ನಡೆಸಿದ್ದಾರೆ.

ಯುವಕನ ಮೇಲೆ ಕಬ್ಬಿಣದ ರಾಡ್​​ನಿಂದ ಹಲ್ಲೆ

ಅಂಗಡಿವೊಂದರಲ್ಲಿ ಕುಳಿತಿದ್ದ ಯುವಕನ ಮೇಲೆ ಕೆಲ ದುಷ್ಕರ್ಮಿಗಳು ಕಬ್ಬಿಣದ ರಾಡ್​​ನಿಂದ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಯಮುನಾನಗರದ ಸಧೌರ್​ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವಕನೋರ್ವನ ಮೇಲೆ ಕೆಲವರು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿರುವ ವ್ಯಕ್ತಿ, ಕಿರುಚಾಡಿದ್ದಾನೆ. ಆದರೂ, ಯಾರೂ ಕೂಡ ಆತನ ಸಹಾಯಕ್ಕೆ ಬಂದಿಲ್ಲ. ಹಲ್ಲೆಗೊಳಗಾಗಿರುವ ಯುವಕನ ಕಾಲು, ಕೈ ಮುರಿದಿವೆ.

ಇದನ್ನೂ ಓದಿ: ನವಜಾತ ಶಿಶುವಿಗೆ ಕಚ್ಚಿದ 'ಇಲಿ'.. ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ

ಇತ್ತೀಚೆಗಷ್ಟೇ ಯಮುನಾನಗರದ ಜಗಧ್ರಿಯಲ್ಲೂ ಇಂತಹದ್ದೊಂದು ಘಟನೆ ನಡೆದಿತ್ತು. ತಮ್ಮ ಪತ್ನಿ ಜೊತೆ ಮಗುವನ್ನ ಕರೆದುಕೊಂಡು ಹೋಗಲು ಬಂದಿದ್ದ ವ್ಯಕ್ತಿಯೋರ್ವನ ಮೇಲೆ ನಾಲ್ಕೈದು ದುಷ್ಕರ್ಮಿಗಳು ದೊಣ್ಣೆಯಿಂದ ದಾಳಿ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.