ETV Bharat / bharat

ಇಂದು ಉತ್ತಮ ಆಡಳಿತ ದಿನ... ಏನು ಈ ದಿನದ ಮಹತ್ವ..?

author img

By ETV Bharat Karnataka Team

Published : Dec 25, 2023, 6:44 AM IST

Updated : Dec 25, 2023, 6:55 AM IST

ಉತ್ತಮ ಆಡಳಿತ ದಿನ: 47 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಉತ್ತಮ ಆಡಳಿತದ ದಿನವನ್ನಾಗಿ ಆಚರಿಸಲಾಗುತ್ತದೆ.

good-governance-day-2023-birth-anniversary-of-atal-bihari-vajpayee
ಇಂದು ಉತ್ತಮ ಆಡಳಿತ ದಿನ... ಏನು ಈ ದಿನದ ಮಹತ್ವ..?

ಹೈದರಾಬಾದ್: ಇಂದು ಮಾಜಿ ಪ್ರಧಾನಿ, ಬಿಜೆಪಿ ನೇತಾರ ಅಜಾತಶತ್ರು ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮ ದಿನ. ಅವರ ಹುಟ್ಟುಹಬ್ಬವನ್ನ ಸರ್ಕಾರ ಗುಡ್​ ಗವರ್ನನ್ಸ್​ ಡೇ ಎಂದು ಆಚರಿಸುತ್ತಾ ಬರುತ್ತಿದೆ. ಇಂತಹ ಮಹಾನ್​ ನೇತರಾ ಅಟಲ್​ ಬಿಹಾರ ವಾಜಪೇಯಿ 25 ಡಿಸೆಂಬರ್ 1924 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ಭಾರತದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಗೌರವಿಸಲು, ನರೇಂದ್ರ ಮೋದಿ ಸರ್ಕಾರವು ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಇ-ಆಡಳಿತದ ಘೋಷಣೆಯೊಂದಿಗೆ ದಿನದ ಆಚರಣೆ ಮಾಡಲಾಗುತ್ತಿದೆ. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 25 ಅನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ದಿನದ ನಿಮಿತ್ತ ಸರ್ಕಾರ ಮತ್ತು ಸರ್ಕಾರೇತರ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ತಮ ಆಡಳಿತದ ಮೂಲಕ ವಿವಿಧ ಸರ್ಕಾರಿ ಸೇವೆಗಳು ಮತ್ತು ಕಾರ್ಯಕ್ರಮಗಳಿಗೆ ಸಾರ್ವಜನಿಕ ಪ್ರವೇಶ ಖಚಿತಪಡಿಸುವುದು ಉತ್ತಮ ಆಡಳಿತ ದಿನದ ಮುಖ್ಯ ಉದ್ದೇಶವಾಗಿದೆ.

ಭಾರತದಲ್ಲಿ ಉತ್ತಮ ಆಡಳಿತದ ಸವಾಲುಗಳು:

  • ಮಹಿಳಾ ಸಬಲೀಕರಣ
  • ಭ್ರಷ್ಟಾಚಾರದ ಸಮಸ್ಯೆ
  • ತ್ವರಿತ ನ್ಯಾಯದ ಹಕ್ಕನ್ನು ಚಲಾಯಿಸುವಲ್ಲಿ ಇರುವ ಅಡಚಣೆ
  • ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ - ತ್ವರಿತ ನ್ಯಾಯದಾನದ ಕೊರತೆ
  • ಆಡಳಿತ ವ್ಯವಸ್ಥೆಯಲ್ಲಿನ ದೋಷ
  • ರಾಜಕೀಯದಲ್ಲಿ ಅಪರಾಧ ಪ್ರವೃತ್ತಿಯ ಜನರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು

ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂದ ಪ್ರಶಸ್ತಿಗಳ ಪಟ್ಟಿ:

1992: ಪದ್ಮವಿಭೂಷಣ, ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ

1993: ಕಾನ್ಪುರ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ

1994: ಲೋಕಮಾನ್ಯ ತಿಲಕ್ ಪ್ರಶಸ್ತಿ

1994: ಅತ್ಯುತ್ತಮ ಸಂಸದೀಯ ಪ್ರಶಸ್ತಿ

1994: ಭಾರತ ರತ್ನ ಪಂಡಿತ್ ಗೋವಿಂದ್ ವಲ್ಲಭ ಪಂತ್ ಪ್ರಶಸ್ತಿ

2015: ಭಾರತ ರತ್ನ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ

2015: ಬಾಂಗ್ಲಾದೇಶ ಮುಕ್ತಿಜುಧೋ ಸನ್ಮನೋನಾ (ಬಾಂಗ್ಲಾದೇಶ ವಿಮೋಚನಾ ಯುದ್ಧದ ಗೌರವ), ಬಾಂಗ್ಲಾದೇಶ ಸರ್ಕಾರವು ನೀಡುವ ಅತ್ಯುನ್ನತ ಪ್ರಶಸ್ತಿ

ಅಟಲ್ ಬಿಹಾರಿ ವಾಜಪೇಯಿ ಬಗೆಗಿನ ಕೆಲ ಇಂಟ್ರೆಸ್ಟಿಂಗ್ ಮಾಹಿತಿ: ಅಟಲ್ ಬಿಹಾರಿ ವಾಜಪೇಯಿ ಅವರು 25 ಡಿಸೆಂಬರ್ 1924 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕ್ರಿಸ್‌ಮಸ್ ದಿನದಂದು ಅವರ ಹುಟ್ಟುಹಬ್ಬ ಇರುವುದು ಕಾಕತಾಳೀಯ.

  1. ಅವರ ಜನಪ್ರಿಯತೆಯಿಂದಾಗಿ ಅವರನ್ನು ಜನಾನುರಾಗಿ ನಾಯಕ, ಅಜಾತಶತ್ರು ಎಂದು ಕರೆಯಲಾಗುತ್ತದೆ.
  2. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು 23 ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು.
  3. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ.
  4. ಉತ್ತರ ಪ್ರದೇಶ, ಮಧ್ಯಪ್ರದೇಶ, ನವದೆಹಲಿ ಮತ್ತು ಗುಜರಾತ್ - ನಾಲ್ಕು ರಾಜ್ಯಗಳ 6 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಹಿರಿಮೆ ಅವರದ್ದು
  5. 47 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದ ಹಿರಿಮೆ. 11 ಬಾರಿ ಲೋಕಸಭೆ ಹಾಗೂ 2 ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಕೆ.
  6. ದೇಶದ ಪ್ರಧಾನಿಯಾದ ಮೊದಲ ಬಿಜೆಪಿ ನಾಯಕ.
  7. ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಕೆ. 1996 ರಲ್ಲಿ 13 ದಿನಗಳ ಅವಧಿಗೆ ಪ್ರಧಾನಿಯಾಗಿ ಕಾರ್ಯನಿರ್ವಹಣೆ. 1998 ರಿಂದ 1999 ರವರೆಗಿನ 13 ತಿಂಗಳ ಅವಧಿಗೆ ಎರಡನೇ ಬಾರಿಗೆ ಪ್ರಧಾನಿ. ಮೂರನೇ ಮತ್ತು ಅಂತಿಮ ಅವಧಿಯಲ್ಲಿ 1999 ರಿಂದ 2004 ರವರೆಗೆ ಅವರು ದೇಶದ ಪ್ರಧಾನಿ ಆಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಸಾಧನೆ ಮಾಡಿದ್ದಾರೆ.
  8. ಅಟಲ್​​ಜೀ ಪ್ರಧಾನಿಯಾಗಿದ್ದ ಅವಧಿಯಲ್ಲಿ, 1998 ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿ ಪರಮಾಣು ಪರೀಕ್ಷೆ ನಡೆಸುವ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶನ. ಆಪರೇಷನ್ ಶಕ್ತಿ ಮೂಲಕ ಭಾರತದ ಶಕ್ತಿ ಪ್ರದರ್ಶನ
  9. ಅವಿವಾಹಿತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ. ಮದುವೆಯಾಗದೇ ಇರುವುದಕ್ಕೆ ಕಾರಣ ಕೇಳಿದಾಗ, 'ನಾನು ತುಂಬಾ ಬ್ಯುಸಿಯಾಗಿದ್ದು, ಮದುವೆಯಾಗುವುದನ್ನು ಮರೆತುಬಿಟ್ಟೆ ಎಂದಿದ್ದ ವಾಜಪೇಯಿ.
  10. ಅಟಲ್​ ಅವರಿಗೆ ಒಬ್ಬ ದತ್ತು ಪುತ್ರಿ ಇದ್ದಾರೆ, ಅವರ ಹೆಸರು ನಮಿತಾ ಭಟ್ಟಾಚಾರ್ಯ.
  11. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ವಾಜಪೇಯಿ ಅವರ ಧ್ವನಿ ಮತ್ತು ಕೈ ಚಲನೆ ಹದಗೆಟ್ಟಿತ್ತು.
  12. ಅಟಲ್ ಬಿಹಾರಿ ವಾಜಪೇಯಿ ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 16 ಆಗಸ್ಟ್ 2018 ರಂದು ನವದೆಹಲಿಯ AIIMS ನಲ್ಲಿ ಅಟಲ್​ಜೀ ನಿಧನರಾದರು.
  13. 10 ನೇ ತರಗತಿಯಲ್ಲಿದ್ದಾಗ ವಾಜಪೇಯಿ ಅವರು ಮೊದಲ ಬಾರಿಗೆ ಕವಿತೆ ರಚಿಸಿ ಗಮನ ಸೆಳೆದಿದ್ದರು.
  14. ಜಗಜಿತ್ ಸಿಂಗ್ ಅವರೊಂದಿಗೆ ತಮ್ಮ ಕವಿತೆಗಳನ್ನು ಒಳಗೊಂಡಿರುವ 2 ಆಲ್ಬಮ್‌ಗಳನ್ನು ಬಿಡುಗಡೆ ಮಾಡಿದರು: ನೈ ದಿಶಾ (1999) ಮತ್ತು ಸಂವೇದ (2002).
  15. ವಾಜಪೇಯಿ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ನಿಕಟ ಅನುಯಾಯಿಯಾಗಿದ್ದರು.
  16. ಇಂಡಿಯಾ ಶೈನಿಂಗ್​ ಕ್ಯಾಂಪೇನ್​​​ ಹಾಗೂ ಉತ್ತಮ ಆಡಳಿತ ನೀಡಿದಾಗಲೂ 2004 ರಲ್ಲಿ ನಡೆದ ಚುನಾವಣೆಯಲ್ಲಿ ವಾಜಪೇಯಿ ಸರ್ಕಾ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. ಹೀಗಾಗಿ ಅವರು 2005 ರ ಕೊನೆಯಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.
  17. ಡಿಸೆಂಬರ್ 2014 ರ ಅಂತ್ಯದಲ್ಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.
  18. ಭಾರತದ ಮಾಜಿ ಪ್ರಧಾನಿ, ಡಾ. ಮನಮೋಹನ್ ಸಿಂಗ್ ಒಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಸಂಬೋಧಿಸಿದ್ದರು.

ಇದನ್ನು ಓದಿ:ಉದ್ಯಮಿ​​ ಗೌತಮ್​ ಅದಾನಿ ಹೊಗಳಿದ ಶರದ್​ ಪವಾರ್​​; ಕಾರಣ ಇದು!

Last Updated : Dec 25, 2023, 6:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.