ETV Bharat / bharat

ಹೈದರಾಬಾದ್​ನಲ್ಲಿ ಏರ್‌ಕ್ರಾಫ್ಟ್ ಮ್ಯಾನೇಜ್‌ಮೆಂಟ್ ಎಂಜಿನಿಯರಿಂಗ್ ಕೋರ್ಸ್

author img

By ETV Bharat Karnataka Team

Published : Jan 18, 2024, 9:14 PM IST

GMR Introduced Aircraft Management Engineering (AME) Course: ಹೈದರಾಬಾದ್ ವಿಮಾನ ನಿಲ್ದಾಣದ ಆವರಣದಲ್ಲಿ ಏರ್‌ಕ್ರಾಫ್ಟ್ ಮ್ಯಾನೇಜ್‌ಮೆಂಟ್ ಎಂಜಿನಿಯರಿಂಗ್ ಕೋರ್ಸ್​ ಅನ್ನು ಜಿಎಂಆರ್ ಸ್ಕೂಲ್ ಆಫ್ ಏವಿಯೇಷನ್ ಸಂಸ್ಥೆ ಆರಂಭಿಸಲು ಸಜ್ಜಾಗಿದೆ.

GMR School of Aviation was established at Shamshabad Airport First in South Asia
ಹೈದರಾಬಾದ್​ನಲ್ಲಿ ಏರ್‌ಕ್ರಾಫ್ಟ್ ಮ್ಯಾನೇಜ್‌ಮೆಂಟ್ ಎಂಜಿನಿಯರಿಂಗ್ ಕೋರ್ಸ್

ಹೈದರಾಬಾದ್ (ತೆಲಂಗಾಣ): ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲದ ಹೆಚ್ಚುತ್ತಿರುವ ಅವಕಾಶಗಳನ್ನು ಪರಿಗಣಿಸಿ ಜಿಎಂಆರ್ ಸ್ಕೂಲ್ ಆಫ್ ಏವಿಯೇಷನ್ ಸಂಸ್ಥೆಯು ಏರ್‌ಕ್ರಾಫ್ಟ್ ಮ್ಯಾನೇಜ್‌ಮೆಂಟ್ ಎಂಜಿನಿಯರಿಂಗ್ (ಎಎಂಇ) ಕೋರ್ಸ್​ ಪರಿಚಯಿಸಿದೆ. ಇದಕ್ಕಾಗಿ ಹೈದರಾಬಾದ್​ ಸಮೀಪದ ಶಂಶಾಬಾದ್ ವಿಮಾನ ನಿಲ್ದಾಣದ ಆವರಣದಲ್ಲಿ ಏವಿಯೇಷನ್ ಸ್ಕೂಲ್​ ಸ್ಥಾಪಿಸಲಾಗಿದೆ.

ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಎಂಜಿನಿಯರಿಂಗ್ ಕೋರ್ಸ್​ ಜೂನ್‌ನಿಂದ ಆರಂಭವಾಗಲಿದೆ. ಇಂಟರ್ ಮೀಡಿಯೆಟ್​ (ಪಿಯುಸಿ)ನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಗಣಿತ, ಮತ್ತು ಭೌತಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕೋರ್ಸ್​ಗೆ ಪ್ರವೇಶ ಪಡೆಯಬಹುದು. ಇದರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ 200 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. TS-EAMSET (ತೆಲಂಗಾಣ ರಾಜ್ಯ ಎಂಜಿನಿಯರಿಂಗ್ ಕೃಷಿ ಮತ್ತು ವೈದ್ಯಕೀಯ ಸಾಮಾನ್ಯ ಪ್ರವೇಶ ಪರೀಕ್ಷೆ) ಮತ್ತು ಜೆಇಇ ಮೇನ್ಸ್‌ನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೂ ಪ್ರವೇಶ ಪಡೆಯಬಹುದು.

ಈ ಕೋರ್ಸ್‌ನಲ್ಲಿ ಉತ್ತೀರ್ಣರಾದವರಿಗೆ ದೇಶ ಮತ್ತು ವಿದೇಶಗಳಲ್ಲಿನ ನಾಗರಿಕ ವಿಮಾನಯಾನ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಸಿಗುತ್ತವೆ. ದಕ್ಷಿಣ ಏಷ್ಯಾದ ಮೊದಲ ಏವಿಯೇಷನ್ ಶಾಲೆ ಇದಾಗಿದೆ. ಎಎಂಇ ಕೋರ್ಸ್‌ನಲ್ಲಿ ಎರಡು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುವುದು. ಇನ್ನೂ ಎರಡು ವರ್ಷಗಳ ಪ್ರಾಯೋಗಿಕ ತರಬೇತಿ ಇರುತ್ತದೆ ಎಂದು ಜಿಎಂಆರ್ ಏರೋ ಟೆಕ್ ಅಕೌಂಟೆಬಲ್ ಮ್ಯಾನೇಜರ್ ಮತ್ತು ಸ್ಕೂಲ್​ನ ಉಪಾಧ್ಯಕ್ಷ ಅಶೋಕ್ ಗೋಪಿನಾಥ್ ತಿಳಿಸಿದ್ದಾರೆ.

ಎಲ್ಲ ತರಗತಿಗಳು ಮತ್ತು ಪರೀಕ್ಷೆಗಳು ಆನ್‌ಲೈನ್‌ನಲ್ಲಿವೆ. ಮೂರನೇ ವರ್ಷದಿಂದ ವಿಮಾನ ನಿರ್ವಹಣೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಏರ್‌ಕ್ರಾಫ್ಟ್ ಎಂಜಿನ್‌ಗಳು, ಕಾಕ್‌ಪಿಟ್‌ನಲ್ಲಿನ ಸುರಕ್ಷತಾ ವ್ಯವಸ್ಥೆಗಳು, ಟೈರ್‌ಗಳು ಮತ್ತು ರೆಕ್ಕೆಗಳು, ವಿಮಾನವು ಆಕಾಶದಲ್ಲಿದ್ದಾಗ ಅನಿರೀಕ್ಷಿತವಾಗಿ ಬಾಗಿಲು ತೆರೆದರೆ, ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳು, ವಿಮಾನವು ಹ್ಯಾಂಗರ್‌ಗೆ ಬಂದಾಗ ಎಂಜಿನ್ ಸೇರಿದಂತೆ ಭಾಗಗಳ ಸ್ಥಿತಿಯ ಮೌಲ್ಯಮಾಪನದಂತಹ ಪ್ರಮುಖ ವಿಷಯಗಳ ಬಗ್ಗೆ ತರಬೇತಿ ಇರುತ್ತದೆ ಎಂದು ಹೇಳಿದ್ದಾರೆ.

ನಾಲ್ಕನೇ ವರ್ಷದಲ್ಲಿ ವಿಮಾನದ ಭಾಗಗಳನ್ನು ವಿವಿಧ ಪ್ರದೇಶಗಳಲ್ಲಿ ಇರಿಸುವ ಮೂಲಕ ವಿಮಾನವನ್ನು ನಿರ್ಮಿಸುವ ಕಾರ್ಯವನ್ನೂ ವಹಿಸಲಾಗುತ್ತದೆ. ಇದಕ್ಕಾಗಿ ವಿಮಾನದಂತೆಯೇ ಸಿಮ್ಯುಲೇಟರ್ ವಿಮಾನವನ್ನು ಹ್ಯಾಂಗರ್‌ನಲ್ಲಿ ಇರಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ ಬೋಯಿಂಗ್-737, ಏರ್‌ಬಸ್-320 ಮತ್ತು 320ಎ ವಿಮಾನಗಳ ದುರಸ್ತಿ ಕುರಿತೂ ಮಾಹಿತಿ ನೀಡಲಾಗುವುದು ಎಂದು ವಿವರಿಸಿದ್ದಾರೆ.

ಈ ಕೋರ್ಸ್‌ಗೆ ನಾಗರಿಕ ವಿಮಾನಯಾನ ಸಂಸ್ಥೆ, ಯುರೋಪಿಯನ್ ಏವಿಯೇಷನ್ ​​ಸೇಫ್ಟಿ ಏಜೆನ್ಸಿ (YASA) ಅನುಮೋದನೆ ನೀಡಿದೆ. ಪ್ರವೇಶ ಪಡೆಯುವದ ವಿದ್ಯಾರ್ಥಿಗಳು ಡಿಜಿಸಿಎ ಮೌಲ್ಯಮಾಪನದ ಪ್ರಕಾರ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ (ಬಿ1) ಮತ್ತು ಯಾಸ ಮೌಲ್ಯಮಾಪನದ ಪ್ರಕಾರ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕೋರ್ಸ್ (ಬಿ2) ಅಧ್ಯಯನ ಮಾಡಬಹುದು ಮತ್ತು ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಎರಡೂ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು. ನಾಲ್ಕು ವರ್ಷಗಳ ಕೋರ್ಸ್ ನಂತರ ಪದವಿ ಮತ್ತು ವಾಯುಯಾನ ಸುರಕ್ಷತೆ ಪ್ರಮಾಣೀಕರಣ ಅಧಿಕಾರಿ ಎಂದು ಪರವಾನಗಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಿಂದ ಜರ್ಮನಿಯ ಫ್ರಾಂಕ್​ಫರ್ಟ್​ಗೆ ಲುಫ್ತಾನ್ಸ್​ ನೇರ ವಿಮಾನಯಾನ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.