ETV Bharat / bharat

ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ಯಾಂಗ್‌ಸ್ಟರ್ ಬಿಲ್ಲಾ ಆಸ್ಪತ್ರೆಯಿಂದ ಪರಾರಿ ​

author img

By

Published : Jul 15, 2023, 11:26 AM IST

ಪಂಜಾಬ್‌ನ ಫರೀದ್ಕೋಟ್​ನಲ್ಲಿರುವ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಂಬಿಹಾ ಗ್ಯಾಂಗ್‌ನ ದರೋಡೆಕೋರ ಸುರಿಂದರ್ ಪಾಲ್ ಸಿಂಗ್ ಅಲಿಯಾಸ್​ ಬಿಲ್ಲಾ ಶನಿವಾರ ಬೆಳಗ್ಗೆ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಇನ್ನೊಂದೆಡೆ, ಕುಖ್ಯಾತ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್ ಕೂಡ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

GANGSTER SURINDER BILLA
ಗ್ಯಾಂಗ್‌ಸ್ಟರ್ ಬಿಲ್ಲಾ ಎಸ್ಕೇಪ್​

ಫರೀದ್ಕೋಟ್ (ಪಂಜಾಬ್​) : ಬಂಬಿಹಾ ಗುಂಪಿಗೆ ಸೇರಿದ ದರೋಡೆಕೋರ ಸುರಿಂದರ್ ಪಾಲ್ ಸಿಂಗ್ ಅಲಿಯಾಸ್ ಬಿಲ್ಲಾ ಫರೀದ್‌ಕೋಟ್‌ನ ಆಸ್ಪತ್ರೆಯಿಂದ ಪೊಲೀಸರಿಗೆ ಸುಳಿವು ನೀಡದೆ ಪರಾರಿಯಾಗಿದ್ದಾನೆ. ಉದ್ಯಮಿಗಳಿಗೆ ಬೆದರಿಕೆ ಹಾಕಿ, ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎನ್‌ಕೌಂಟರ್ ನಡೆಸಿ ಆರೋಪಿಯನ್ನು ಬಂಧಿಸಿದ್ದರು.

ಪೊಲೀಸ್​ ಎನ್‌ಕೌಂಟರ್​ನಿಂದ ಗಾಯಗೊಂಡಿದ್ದ ಬಂಧಿತ ಗ್ಯಾಂಗ್‌ಸ್ಟರ್ ಬಿಲ್ಲಾ, ಬಿಗಿ ಭದ್ರತೆಯ ನಡುವೆಯೂ ಫರೀದ್‌ಕೋಟ್‌ನ ಜಿಜಿಎಸ್ ವೈದ್ಯಕೀಯ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಈತ ಬಾಂಬಿಹಾ ಗುಂಪಿನ ಸದಸ್ಯ. ಜುಲೈ 11 ರಂದು ಫರೀದ್‌ಕೋಟ್ ಪೊಲೀಸರು ಎನ್‌ಕೌಂಟರ್‌ ನಡೆಸಿ ಬಾಂಬಿಹಾ ಗುಂಪಿನ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದರು. ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಜಿಜಿಎಸ್ ವೈದ್ಯಕೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಆರೋಪಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ : ಯುಪಿಯಲ್ಲೀಗ ಗ್ಯಾಂಗ್‌ಸ್ಟರ್, ಮಾಫಿಯಾಗಳು ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಲು ಸಾಧ್ಯವಿಲ್ಲ- ಸಿಎಂ ಯೋಗಿ

ದರೋಡೆಕೋರ ಬಿಷ್ಣೋಯ್ ಜಿಜಿಎಸ್ ಆಸ್ಪತ್ರೆಗೆ ದಾಖಲು : ಇನ್ನೊಂದೆಡೆ, ಹೈ ಪ್ರೊಫೈಲ್ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೂಡ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರಣ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಆರೋಪಿ ಸುರೀಂದರ್ ಬಹಳ ಸುಲಭವಾಗಿ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಹಿನ್ನೆಲೆ ಇಂತಹ ಘಟನೆ ಮರುಕಳಿಸದಂತೆ ಹದ್ದಿನ ಕಣ್ಣಿಡಲಾಗಿದೆ.

ಮಾಹಿತಿಯ ಪ್ರಕಾರ, ಖಚಿತ ಮಾಹಿತಿ ಮೇರೆಗೆ ಕಳೆದ ಐದು ದಿನಗಳ ಹಿಂದೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಎ ಸಿಬ್ಬಂದಿ ಶಂಕಿತರ ಅಡಗು ತಾಣಗಳ ಮೇಲೆ ಎನ್‌ಕೌಂಟರ್ ನಡೆಸಿ ಬಿಲ್ಲಾನನ್ನು ಬಂಧಿಸಿದ್ದರು. ಈ ವೇಳೆ ದರೋಡೆಕೋರರು ಸಹ ಪೊಲೀಸರ ಮೇಲೆ ಗುಂಡಿನ ಪ್ರತಿದಾಳಿ ನಡೆಸಿದ್ದರು.

ಇದನ್ನೂ ಓದಿ : ಗ್ಯಾಂಗ್‌ಸ್ಟರ್ ಬಬ್ಲು ಬಂಧನ : ಪೊಲೀಸರು, ದರೋಡೆಕೋರರ ನಡುವೆ ಗುಂಡಿನ ಚಕಮಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.