ಗೇಮಿಂಗ್ ಆ್ಯಪ್ ಹಗರಣ: ಕೋಲ್ಕತ್ತಾ ಉದ್ಯಮಿ ಮನೆಯಲ್ಲಿ ಇಡಿಗೆ ಸಿಕ್ತು 17 ಕೋಟಿ ರೂಪಾಯಿ!

author img

By

Published : Sep 11, 2022, 9:00 AM IST

Gaming app scam

ಗೇಮಿಂಗ್ ಆ್ಯಪ್ ಹಗರಣದಲ್ಲಿ ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರ ಮನೆಯಲ್ಲಿ ತನಿಖೆ ಮುಂದುವರೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು 17.32 ಕೋಟಿ ರೂ. ನಗದು ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋಲ್ಕತ್ತಾ: ಮೊಬೈಲ್‌ ಗೇಮಿಂಗ್‌ ಆ್ಯಪ್‌ಗಳ ಕಮಿಷನ್‌ ಹಣದ ಅಕ್ರಮದ ಜಾಡು ಹಿಡಿದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡ ಶನಿವಾರ ಕೋಲ್ಕತಾದ 6 ಕಡೆಗಳಲ್ಲಿ ದಾಳಿ ನಡೆಸಿ 17 ಕೋಟಿ ರೂ. ನಗದು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕೋಲ್ಕತ್ತಾ ಮೂಲದ ಮೊಬೈಲ್ ಗೇಮಿಂಗ್ ಆ್ಯಪ್ ಕಂಪನಿಯೊಂದರ ಪ್ರವರ್ತಕರ ಉದ್ಯಮಿ ಅಮೀರ್ ಖಾನ್ ನಿವಾಸದ ಮೇಲೆ ಈ ದಾಳಿ ನಡೆದಿದೆ. ಇಲ್ಲಿಯವರೆಗೆ 17.32 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಎಣಿಕೆ ಕಾರ್ಯ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  • #WATCH | Kolkata, WB: Stacks of cash amounting to several crores have been recovered from the residence of businessman Nisar Khan during ED's raid ongoing for several hours pic.twitter.com/o2qXzNSmDR

    — ANI (@ANI) September 10, 2022 " class="align-text-top noRightClick twitterSection" data=" ">

ಚೀನಾ ಲೋನ್‌ ಆ್ಯಪ್‌ ನಂಟಿನ ಶಂಕೆ: ಜಾರಿ ನಿರ್ದೇಶನಾಲಯ 'ಇ-ನಗ್ಗೆಟ್ಸ್‌’ ಗೇಮಿಂಗ್‌ ಆ್ಯಪ್‌ ಹಾಗೂ ಅದರ ಪ್ರವರ್ತಕ ಉದ್ಯಮಿ ಆಮೀರ್‌ ಖಾನ್‌ ಅವರಿಗೆ ಸೇರಿದ 6 ಸ್ಥಳಗಳ ಮೇಲೆ ಶೋಧ ನಡೆಸುತ್ತಿದೆ. ಅಲ್ಲದೇ, ಆ್ಯಪ್‌ಗೆ ಚೀನಾ ಮೂಲದ ನಂಟಿನ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೆರೆಯಾದ ಚೀನಾ ಮೂಲದ 'ಸಾಲದ ಆ್ಯಪ್‌' ಆರೋಪಿಗಳಿಗೂ ಹಾಗೂ ಗೇಮಿಂಗ್‌ ಆ್ಯಪ್‌ಗೂ ಇರುವ ಸಂಬಂಧದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

ಆರಂಭದಲ್ಲಿ ಆ್ಯಪ್‌ ಬಳಕೆದಾರರರಿಗೆ ಠೇವಣಿ ಮೇಲೆ ಭಾರಿ ಕಮಿಷನ್‌ ನೀಡುವ ಆಮಿಷವೊಡ್ಡಿ ದೊಡ್ಡ ಮೊತ್ತದಲ್ಲಿ ಹಣ ಸಂಗ್ರಹಿಸಿ, ವಾಪಸ್‌ ನೀಡದೇ ವಂಚಿಸಲಾಗಿದೆ. ಈ ಬಗ್ಗೆ ಅನೇಕರಿಂದ ದೂರುಗಳು ಬಂದಿದ್ದು ಇಡಿ ತನಿಖೆಗೆ ಮುಂದಾಗಿದೆ.

ಫೆಡರಲ್‌ ಬ್ಯಾಂಕ್‌ ಅಧಿಕಾರಿಗಳು ಕೂಡಾ ಕೋಲ್ಕತಾ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಗೇಮಿಂಗ್‌ ಆ್ಯಪ್‌ಗಳ ಖಾತೆಯಲ್ಲಿನ ವ್ಯವಹಾರದಲ್ಲಿ ಸಾಕಷ್ಟು ಗೋಲ್‌ಮಾಲ್‌ ನಡೆದಿದೆ ಎಂದಿದ್ದರು. ಇವೆಲ್ಲವುಗಳನ್ನು ಆಧರಿಸಿ ಕೋಲ್ಕತಾ ಪೊಲೀಸರು 2021ರ ಫೆಬ್ರವರಿಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿದ್ದರು. ಉದ್ಯಮಿಯ ನಿವಾಸದ ಮೇಲೆ ಇಡಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಆನ್ಲೈನ್ ಗೇಮಿಂಗ್ ವಂಚನೆ: ಇಡಿ ದಾಳಿ: ಉದ್ಯಮಿ ಮನೆಯಲ್ಲಿ 7 ಕೋಟಿ ಪತ್ತೆ.. ಹಣ ಎಣಿಸಿ ಸುಸ್ತೋ ಸುಸ್ತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.